ಬೆಂಗಳೂರು : ವೀರಶೈವ ಲಿಂಗಾಯಿತ ಸಂಘಟನಾ ವೇದಿಕೆಯವತಿಯಿಂದ ರವಿವಾರ ಬೆಂಗಳೂರಿನ ಪ್ರದಾನಕೇಂದ್ರ ಕಚೇರಿಯಲ್ಲಿ ನಡೆದ ವಿವಿಧ ಕ್ಷೇತ್ರದಲ್ಲಿ ಸೇವೆಯನ್ನು ಸಲ್ಲಿಸಿರುವ ಮಹನೀಯರಿಗೆ ಸನ್ಮಾನವನ್ನು ನೀಡಿ ಗೌರವಿಸಲಾಯಿತು.
ಸಮಾರಂಭದ ಸಾನಿದ್ಯವನ್ನು ಹುಕ್ಕೇರಿ ಹಿರೇಮಠದ ಷ ಬ್ರ ಶ್ರೀ ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳವರು ವಹಿಸಿದ್ದರು. ರಾಷ್ಟ್ರೀಯ ಅಧ್ಯಕ್ಷರಾದ ಪ್ರದೀಪ್ ಕಂಕಣವಾಡಿ ಅಧ್ಯಕ್ಷತೆ ವಹಿಸಿದ್ದರು.
ಕನ್ನಡ ಅಭಿವೃದ್ಧಿ ಪ್ರಾಧಿಕಾರದ ನಾಮನಿರ್ದೇಶಿತ ಸದಸ್ಯೆ ಶ್ರೀಮತಿ ಡಾ ವಿಜಯಲಕ್ಷ್ಮೀ ಬಾಳೆಕುಂದ್ರಿಯವರನ್ನು ವೇದಿಕೆಯ ವತಿಯಿಂದ ಸತ್ಕರಿಸಲಾಯಿತು.
ಬೆಂಗಳೂರಿನ ನ್ಯಾಷನಲ್ ವರ್ಚುವಲ್ ಯುನಿವರ್ಸಿಟಿಯಿಂದ ಗೌರವ ಡಾಕ್ಟರೇಟ್ ಪಡೆದ ಶ್ರೀ ವಿದ್ವಾನ್ ಡಾ. ಮಹಾಂತೇಶ ಶಾಸ್ತ್ರಿಗಳು ತುರಮರಿ ಹಾಗೂ ಶ್ರೀ ವೇದಮೂರ್ತಿ ವಿದ್ವಾನ್ ಡಾ. ಗಂಗಾಧರಯ್ಯಸ್ವಾಮಿ ಅಮರೇಶ್ವರ ಇವರಿಗೆ ಗೌರವ ಸನ್ಮಾನ ನೀಡಲಾಯಿತು. ಈ ಕಾರ್ಯಕ್ರಮದಲ್ಲಿ ನಾಡಿನ ವೀರಶೈವ ಲಿಂಗಾಯತ ಸಂಘಟನಾ ವೇದಿಕೆಯ ಸರ್ವಸದಸ್ಯರು ಸೇರಿದಂತೆ
ಕರ್ನಾಟಕ ರಾಜ್ಯ ವಾಹನ ಮಾಲೀಕರ ಹಾಗೂ ಕಾರ್ಮಿಕರ ಘಟಕದ ರಾಜ್ಯಾಧ್ಯಕ್ಷರಾದ ಶ್ರೀ ರವಿಕುಮಾರ, ಮಹಿಳಾ ಘಟಕದ ರಾಜ್ಯ ಉಪಾಧ್ಯಕ್ಷರಾದ ಶ್ರೀಮತಿ ಗಂಗಾ ಶಿರಗುಪ್ಪಿ, ಬೆಂಗಳೂರು ನಗರ ಮಹಿಳಾ ಘಟಕದ ಉಪಾಧ್ಯಕ್ಷರಾದ ಶ್ರೀಮತಿ. ಪ್ರೇಮಾ ಶೆಟ್ಟರ, ಉಮಾ, ಪುಷ್ಪಾವತಿ ಮತ್ತಿತರರು ಉಪಸ್ಥಿತರಿದ್ದರು.