Advertisement

ಯೋಜನೆ- ಯೋಚನೆ ಅಖಂಡ ಭಾರತಕ್ಕಾಗಿ: ಉದಯವಾಣಿಯೊಂದಿಗೆ ಡಾ|ಡಿ. ವೀರೇಂದ್ರ ಹೆಗ್ಗಡೆ ಮಾತುಕತೆ

09:32 AM Jul 08, 2022 | Team Udayavani |

ಧರ್ಮಸ್ಥಳದಲ್ಲಿ ಅನ್ನದಾನ, ವಿದ್ಯಾದಾನ, ಅಭಯದಾನ ಮತ್ತು ಔಷಧಿದಾನ ಎಂಬ ಚತುರ್ವಿಧ ದಾನ ಪರಂಪರೆಯೊಂದಿಗೆ ಜಾತಿ-ಮತ ಬೇಧವಿಲ್ಲದೆ ಧರ್ಮಾಧಿಕಾರಿಗಳಾದ ಡಾ| ಡಿ. ವೀರೇಂದ್ರ ಹೆಗ್ಗಡೆಯವರು ಲೋಕಕಲ್ಯಾಣಕ್ಕಾಗಿ ಹಮ್ಮಿಕೊಂಡ ಬಹುಮುಖೀ ಸೇವಾಕಾರ್ಯಗಳನ್ನು ಪರಿಗಣಿಸಿ ಹೆಗ್ಗಡೆಯವರನ್ನು ರಾಜ್ಯ ಸಭೆಗೆ ನಾಮ ನಿರ್ದೇಶನ ಮಾಡಲಾಗಿದೆ. ದಕ್ಷಿಣ ಭಾರತದ ಶ್ರೇಷ್ಠ ಧಾರ್ಮಿಕ ನೆಲೆವೀಡಿನ ಧರ್ಮಾಧಿಕಾರಿಗಳಾದ ಪದ್ಮವಿಭೂಷಣ ಡಾ| ಡಿ. ವೀರೇಂದ್ರ ಹೆಗ್ಗಡೆ
ಯವರೊಂದಿಗೆ ಉದಯವಾಣಿಯ ವರದಿಗಾರ ಚೈತ್ರೇಶ್‌ ಇಳಂತಿಲ
ನಡೆಸಿದ ಸಂದರ್ಶನದ ಭಾಗ ಇಲ್ಲಿದೆ.

Advertisement

ರಾಜ್ಯ ಸಭೆಗೆ ನಾಮ ನಿರ್ದೇಶನಗೊಂಡಿ ದ್ದೀರಿ. ಇದು ರಾಜ್ಯಕ್ಕೂ, ಧಾರ್ಮಿಕ, ಗ್ರಾಮೀಣಾಭಿವೃದ್ಧಿ ಕ್ಷೇತ್ರಕ್ಕೂ ಸಂದ ಗೌರವ. ಏನನ್ನಿಸುತ್ತಿದೆ?

ಸೇವೆ ಎಂಬುದು ಎಲ್ಲ ಕ್ಷೇತ್ರಗಳಲ್ಲಿ ಸದಾ ನಡೆಯುತ್ತಿರುವಂಥದ್ದು, ಆದರೆ ನಾವು ಹೊಸ ವ್ಯಾಖ್ಯಾನ ಬರೆದಿದ್ದೇವೆ. ಕೆಲವು ವರ್ಷಗಳಲ್ಲಿ ಗ್ರಾಮೀಣಾಭಿ ವೃದ್ಧಿ, ಸ್ಯೋದ್ಯೋಗದಂಥ ತರಬೇತಿ ಜತೆಗೆ ಕ್ಷೇತ್ರದ ಮೂಲಕ ಅನೇಕ ಧಾರ್ಮಿಕ ಮತ್ತು ದಾನಾದಿ ಕಾರ್ಯಗಳಲ್ಲಿ ಪ್ರಯೋಗ ಮಾಡಿದ್ದೇವೆ. ಕೇವಲ ದಾನ ಕೊಡುವುದಲ್ಲ, ಅದು ಸಮರ್ಪಕವಾಗಿ ವಿನಿಯೋಗವಾಗಬೇಕು, ಅರ್ಹರಿಗೇ ಸಲ್ಲಬೇಕು ಎಂಬು ದರ ಕಡೆಗೆ  ಗಮನ ವಿರಿಸಿದ್ದೇವೆ. ಇವೆಲ್ಲವೂ ಮಾನ್ಯ ಪ್ರಧಾನ ಮಂತ್ರಿಗಳ ಗಮನಕ್ಕೂ ಬಂದಿದೆ ಎಂದು  ಅನಿಸುತ್ತಿದೆ. ಬಹುಶಃ ಅವೆಲ್ಲವನ್ನು ಪರಿಗಣಿಸಿ ಈ ಗೌರವ ನೀಡಿ ದ್ದಾರೆ ಎಂದು ತಿಳಿದುಕೊಂಡಿ ರುವೆ.

ಪ್ರಧಾನಿ ಮೋದಿ ಅವರು ವಿವಿಧ ಕ್ಷೇತ್ರದ ಸಾಧಕರ ಸಾಧನೆಗಳು ದೇಶದ ಬೆಳವಣಿಗೆಗೆ ಪೂರಕ ಎಂದು ಪ್ರಸ್ತಾವಿಸಿದ್ದಾರೆ. ದಿಸೆಯಲ್ಲಿ ನಿಮ್ಮನ್ನು ಗ್ರಾಮೀಣಾಭಿವೃದ್ಧಿ ಕ್ಷೇತ್ರದಿಂದ  ಆರಿಸಿರಬಹುದು. ಇದು ಇದುವರೆಗಿನ ಎಲ್ಲದಕ್ಕಿಂತ ದೊಡ್ಡ ಜವಾಬ್ದಾರಿ ಎನಿಸುತ್ತಿಲ್ಲವೇ?

ಖಂಡಿತವಾಗಿಯೂ… ಪ್ರಧಾನಿ ಮೋದಿಜೀ ಯವರು ಈ ಹಿಂದೆ ನಮ್ಮ ಕ್ಷೇತ್ರಕ್ಕೆ ಬಂದಾಗ ಗ್ರಾಮೀಣ ಜನತೆ ಎಲೆಕ್ಟ್ರಾನಿಕ್‌ ಮಾಧ್ಯಮ ಬಳಸಿ ಬ್ಯಾಂಕಿಂಗ್‌ ಮಾಡಬಹುದು ಇತ್ಯಾದಿ ಬಗ್ಗೆ ಗಮನಹರಿಸಿದ್ದರು. ಈಗ ನಾವೂ ಸರಕಾರದ ಯೋಜನೆಗಳನ್ನು ಜನತೆಗೆ ತಲುಪಿಸಲು ಕಾಮನ್‌ ಸರ್ವೀಸ್‌ ಸೆಂಟರ್‌ನ್ನು ತೆರೆಯಲು ಮುಂದಾಗಿ ದ್ದೇವೆ. ಈಗಾಗಲೆ 6,000 ಕೇಂದ್ರಗಳನ್ನು ತೆರೆದಿ ದ್ದೇವೆ. ಇನ್ನು 2 ತಿಂಗಳೊಳಗೆ 4,000 ಕೇಂದ್ರ ಗಳನ್ನು ಪೂರ್ಣಗೊಳಿಸಿದರೆ ರಾಜ್ಯದಲ್ಲಿ 10 ಸಾವಿರ ಕೇಂದ್ರಗಳಾಗುತ್ತವೆ. ಇದರಲ್ಲಿ ಕೇಂದ್ರ ಸರಕಾರದ ಇ-ಶ್ರಮ್‌, ಆಧಾರ್‌ ಕಾರ್ಡ್‌, ಆಯುಷ್ಮಾನ್‌, ಕೃಷಿ ವಿಮಾ ಸೇರಿದಂತೆ ಎಲ್ಲ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಬಹುದು.  ಈ ಪ್ರಕ್ರಿಯೆ ಚಾಲ್ತಿ ಯಲ್ಲಿದೆ. ಇಂತಹುದೇ ಮತ್ತೂಂದು ರೂಪದ ಹೊಣೆಗಾರಿಕೆ ಬರಬಹುದು. ಅದಕ್ಕಾಗಿ ನನ್ನ ಜವಾಬ್ದಾರಿ ನಿಭಾಯಿಸಲು ಸ್ವಲ್ಪ ಸಂಶೋಧನೆ ಕೈಗೊಳ್ಳಬೇಕಿದೆ ಎಂದುಕೊಂಡಿದ್ದೇನೆ.

Advertisement

ಧಾರ್ಮಿಕ ಹಾಗೂ ಗ್ರಾಮೀಣ ಸೇವೆಯಲ್ಲಿ ಹಲವು ವರ್ಷಗಳಿಂದ ನೀವು ಹಾಗೂ ನಿಮ್ಮ ಸಂಸ್ಥೆ ತೊಡಗಿಕೊಂಡಿದೆ. ಇಂಥ ಸಂದರ್ಭದಲ್ಲಿ ಈಗ ಸಿಕ್ಕಿರುವ ಶಾಸನಬದ್ಧ ಅಧಿಕಾರ ಮತ್ತು ವಿನೂತನ ಅವಕಾಶವನ್ನು ಯಾವ ರೀತಿ ಕಾಣುತ್ತೀರಿ?

ನಮ್ಮ ಕಾರ್ಯಕ್ಷೇತ್ರದಲ್ಲಿ ಇತಿಮಿತಿಗಳಿವೆ. ನಾವೇನಿದ್ದರೂ ಗ್ರಾಮೀಣಾಭಿವೃದ್ಧಿ ಸೇರಿದಂತೆ ನಮ್ಮ ಸಂಸ್ಥೆಯ ಸದಸ್ಯರಿಗೆ ಮಾತ್ರ ಕೆಲವು ಕಾರ್ಯಕ್ರಮಗಳು ಮತ್ತು ಸವಲತ್ತುಗಳನ್ನು ನೀಡುತ್ತಿದ್ದೆವು. ಮುಂದಿನ ದಿನಗಳಲ್ಲಿ ಸರಕಾರದ ಜತೆ ಕೈಜೋಡಿಸಿದಾಗ ಅದು ವಿಸ್ತಾರ ಗೊಂಡೀತು. ಉದಾಹರಣೆಗೆ: ನಮ್ಮ ದೇಶ ದಲ್ಲಿ 580ಕ್ಕೂ ಮಿಕ್ಕಿ ಸ್ಯೊದ್ಯೋಗ ತರಬೇತಿ ಕೇಂದ್ರಗಳಿವೆ. ಅವು ಗಳಲ್ಲಿ ಆರಂಭದಲ್ಲಿ ನಾವು ಕೆನರಾ, ಸಿಂಡಿಕೇಟ್‌ ಬ್ಯಾಂಕ್‌ ಜತೆ ಸೇರಿ ಪ್ರಾರಂಭಿಸಿದ್ದು ಕೇವಲ 20 ಕೇಂದ್ರ ಮಾತ್ರ, ಉಳಿದೆಲ್ಲವನ್ನೂ ಕೇಂದ್ರ ಸರಕಾರದ ಗ್ರಾಮೀಣಾಭಿವೃದ್ಧಿ ಇಲಾಖೆ ವತಿಯಿಂದ ಬ್ಯಾಂಕುಗಳು ನಡೆಸುತ್ತಿವೆ. ನಾವೇ ಆಗಿದ್ದಿದ್ದರೆ ಹೆಚ್ಚೆಂದರೆ 30ರಿಂದ 35 ಕೇಂದ್ರ ಸ್ಥಾಪಿಸಬಹುದಿತ್ತೇನೋ. ಆದರೆ ಸರಕಾರದ ಪಾಲುದಾರಿಕೆ ಬಂದುದರಿಂದ ದೇಶದ ಎಲ್ಲ ಜಿಲ್ಲೆಗಳಲ್ಲಿ ಒಂದರಂತೆ 580 ಕೇಂದ್ರ ತೆರೆಯಲು ಅವಕಾಶವಾಯಿತು. ಹಾಗೆ ಇಂಥ ಅನೇಕ ನಮ್ಮ ಕಾರ್ಯಕ್ರಮಗಳನ್ನು ದೇಶಕ್ಕೆ ವಿಸ್ತರಿಸಬಹುದು ಎಂದು ಅಂದುಕೊಂಡಿದ್ದೇನೆ.

ಗ್ರಾಮಾಭಿವೃದ್ಧಿ ಕಲ್ಪನೆಯಿಂದ ರಾಜ್ಯದಲ್ಲಿ ಪರಿವರ್ತನೆ ಸಾಧ್ಯವಾಗಿದೆ. ಇದನ್ನು ದೇಶಾದ್ಯಂತ ಕೊಂಡೊಯ್ಯಲು ಯಾವ ಆಲೋಚನೆಯಿದೆ?

ನಮ್ಮ ಉದ್ದೇಶ ಇರುವಂಥದ್ದು ಪ್ರಜೆಗಳು ಸರಕಾರದ ಯೋಜನೆಯ ಫಲವನ್ನು ಕಾಣಬೇಕು. ಆದರೆ ಅವರಿಗೆ ಮಾಹಿತಿಯೂ ಇರದು. ಹೆಚ್ಚು ಪರಿಚಯವೂ ಇರದು. ಹಾಗಾಗಿ ಇರುವಂತಹ ಕಾರ್ಯಕ್ರಮದ ಫಲವನ್ನು ಅವರಿಗೆ ಹೇಗೆ ತಲುಪಿಬಹುದೆಂದು ಯೋಚಿಸಿ ಕ್ರಿಯಾಶೀಲವಾಗುತ್ತೇನೆ. ಕೇವಲ ನಮ್ಮ ಜಿಲ್ಲೆಗೆ, ರಾಜ್ಯಕ್ಕೆ ಮಾತ್ರವಲ್ಲ. ಬೇರೆ ರಾಜ್ಯಗಳಿಗೂ ಇದರ ಪ್ರಯೋಜನವನ್ನು ಅಖಂಡವಾಗಿ ವಿಸ್ತರಿಸುವ ಬಗ್ಗೆ  ನನ್ನ ಚಿಂತನೆ ಇರಲಿದೆ ಎಂದು ಹೇಳಬಲ್ಲೆ.

ರಾಜ್ಯಸಭೆ ಒಂದು ಪ್ರಮುಖವಾದ ವೇದಿಕೆ. ಇದುವರೆಗೆ ನಿಮ್ಮ ಆಲೋಚನೆಗಳನ್ನು ನಿಮ್ಮ ಕಾರ್ಯಕ್ರಮಗಳ ಮೂಲಕ ಆಡಳಿತಗಾರರಿಗೆ ತಲುಪಿಸುತ್ತಿದ್ದಿರಿ. ಈಗ ನಿಮಗೇ ನೇರವಾಗಿ ಪ್ರಸ್ತಾವಿಸುವ ಅವಕಾಶ ಸಿಕ್ಕಿದೆ. ಯಾವ ರೀತಿ ಆಧುನಿಕ ಭಾರತವನ್ನು ಪ್ರಭಾವಿಸುತ್ತೀರಿ?

ನನಗಿನ್ನೂ ಇದು ಹೊಸ ಸಂಗತಿ. ಒಂದೆರಡು ಬಾರಿ ರಾಜ್ಯಸಭೆಯಲ್ಲಿ ಕುಳಿತು ಚಟುವಟಿಕೆಯನ್ನು ಗಮನಿಸಬೇಕಿದೆ. ನಾನು ಆಶ್ವಾಸನೆ ರೂಪದಲ್ಲಿ ಮೊದಲೇ ಏನನ್ನೂ ಹೇಳಲಾರೆ, ಹೇಳಿದರೆ ಅದು ಆತ್ಮ ಪ್ರಶಂಸೆಯಾಗಬಹುದು. ರಾಜಕಾರಣಿಯ ಮಾತಂತೆ ಎನಿಸಬಹುದು. ಹಾಗಾಗಿ ಒಂದು ತಿಂಗಳ ಕಾಲ ಸಮಾಲೋಚಿಸಿ, ಅಧ್ಯಯನ ಮಾಡಿ ಬಳಿಕ ಕಾರ್ಯಗತವಾಗಬಲ್ಲ ಚಿಂತನೆಗಳಿದ್ದರಷ್ಟೇ ಪ್ರಸ್ತಾವಿಸಿದರೆ ಸೂಕ್ತ ಎಂಬುದು ನನ್ನ ಧೋರಣೆ.

ದೇವರ ಸೇವೆಯಿಂದ ಬೆಳಗಿದ ನಿಮ್ಮ ಕೀರ್ತಿ ಪ್ರಸಕ್ತ ಅಧಿಕೃತವಾಗಿ ದೇಶಸೇವೆಯ ಭಾಗ್ಯ ಸಿಕ್ಕಿದೆ. ಹೇಗೆ ಭಾಗ್ಯವನ್ನು ವ್ಯಾಖ್ಯಾನಿಸುವಿರಿ?

ಧಾರ್ಮಿಕ ಸೇವೆ ಮತ್ತು ಜನತಾ ಸೇವೆಗಳೆರ ಡರಲ್ಲೂ ನನಗೆ ವ್ಯತ್ಯಾಸವಿಲ್ಲ. ನಾನು ಈಗ ಮಾಡಿರುವ ಸೇವೆ ಮತ್ತು ಮುಂದೆ ಮಾಡುವ ಸೇವೆಗಳೆರಡೂ ಒಂದೇ ಆಗಿದೆ.  ಆದರೆ ಅದರ ವಿಸ್ತಾರ ಎಷ್ಟರ ಮಟ್ಟಿಗಾಗಿದೆ ಎಂಬುದು ಪ್ರಾಮುಖ್ಯವನ್ನು ಪಡೆಯುತ್ತದೆ. ಈವರೆಗೆ ನಮ್ಮ ಚಿತ್ರವನ್ನು ಸಣ್ಣ ಕ್ಯಾನ್‌ವಾಸ್‌ನಲ್ಲಿ ಬರೆಯುತ್ತಿದ್ದೆವು, ಮುಂದೆ ದೊಡ್ಡ ಸ್ವರೂಪದಲ್ಲಿ ಬರೆಯಬಹುದು ಎನಿಸಿದೆ.

ಯುವಜನ ಇಂದು ಸಾಕಷ್ಟು ಗೊಂದಲದಲ್ಲಿದೆ. ಅವರನ್ನು ಪ್ರಭಾವಿಸಲು, ಸೂಕ್ತ ಮಾರ್ಗದರ್ಶನ ನೀಡಲು ಹಾಗೂ ಅವರಿಗೆ ಪೂರಕವಾಗುವಂಥ ನೀತಿ ನಿರೂಪಣೆಗಳನ್ನು ಮಾಡುವಲ್ಲಿ ಹೇಗೆ ಸಹಾಯಕವಾಗುತ್ತೀರಿ?

ಎಲ್ಲವನ್ನೂ ನಾವು ಮಾಡುತ್ತೇವೆ ಎಂಬುದು ಸೂಕ್ತವಲ್ಲ, ಈಗಾಗಲೇ ಗ್ರಾಮೀಣಾಭಿವೃದ್ಧಿ ಮತ್ತು ರುಡ್‌ ಸೆಟ್‌ ಮೂಲಕ ಪ್ರಯತ್ನಿಸುತ್ತಿದ್ದೇವೆ. ಅವುಗಳ ಉದಾಹರಣೆ ಮುಖೇನ  ಸರಕಾರದ ಗಮನಸೆಳೆದು ಇತರ ರಾಜ್ಯಗಳಿಗೂ ತಿಳಿಸಿ,  ಯುವಜನರನ್ನು ಸ್ಯೊದ್ಯೋಗದತ್ತ ಪ್ರೇರಣೆ ನೀಡುವ ಪ್ರಯತ್ನ ಖಂಡಿತಾ ಮಾಡುತ್ತೇವೆ.

ರಾಜ್ಯ ಸಭೆಗೆ ನಾಮನಿರ್ದೇಶನಗೊಂಡ ಬಳಿಕ ದೆಹಲಿಗೆ ಬರುವಂತೆ ಪ್ರಧಾನಿಗಳು ಆಮಂತ್ರಿಸಿದ್ದಾರೆಯೇ?

ಈ ಕುರಿತು ಈವರೆಗೆ ಅಧಿಕೃತ ಮಾಹಿತಿ ತಲುಪಿಲ್ಲ. ತಲುಪಿದರೆ ತಿಳಿಸಲಾಗುವುದು.

Advertisement

Udayavani is now on Telegram. Click here to join our channel and stay updated with the latest news.

Next