Advertisement

ಇಂದು ಸಿದ್ಧಗಂಗಾ ಶ್ರೀಗಳ 111 ನೇ ಜನ್ಮದಿನೋತ್ಸವ

06:00 AM Apr 01, 2018 | Team Udayavani |

ತುಮಕೂರು: ಸಿದ್ಧಗಂಗೆಯ ಸಿದ್ಧಿ ಪುರುಷ ಡಾ.ಶ್ರೀ ಶಿವಕುಮಾರ ಸ್ವಾಮಿಗಳ  111ನೇ ವರ್ಷದ ಜನ್ಮದಿನೋತ್ಸವ ಕಾರ್ಯಕ್ರಮವನ್ನು ಇಂದು (ಏ.1) ಶ್ರೀ ಸಿದ್ಧಗಂಗಾ ಮಠದ ಆವರಣದಲ್ಲಿ  ವಿಶೇಷ ರೀತಿಯಲ್ಲಿ ಆಚರಿಸಲಾಗುವುದು.

Advertisement

ಶ್ರೀಗಳ ಆರೋಗ್ಯದಲ್ಲಿ ವ್ಯತ್ಯಾಸವಿರುವುದರಿಂದ ಸಾಮೂಹಿಕ ಪಾದಪೂಜೆ ಇರುವುದಿಲ್ಲ. ಆದರೆ ಬರುವ ಭಕ್ತರಿಗೆಲ್ಲ ಶ್ರೀಗಳ ದರ್ಶನ ಆಶೀರ್ವಾದ ಇರುತ್ತದೆ. ಈಗಾಗಲೇ ನಾಡಿನಾದ್ಯಂತ ಅಪಾರ ಸಂಖ್ಯೆಯ ಭಕ್ತರು ಶ್ರೀ ಮಠದಲ್ಲಿ ಬೀಡು ಬಿಟ್ಟಿದ್ದು, ಶ್ರೀ ಮಠ ಹಾಗೂ ನಗರದಲ್ಲಿ ಹಬ್ಬದ ಸಂಭ್ರಮ ಮನೆ ಮಾಡಿದೆ. 

ಬೆಳಗ್ಗೆ 5 ಗಂಟೆಯಿಂದಲೇ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ. ಹಳೆಯ ಮಠದಲ್ಲಿ ಬೆಳಗಿನ ಜಾವ 4 ಗಂಟೆಗೆ ಶಿವಪೂಜೆ ಮುಗಿಸಿಕೊಂಡು ಹೊರ ಬರುವ ಶ್ರೀಗಳಿಗೆ ವಿವಿಧ ಮಂಗಳವಾದ್ಯ ಹಾಗೂ 111 ಪೂರ್ಣಕುಂಭ ಸ್ವಾಗತದೊಂದಿಗೆ ಶ್ರೀಮಠದ ಆವರಣದಲ್ಲಿ ನಿರ್ಮಿಸಿರುವ ವೇದಿಕೆಗೆ ಕರೆ ತರಲಾಗುವುದು. ನಂತರ ನಾಡಿನ ವಿವಿಧೆಡೆಯಿಂದ ಆಗಮಿಸಿರುವ ನೂರಾರು ಮಠಗಳ ಮಠಾಧೀಶರಿಂದ ಪುಷ್ಪಾರ್ಚನೆ ಮೂಲಕ ಸ್ವಾಮೀಜಿ ಹುಟ್ಟುಹಬ್ಬ ಆಚರಿಸಲಾಗುವುದು. ನಂತರ ಶ್ರೀಮಠಕ್ಕೆ ಆಗಮಿಸುವ ಭಕ್ತರು, ಸ್ವಾಮೀಜಿಗಳಿಗೆ ಗುರುವಂದನೆ ಸಲ್ಲಿಸುವರು.

Advertisement

Udayavani is now on Telegram. Click here to join our channel and stay updated with the latest news.

Next