ಕುಷ್ಟಗಿ: ಕನ್ನಡದ ವಿಧ್ಯಾರ್ಥಿಗಳು ಕನ್ನಡದಲ್ಲೇ ಇಂಜಿನಿಯರಿಂಗ್ ಶಿಕ್ಷಣ ವೃತ್ತಿ ಶಿಕ್ಷಣಕ್ಕೆ ನಮ್ಮ ವಿದ್ಯಾರ್ಥಿಗಳ ನಿರಾಸಕ್ತಿ ಇಲ್ಲ, ಖಾಸಗಿ ಇಂಗ್ಲೀಷ್ ಶಾಲೆ ನಡೆಸುವವರಿಂದ ಅಪಪ್ರಚಾರ ಕಾರಣವಾಗಿದೆ ಎಂದು ಹನುಮಸಾಗರ ಜಿಲ್ಲಾ ಸಮ್ಮೇಳನದ ಸರ್ವಾಧ್ಯಕ್ಷ, ಸೈಬರ್ ತಜ್ಞ ಡಾ. ಉದಯಶಂಕರ್ ಪುರಾಣಿಕ ಅಭಿಪ್ರಾಯಪಟ್ಟರು.
ತಾಲೂಕಿನ ಹನುಮಸಾಗರದಲ್ಲಿ ಮಾ.5ರಿಂದ ಎರಡು ದಿನ ನಡೆಯುವ ಕನ್ನಡ ಸಾಹಿತ್ಯ ಪರಿಷತ್ತಿನ 12ನೇ ಸಾಹಿತ್ಯ ಸಮ್ಮೇಳನದ ನುಡಿಹಬ್ಬದ ಸಾರಥ್ಯ ವಹಿಸಿರುವ ಅವರು, ಕುಷ್ಟಗಿ ಸರ್ಕ್ಯೂಟ್ ಹೌಸ್ ನಲ್ಲಿ ಉದಯವಾಣಿಯೊಂದಿಗೆ ಮಾತನಾಡಿದರು.
ಕನ್ನಡದಲ್ಲಿ ಇಂಜಿನಿಯರಿಂಗ್, ಡಿಪ್ಲೋಮಾ ಕಲಿತವರಿಗೆ ಉದ್ಯೋಗದಲ್ಲಿ ಕನಿಷ್ಟ ಶೇ.25 ರಷ್ಟು ಮೀಸಲು ಆದ್ಯತೆಯಿಂದ ಒಂದೇ ಒಂದು ಘೋಷಣೆ ಮಾಡಿದರೆ ಸಾಕು ಬಹುತೇಕ ವಿದ್ಯಾರ್ಥಿಗಳು ಕನ್ನಡದಲ್ಲಿ ಇಂಜಿನಿಯರಿಂಗ್ ಕಲಿಕೆಯಲ್ಲಿ ಮುಂದೆ ಬರುತ್ತಾರೆ. ಕನ್ನಡವನ್ನು ಈ ರೀತಿಯಾಗಿಯೂ ಬೆಳೆಸಬಹುದು ಇಲ್ಲವಾದರೆ ನೀವೇನಾದರೂ ಮಾಡಿಕೊಳ್ಳಿ ತಾಲೂಕಿಗೆ ವಿಶ್ವವಿದ್ಯಾಲಯ ಕೊಡುತ್ತೇವೆ ಎಂದರೆ ಕನ್ನಡ ಬೆಳೆಯುವುದಿಲ್ಲ ಎಂದರು.
ಇಡೀ ದೇಶದಲ್ಲಿ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳು ಶೇ.35 ಇಂಗ್ಲೀಷ್ ಮಾದ್ಯಮದಲ್ಲಿ ಪರೀಕ್ಷೆ ಬರೆದರೆ ಶೇ.65ರಷ್ಟು ಇತರೇ ಭಾಷೆಗಳಲ್ಲಿ ಪರೀಕ್ಷೆ ಬರೆಯುತ್ತಾರೆ. ಇಂಗ್ಲೀಷ ಬಾರದೇ ಹೋದರೆ ಇಂಜಿನಿಯರಿಂಗ್ ಕಲಿಯುವುದು ಬೇಡ, ಬಹಳ ಕಷ್ಟಕರವೆನ್ನುವ ಅಪ್ರಚಾರವೇ ಜಾಸ್ತಿಯಾಗಿದೆ. ನಾವೇ ಒಂದು ರೀತಿಯ ಅಸ್ಪೃಷ್ಯತೆ ತಂದು ಕೊಂಡಿದ್ದು, ಇತರೇ ಭಾಷೆಗಳಲ್ಲಿ ಕಲಿಯುವ ಶೇ.65 ರಷ್ಟು ವಿದ್ಯಾರ್ಥಿಗಳು ಯಾಕೆ ಇಂಜಿನಿಯರಿಂಗ್ ಕಲಿಯಬಾರದು ಎಂದರು.
ರಷ್ಯಾ, ಜಪಾನ್, ಚೀನಾ ಮೊದಲಾದ ಬಹುತೇಕ ದೇಶಗಳಲ್ಲಿ ಅವರದೇ ಸ್ಥಳೀಯ ಭಾಷೆಯಲ್ಲಿ ಕಲಿಯುತ್ತಿದ್ದು ನಮ್ಮ ದೇಶದಲ್ಲಿ ಶೇ.65 ರಷ್ಟು ವಿಧ್ಯಾರ್ಥಿಗಳನ್ನು ದೂರವಿಟ್ಟಿರುವುದು ಯಾಕೆ? ಮೆಡಿಕಲ್ ಇಂಗ್ಲೀಷನಲ್ಲಿ ಕಲಿತರೂ, ರೋಗಿಗಳೊಂದಿಗೆ ಮಾತನಾಡುವ ಸಂವಹನ ಭಾಷೆ ಯಾವೂದು? ಎಂದು ಪ್ರಶ್ನಿಸಿದರು. ಬರೀ ಬ್ಯಾಂಕಿನಲ್ಲಿ ಮಾತ್ರ ಕನ್ನಡ ಬಾರದವರಿದ್ದಾರೆ ಅಲ್ಲಿ ತೆಲಗು, ಹಿಂದಿ ಮಾತನಾಡುತ್ತಾರೆ ಎಂದು ನಾವುಗಳು ಪ್ರಶ್ನಿಸುವುದಾದರೆ ಲೋಕೋಪಯೋಗಿ ಇಲಾಖೆಯಲ್ಲಿ ಕನ್ನಡ ಬಲ್ಲ ಇಂಜಿನಿಯರಿಂಗ್ ಬೇಕು, ಆಸ್ಪತ್ರೆಯಲ್ಲಿ ಕನ್ನಡ ಬಲ್ಲ ವೈದ್ಯರೇ ಬೇಕೆಂದು ಪಟ್ಟು ಯಾಕೆ ಹಿಡಿಯುವುದಿಲ್ಲ ಎಂದರು. ಈ ರೀತಿಯ ಅಸ್ಪೃಷ್ಯತೆಯ ಬಗ್ಗೆ ಬೇಸರವಿದ್ದು, ಶೇ. 65 ರಷ್ಟು ಜನರನ್ನು ದೂರವಿಟ್ಟಿರುವುದಾದರೂ ಯಾಕೆ? ಪ್ರಶ್ನಿಸಿದರು.
ಕನ್ನಡದಲ್ಲಿ ಇಂಜಿನೀಯರಿಂಗ್ ಯಾಕೆ ಬೇಡ?:
ಇಂತವರಿಗೆ ಪರ್ಯಾಯ ಉದ್ಯೋಗವೇನು ಕೊಟ್ಟಿಲ್ಲ. ಭಾಷೆ ಎನ್ನುವುದು ದೊಡ್ಡ ವಿಷಯವೇ ಅಲ್ಲ ಚೀನಾ, ಪ್ರೆಂಚ ಇತ್ಯಾಧಿ ಯಾವೂದೇ ಹತ್ತು ಭಾಷೆ ಬಳಸಬಹುದಾಗಿದ್ದ ಇಂಗ್ಲೀಷನ್ನೇ ಬಳಸಬೇನ್ನುವುದು ಖಾಸಗಿವಲಯದ ಲಾಭಿಯಾಗಿದೆ ಎಂದರು.
ಇಂಗ್ಲೀಷ ಕಲಿಯದಿದ್ದರೆ ಭವಿಷ್ಯ ಇಲ್ಲ, ವಿದೇಶಕ್ಕೆ ಹೋಗಲು ಸಾಧ್ಯವಿಲ್ಲ ಎಂದು ಹೇಳುತಿದ್ದು, ಅಮೆರಿಕಾದಲ್ಲಿ ಎಷ್ಟು ಜನ ಚೀನಾದವರು ಕಲಿಯುತ್ತಿದ್ದು ಅವರು ಅವರದೇ ಭಾಷೆಯಲ್ಲಿ ಓದ ಬಹುದು ನಾವು ಕನ್ನಡದಲ್ಲಿ ಓದಬಾರದೇ? ಎಂದರು.
ಇಂಗ್ಲೀಷ ಕಲಿಸಬೇಡಿ ಎಂದು ಹೇಳುವುದಿಲ್ಲ ಮಾತೃ ಭಾಷೆಯಲ್ಲಿ ಶಿಕ್ಷಣ ಕೊಡಿ ಎನ್ನುವುದು ರಾಷ್ಟ್ರೀಯ ಶಿಕ್ಷಣ ನೀತಿಯಾಗಿದೆ ಎಂದರು. ಮಾತೃ ಭಾಷೆಯಲ್ಲಿ ಶಿಕ್ಷಣ ಬೇಕು ಎನ್ನುವುದಾದರೆ ಕನ್ನಡದಲ್ಲಿ ಇಂಜಿನೀಯರಿಂಗ್ ಯಾಕೆ ಬೇಡ? ಅದು ಹೇಗೆ ಸಾಧ್ಯ ಎಂದರು.
– ಮಂಜುನಾಥ ಮಹಾಲಿಂಗಪುರ ಕುಷ್ಟಗಿ