Advertisement

ಜಯಂತಿಗೆ ಡಾ.ರಾಜ್‌ ಸಂಸ್ಕೃತಿ ಪ್ರಶಸ್ತಿ

01:45 AM Mar 16, 2019 | |

ಬೆಂಗಳೂರು: ಕನ್ನಡ ಸಾಹಿತ್ಯ ಪರಿಷತ್ತಿನ ಡಾ.ರಾಜ್‌ ಕುಮಾರ್‌ ಸಂಸ್ಕೃತಿ ಪ್ರಶಸ್ತಿ ಹಿರಿಯ ನಟಿ ಡಾ.ಜಯಂತಿ ಅವರಿಗೆ ಲಭಿಸಿದೆ. ಶುಕ್ರವಾರ ಕಸಾಪ ಅಧ್ಯಕ್ಷ ಡಾ.ಮನು ಬಳಿಗಾರ್‌, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಎಸ್‌.ಎ.ಚಿನ್ನೇಗೌಡ ಹಾಗೂ ಕಸಾಪ ಪದಾಧಿಕಾರಿಗಳನ್ನೊಳಗೊಂಡಆಯ್ಕೆ ಸಮಿತಿ  ಸಭೆಯಲ್ಲಿ ಡಾ. ರಾಜ್‌ಕುಮಾರ್‌ ಸಂಸ್ಕೃತಿ ಪ್ರಶಸ್ತಿಗೆ ಡಾ.ಜಯಂತಿ ಅವರನ್ನು ಆಯ್ಕೆ ಮಾಡಲಾಯಿತು.

Advertisement

ಪ್ರಶಸ್ತಿಯು 30 ಸಾವಿರ ರೂ. ನಗದು ಹಾಗೂ ಸ್ಮರಣಿಕೆಯನ್ನೊಳಗೊಂಡಿದೆ. ನಟ ಡಾ.ರಾಜ್‌ಕುಮಾರ್‌ ಕುಟುಂಬವು ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ 5 ಲಕ್ಷ ರೂ.ಗಳ ಠೇವಣಿ ಇರಿಸಿದ್ದು, ಇದರಿಂದ ಬರುವ ಆದಾಯದಲ್ಲಿ ಸಿನಿಮಾ ಸಂಸ್ಕೃತಿ ಬೆಳೆಸಲು ಕಾರಣರಾದ ಗಣ್ಯ ಕಲಾವಿದರು, ನಿರ್ಮಾಪಕರು ಹಾಗೂ ಎಲ್ಲ ವಿಭಾಗದ ತಂತ್ರಜ್ಞರನ್ನು, ಸಾಹಿತಿಗಳನ್ನು ಪರಿಗಣಿಸಿ ಪ್ರತಿವರ್ಷ ಒಬ್ಬರಿಗೆ ಡಾ.ರಾಜ್‌ಕುಮಾರ್‌ ಸಂಸ್ಕೃತಿ ದತ್ತಿ
ಪ್ರಶಸ್ತಿ ನೀಡಲಾಗುವುದು.

Advertisement

Udayavani is now on Telegram. Click here to join our channel and stay updated with the latest news.

Next