Advertisement

ಗ್ರಾಮರಾಜ್ಯದಿಂದ ರಾಮರಾಜ್ಯ ನಿರ್ಮಾಣದತ್ತ: ಡಾ|ಹೆಗ್ಗಡೆ

01:31 AM Jul 20, 2022 | Team Udayavani |

ಬೆಳ್ತಂಗಡಿ: ರಾಜ್ಯಸಭಾ ಸದಸ್ಯರಾಗಿ ನಾಮನಿರ್ದೇಶನ ಗೊಂಡ ಶ್ರೀ ಕ್ಷೇತ್ರ ಧರ್ಮಸ್ಥಳ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ಅವರನ್ನು ಮಂಗಳವಾರ ಧರ್ಮಸ್ಥಳದ ಬೀಡಿನಲ್ಲಿ (ಹೆಗ್ಗಡೆ ನಿವಾಸ) ಕಾರ್ಕಳ ವಿಧಾನ ಸಭಾಕ್ಷೇತ್ರದ ಜನತೆಯ ಪರವಾಗಿ ಸಚಿವ ಸುನಿಲ್‌ ಕುಮಾರ್‌ ಅಭಿನಂದಿಸಿದರು.

Advertisement

ಡಾ| ಹೆಗ್ಗಡೆಯವರು ಮಾತನಾಡಿ, ಕಾರ್ಕಳಕ್ಕೂ ಧರ್ಮಸ್ಥಳಕ್ಕೂ ಅವಿನಾ ಭಾವ ಸಂಬಂಧವಿದೆ. ಕಾರ್ಕಳದ ಮಂಗಳಪಾದೆಯಲ್ಲಿ ರೆಂಜಾಳ ಗೋಪಾಲ ಶೆಣೈ ಅವರಿಂದ ಬಾಹುಬಲಿ ಮೂರ್ತಿಯನ್ನು ರೂಪಿಸಿ ಧರ್ಮಸ್ಥಳಕ್ಕೆ ತಂದು ಪ್ರತಿಷ್ಠೆ ಮಾಡಲಾಗಿದೆ ಎಂದರು.
ಸಚಿವ ಸುನಿಲ್‌ ಕುಮಾರ್‌ ಅವರ ಸಮಾಜ ಸೇವೆಯನ್ನು ಶ್ಲಾಘಿಸಿ ಅವರಿಗೆ ಉಜ್ವಲ ಭವಿಷ್ಯವನ್ನು ಹಾರೈಸಿದರು.

ಸಚಿವರೊಂದಿಗೆ ಕಾರ್ಕಳದಿಂದ ಸುಮಾರು 300 ಮಂದಿ ಅಭಿಮಾನಿಗಳು ಬಂದು ಗೌರವ ಸಲ್ಲಿಸಿದರು.

ಪುರಸಭಾ ಅಧ್ಯಕ್ಷೆ ಸುಮಾ ಕೇಶವ್‌, ಉಪಾಧ್ಯಕ್ಷೆ ಪಲ್ಲವಿ ಪ್ರವೀಣ್‌, ಬಿಜೆಪಿ ಕ್ಷೇತ್ರಾಧ್ಯಕ್ಷ ಮಹಾವೀರ ಹೆಗ್ಡೆ, ಜಿಲ್ಲಾ ಕಾರ್ಯದರ್ಶಿ ರವೀಂದ್ರ ಕುಮಾರ್‌, ಡಿಸಿಸಿ ಬ್ಯಾಂಕ್‌ ನಿರ್ದೇಶಕ ಭಾಸ್ಕರ ಎಸ್‌. ಕೋಟ್ಯಾನ್‌, ಜಿ.ಪಂ. ಮಾಜಿ ಸದಸ್ಯ ಉದಯ ಎಸ್‌. ಕೋಟ್ಯಾನ್‌, ಹೆಬ್ರಿ ತಾ.ಪಂ. ಮಾಜಿ ಅಧ್ಯಕ್ಷ ರಮೇಶ್‌ ಶಿವಪುರ, ಮಹಿಳಾ ಮೋರ್ಚಾ ಅಧ್ಯಕ್ಷೆ ಮಾಲಿನಿ ಜೆ. ಶೆಟ್ಟಿ, ಯುವ ಮೋರ್ಚಾ ತಾಲೂಕು ಅಧ್ಯಕ್ಷ ಸುಹಾಸ್‌ ಮುಟ್ಲುಪ್ಪಾಡಿ, ಉದ್ಯಮಿ ಶರತ್‌ ಹೆಗ್ಡೆ ಉಪಸ್ಥಿತರಿದ್ದರು.

 

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next