Advertisement

ಡಾ|ಟಿಎಂಎ ಪೈ “ಭಾರತರತ್ನ’ಕ್ಕೆ ಅರ್ಹ

12:51 AM Nov 18, 2021 | Team Udayavani |

ಉಡುಪಿ: ಕಿತ್ತಳೆಹಣ್ಣು ಮಾರಿ ಸರಕಾರಿ ಶಾಲೆಯನ್ನು ಕಟ್ಟಿ ಬೆಳೆಸಿದ ಪದ್ಮಶ್ರೀ ಪುರಷ್ಕೃತ ಅಕ್ಷರ ಸಂತ ಹರೇಕಳ ಹಾಜಬ್ಬ ಅವರಿಗೆ ಎಂಜಿಎಂ ಕಾಲೇಜು ಹಾಗೂ ಜಿಲ್ಲಾಡಳಿತ ವತಿಯಿಂದ ಬುಧವಾರ ಸಮ್ಮಾನ ಮಾಡಲಾಯಿತು.

Advertisement

ಎಂಜಿಎಂ ಕಾಲೇಜು, ಎನ್‌ಎಸ್‌ಎಸ್‌ಘಟಕ, ಮಹಾತ್ಮಾಗಾಂಧಿ ರೋವರ್ ಘಟಕ, ಕಸ್ತೂರ್ಬಾ ರೇಂಜರ್ ಘಟಕದಿಂದಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ಹಮ್ಮಿಕೊಂಡಿದ್ದ “ಆರೇಂಜ್‌ ಈಸ್‌ ನಾಟ್‌ಜೆಸ್ಟ್‌ ಎ ಫ್ರೂಟ್ ‘ ಅಭಿನಂದನ ಸಮಾರಂಭದಲ್ಲಿ ಹರೇಕಳ ಹಾಜಬ್ಬ ಅವರನ್ನು ಸಮ್ಮಾನಿಸಲಾಯಿತು. ಆನಂತರ ವಿದ್ಯಾರ್ಥಿಗಳು ಅವರೊಂದಿಗೆ ಸಂವಾದ ನಡೆಸಿದರು.

ಕರ್ನಾಟಕ ಲೋಕಾಯುಕ್ತ ನ್ಯಾ| ಪಿ.ವಿಶ್ವನಾಥ ಶೆಟ್ಟಿ ಮಾತನಾಡಿ, ದೂರದೃಷ್ಟಿಯೊಂದಿಗೆ ಶಿಕ್ಷಣ ಕ್ಷೇತ್ರದಲ್ಲಿ ಅತ್ಯುನ್ನತ ಸಾಧನೆ ಮಾಡಿರುವ ಡಾ| ಟಿ.ಎಂ.ಎ. ಪೈ ಅವರಿಗೆ ಕೇಂದ್ರ ಸರಕಾರ ಭಾರತರತ್ನ (ಮರಣೋತ್ತರ) ನೀಡಿ ಗೌರವಿಸಬೇಕು. ಅವರಿಗೆ ಈಗಾಗಲೇ ಪದ್ಮಶ್ರೀ ಬಂದಿದ್ದರೂ, ಭಾರತರತ್ನ ಪಡೆಯಲೂ ಅರ್ಹರು ಎಂದು ಅಭಿಮತ ವ್ಯಕ್ತಪಡಿಸಿದರು.

ಡಾ| ಟಿಎಂಎ ಪೈ ಅವರು ಶೈಕ್ಷಣಿಕ ಕ್ಷೇತ್ರ ಸಾಧನೆ ಹಾಗೂ ಈ ವಿಷಯವಾಗಿ ಅವರಿಗೆ ಇದ್ದ ಮುಂದಾಲೋಚನೆಯ ಫ‌ಲ ಮತ್ತು ಜ್ಞಾನದಿಂದ ಉಡುಪಿ, ಮಣಿಪಾಲ, ಕುಂದಾಪುರ, ಮೂಲ್ಕಿ, ಕಾರ್ಕಳ ಹೀಗೆ ಹಲವು ಭಾಗಗಳಲ್ಲಿ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿ, ಅನೇಕರ ಜ್ಞಾನಾರ್ಜನೆಗೆ ಸಹಾಯವಾಗಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ಹರೇಕಳ ಹಾಜಬ್ಬರು ಕಿತ್ತಳೆಹಣ್ಣು ಮಾರಿ ಶಿಕ್ಷಣ ಕ್ಷೇತ್ರಕ್ಕೆ ಕೊಡುಗೆ ನೀಡುವ ಮೂಲಕ ಎಲ್ಲರಿಗೂ ಪ್ರೇರಣೆಯಾಗಿದ್ದಾರೆ ಎಂದು ಹೇಳಿದರು.

ಇದನ್ನೂ ಓದಿ:ಡಿಸೆಂಬರ್ ಅಂತ್ಯದೊಳಗೆ ಸ್ಥಳೀಯ ಸಂಸ್ಥೆ ಚುನಾವಣೆ ನಡೆಸುವಂತೆ ಹೈಕೋರ್ಟ್​ ನಿರ್ದೇಶನ

Advertisement

ಸಮಾಜದ ಕಳಕಳಿಯೂ ಬೇಕು
ಶಿಕ್ಷಣದಿಂದ ಸಮಾಜದಲ್ಲಿ ಪರಿವರ್ತನೆ ತರಲು ಸಾಧ್ಯವಿದೆ. ಶಿಕ್ಷಣ ಪಡೆದವರಿಗೆ ಉದ್ಯೋಗಾವಕಾಶ ಕಲ್ಪಿಸುವುದು ಸರಕಾರಗಳ ಕರ್ತವ್ಯವಾಗಿದೆ. ಜನತೆಯ ಉತ್ತಮ ಆರೋಗ್ಯಕ್ಕೂ ಸಹಕಾರ ನೀಡ ಬೇಕು. ಇಲ್ಲಿ ಸಮಾಜದ ಕಳಕಳಿಯೂ ಮುಖ್ಯವಾಗಿದೆ ಎಂದು ಹೇಳಿದರು.

ಜಿಲ್ಲಾಧಿಕಾರಿ ಕೂರ್ಮಾ ರಾವ್‌ ಮಾತನಾಡಿ, ಹಾಜಬ್ಬರು ಕಂಡಂಥ‌ ಕನಸನ್ನು ಎಲ್ಲರ ಪಾಲ್ಗೊಳ್ಳುವಿಕೆಯ ಮೂಲಕ ನನಸು ಮಾಡುತ್ತಿದ್ದಾರೆ. ಅವರ ಸಾಧನೆ ಎಲ್ಲರಿಗೂ ಸ್ಫೂರ್ತಿ ಮತ್ತು ಪ್ರೇರಣೆಯಾಗಿದೆ ಎಂದು ಹೇಳಿದರು.

ಪದವಿ ಕಾಲೇಜಿನ ಪ್ರಾಂಶುಪಾಲ ಡಾ| ದೇವಿದಾಸ್‌ ನಾಯ್ಕ್ , ಪಿಯು ಕಾಲೇಜಿನ ಮಾಲತಿದೇವಿ ಉಪಸ್ಥಿತರಿದ್ದರು. ಡಾ| ಗೋವಿಂದ ಪೈ ಸಂಶೋಧನ ಸಂಸ್ಥೆಯಿಂದ ಆಡಳಿತಾಧಿಕಾರಿ ಡಾ| ಜಗದೀಶ ಶೆಟ್ಟಿ ಅವರು ಸಮ್ಮಾನಿಸಿದರು.

ಎನ್‌ಎಸ್‌ಎಸ್‌ ಯೋಜನಾಧಿಕಾರಿ ಸುಚಿತ್‌ ಕೋಟ್ಯಾನ್‌ ಕಾರ್ಯಕ್ರಮ ನಿರೂಪಿಸಿದರು. ರೋವರ್‌ ಸ್ಕೌಟ್‌ ಲೀಡರ್‌ ಅವಿನಾಶ್‌ ಆಚಾರ್ಯ ವಂದಿಸಿದರು.

ವಿ.ವಿ. ಪಠ್ಯವಾಗಿರುವುದೇ ಹೆಮ್ಮೆ: ಹಾಜಬ್ಬ
ಅಕ್ಷರವೇ ಕಲಿಯದ ನಾನು ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳ ಪಠ್ಯಪುಸ್ತಕದ ಪಾಠವಾಗಿದ್ದೇನೆ ಎಂಬುದೇ ದೊಡ್ಡ ಹೆಮ್ಮೆ. ಕುವೆಂಪು ವಿಶ್ವವಿದ್ಯಾನಿಲಯ ಬಿ.ಕಾಂ ವಿದ್ಯಾರ್ಥಿಗಳ ಕನ್ನಡ ಪಾಠದಲ್ಲಿ ನನ್ನ ಬಗ್ಗೆ ಸೇರಿಸಿತ್ತು ಎಂಬುದನ್ನು ಹಾಜಬ್ಬ ಸ್ಮರಿಸಿಕೊಂಡರು. ಶಾಲೆಯ ಬೀಗ ತೆಗೆಯುತ್ತಿದ್ದ ನನಗೆ ಪದ್ಮಶ್ರೀ ಪ್ರಶಸ್ತಿಗಾಗಿ ಕೇಂದ್ರ ಸರಕಾರದಿಂದ ಕರೆ ಬಂದಿದ್ದ ದಿನ ಮರೆಯಲು ಸಾಧ್ಯವಿಲ್ಲ. ವಿದ್ಯಾರ್ಥಿಗಳು ಕೂಡ ಚೆನ್ನಾಗಿ ಓದಿ ಸಾಧನೆ ಮಾಡಬೇಕು ಎಂದು ಕಿವಿಮಾತು ಹೇಳಿದರು.

ಗಾರ್ಡ್‌ ಆಫ್ ಹಾನರ್‌
ಹರೇಕಳ ಹಾಜಬ್ಬ, ಲೋಕಾಯುಕ್ತರು, ಜಿಲ್ಲಾಧಿ ಕಾರಿ, ತಹಶೀಲ್ದಾರ್‌ ಪ್ರದೀಪ್‌ ಕುಡೇìಕರ್‌ ಸಹಿತವಾಗಿ ಗಣ್ಯರನ್ನು ಕಾಲೇಜಿನ ಮುಖ್ಯದ್ವಾರದಿಂದ ಎನ್‌ಸಿಸಿ ಕೆಡೆಟ್‌ಗಳು ಗಾರ್ಡ್‌ ಆಫ್‌ ಹಾನರ್‌ ಮೂಲಕ ವೇದಿಕೆಗೆ ಸ್ವಾಗತಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next