ಮಣಿಪಾಲ: ವೇದ, ಅಧ್ಯಾತ್ಮ ಸಹಿತ ಭಾರತೀಯ ಶಿಕ್ಷಣ, ಸಾಂಸ್ಕೃತಿಕ ಶ್ರೀಮಂತಿಕೆಯನ್ನು ಎಲ್ಲ ರಾಷ್ಟ್ರಗಳಿಗೆ ಪಸರಿಸಿದಲ್ಲಿ ಜಗತ್ತಿನಲ್ಲಿ ಶಾಂತಿ ನೆಲೆಸಲು ಸಾಧ್ಯವಿದೆ. ಅಮೃತ್ ಯುವ ಕಲೋತ್ಸವವು ಭಾರತೀಯ ಸಂಸ್ಕೃತಿಯ ವಿರಾಟ ಸ್ವರೂಪವಾಗಿದೆ ಎಂದು ಕೇಂದ್ರ ಸಂಗೀತ ನಾಟಕ ಆಕಾಡೆಮಿ ಅಧ್ಯಕ್ಷೆ ಡಾ| ಸಂಧ್ಯಾ ಪುರೇಚ ಹೇಳಿದರು.
ಕೇಂದ್ರ ಸಂಗೀತ ನಾಟಕ ಅಕಾಡೆಮಿ ವತಿಯಿಂದ ಮಾಹೆ, ಗಾಂಧಿಯನ್ ಸೆಂಟರ್ ಫಾರ್ ಫಿಲಾಸಫಿಕಲ್ ಆರ್ಟ್ಸ್ ಆ್ಯಂಡ್ ಸೈನ್ಸಸ್ (ಜಿಸಿಪಿಎಎಸ್) ಸಹಯೋಗ “ಅಕ್ಷಯ ಕಾವ್ಯ’ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಸಾಹಿತ್ಯ ವಿಮರ್ಶೆ ಮತ್ತು ಭಾಷಾ ವಿಜ್ಞಾನ ಕ್ಷೇತ್ರಗಳಲ್ಲಿ ಕೆಲಸ ಮಾಡಿದ್ದಾರೆ.ದೊಂದಿಗೆ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ಸೋಮವಾರ ಕೆಎಂಸಿಯ ಡಾ| ಟಿಎಂಎ ಪೈ ಸಭಾಂಗಣದಲ್ಲಿ ಆಯೋಜಿಸಿದ “ಅಮೃತ್ ಯುವ ಕಲೋತ್ಸವ 2022-23′ ಉದ್ಘಾಟಿಸಿ ಅವರು ಮಾತನಾಡಿದರು.
ಭಾರತ ಬಹು ವೈವಿಧ್ಯದ ಸಂಸ್ಕೃತಿ ಹೊಂದಿದೆ. ಇದರ ರಕ್ಷಣೆ, ಪೋಷಣೆಗಾಗಿ ಯುವ ಕಲಾವಿದರು ಕಲಾ ಪ್ರಕಾರಗಳ ಬಗ್ಗೆ ಆಸಕ್ತಿ ವಹಿಸಬೇಕು ಎಂದರು.
ಮಾಹೆ ಸಹಕುಲಾಧಿಪತಿ ಡಾ| ಎಚ್.ಎಸ್. ಬಲ್ಲಾಳ್ ಮಾತನಾಡಿ, ಕಲೋತ್ಸವ ಭಾರತೀಯ ಕಲೆ, ಸಂಸ್ಕೃತಿಯನ್ನು ಸಮ್ಮಿಲನಗೊಳಿಸುವ ಕಾರ್ಯಕ್ರಮ. ವಿದ್ಯಾರ್ಥಿಗಳು ಕಲೆ, ಕ್ರೀಡೆಗಳಿಗೂ ಆದ್ಯತೆ ನೀಡಿದಲ್ಲಿ ಉತ್ತಮ ವ್ಯಕ್ತಿತ್ವ ರೂಪು ಗೊಳ್ಳುತ್ತದೆ. ಈ ನಿಟ್ಟಿನಲ್ಲಿ ಮಾಹೆ ಶಿಕ್ಷಣದ ಜತೆಗೆ ಕಲೆ, ಸಾಹಿತ್ಯ, ಕ್ರೀಡೆಗೆ ವಿಶೇಷ ಆದ್ಯತೆ ನೀಡುತ್ತ ಬಂದಿದೆ ಎಂದರು.
ಮಾಹೆ ಯುನೆಸ್ಕೋ ಶಾಂತಿ ಪೀಠದ ಪ್ರೊ| ಎಂ.ಡಿ. ನಲಪತ್, ಜಿಸಿಪಿಎಎಸ್ ಮುಖ್ಯಸ್ಥ ಪ್ರೊ| ವರದೇಶ್ ಹಿರೇಗಂಗೆ ಉಪಸ್ಥಿತರಿದ್ದರು. ಅಕಾಡೆಮಿ ಉಪ ಕಾರ್ಯದರ್ಶಿ ಹೆಲನ್ ಆಚಾರ್ಯ ನಿರ್ವಹಿಸಿದರು. ವಿದ್ಯಾರ್ಥಿನಿಯರಾದ ಅಭಿನಯಾ ಸ್ವಾಗತಿಸಿ, ಅಪರ್ಣಾ ಪರಮೇಶ್ವರ್ ವಂದಿಸಿದರು. ಭ್ರಮರಿ ಶಿವಪ್ರಕಾಶ್ ನಿರೂಪಿಸಿದರು. ಮಂಗ ಳೂರಿನ ಶ್ರೀ ದೇವಿ ನೃತ್ಯಕೇಂದ್ರದವರಿಂದ ಭರತನಾಟ್ಯ, ಕಣ್ಣೂರಿನ ಶ್ರೀ ಭಾರತ್ ಕಲಾರಿ ಅವರಿಂದ ಕಲರಿಪಯಟ್ಟು, ಶಿವಮೊಗ್ಗ ಕಣ್ಣೇಶ್ವರ ಜಾನಪದ ಕಲಾ ಸಂಘದವರಿಂದ ಡೊಳ್ಳು ಕುಣಿತ, ವಾದ್ಯ ಸಂಗೀತ, ಉಡುಪಿ ಯಕ್ಷಗಾನ ಕೇಂದ್ರದಿಂದ ಯಕ್ಷಗಾನ ಜರಗಿತು.