Advertisement

ಕರುನಾಡ ಕಣ್ಮಣಿಯ 92ನೇ ಹುಟ್ಟುಹಬ್ಬ: ಅಣ್ಣಾವ್ರ ಅಭಿಮಾನಿಗಳಿಗೆ ಸರ್ ಪ್ರೈಸ್ ನೀಡಲಿರುವ ಅಪ್ಪು

08:12 AM Apr 25, 2020 | Mithun PG |

ಬೆಂಗಳೂರು: ಕನ್ನಡ ಚಿತ್ರರಂಗ ಮಾತ್ರವಲ್ಲ, ಭಾರತೀಯ ಚಿತ್ರರಂಗ ಮರೆಯಲಾಗದ ವ್ಯಕ್ತಿತ್ವ ಇವರು. ಕನ್ನಡ ನಾಡು ನುಡಿ ಜಲ ನೆಲ ಮತ್ತು ಹೋರಾಟ ಎಂದಾಗ ಮೊದಲು ನೆನಪಾಗುವ ಹೆಸರೇ ಡಾ. ರಾಜ್ ಕುಮಾರ್. ಕನ್ನಡ ಚಿತ್ರರಂಗಕ್ಕೆ ಡಾ. ರಾಜ್ ಕುಮಾರ್ ಹಾಕಿಕೊಟ್ಟ ಭದ್ರ ಬುನಾದಿ ಆಳವಾಗಿ ಬೇರೂರಿದೆ. ಏಪ್ರಿಲ್ 24 ಕನ್ನಡಿಗರಿಗೆ ವಿಶೇಷವಾದ ದಿನ. ಅದರಲ್ಲೂ ಡಾ.ರಾಜ್ ಅಭಿಮಾನಿಗಳಿಗೆ ಸಂಭ್ರಮ.

Advertisement

ಹೌದು. ಇಂದು ವರನಟ, ನಟಸಾರ್ವಭೌಮ ಡಾ.ರಾಜ್ ಕುಮಾರ್ ಅವರ 92ನೇ ಹುಟ್ಟುಹಬ್ಬ. ಪ್ರತೀವರ್ಷ ರಾಜ್ ಕುಮಾರ್ ಹುಟ್ಟುಹಬ್ಬವನ್ನು ರಾಜ್ಯದಾದ್ಯಂತ ಮತ್ತು ಕಂಠೀರವ ಸ್ಟುಡಿಯೋದಲ್ಲಿ ಅಭಿಮಾನಿಗಳು  ಅದ್ದೂರಿಯಾಗಿ ಆಚರಣೆ ಮಾಡುತ್ತಿದ್ದರು. ಆದರೇ ಕೋವಿಡ್ 19 ಪರಿಣಾಮದಿಂದ ಯಾರು ಕೂಡ ಮನೆಯಿಂದ ಹೊರಬರದೇ. ಇದ್ದ ಜಾಗದಲ್ಲಿಯೇ ನೆಚ್ಚಿನ ನಟನ ಸ್ಮರಣೆ ಮಾಡಿ ಎಂದು ರಾಜ್ ಕುಟುಂಬ ಮನವಿ ಮಾಡಿದೆ.

ಇಂದು ನಮ್ಮ ಮೂರೂ ಕುಟುಂಬ ಮಾತ್ರ ಸೇರಿಕೊಂಡು ಅಪ್ಪಾಜಿಯವರ ಫೋಟೋಗೆ ಪೂಜೆ ಮಾಡಿ ಸಿಹಿ ತಿಂದು ಆಚರಿಸುತ್ತೇವೆ. ದಯಮಾಡಿ ಅಭಿಮಾನಿಗಳಾರೂ ಹೊರಗೆ ಬರದೆ ಲಾಕ್‌ಡೌನ್‌ ಪಾಲಿಸಿ ತಮ್ಮ ತಮ್ಮ ಆರೋಗ್ಯ ಕಾಪಾಡಿಕೊಳ್ಳಿ. ಮಾತ್ರವಲ್ಲದೆ  ಅಪ್ಪಾಜಿಯವರ ಸಿನಿಮಾಗಳನ್ನು ನೋಡುತ್ತಾ ಹುಟ್ಟುಹಬ್ಬ ಆಚರಿಸಿ. ಇದೇ ಅಪ್ಪಾಜಿಯವರಿಗೆ ನಾವು ಕೊಡುವ ಗೌರವ ಎಂದು ನಟ ರಾಘವೇಂದ್ರ ರಾಜ್‌ಕುಮಾರ್‌ ಮನವಿ ಮಾಡಿದ್ದಾರೆ.

ನಾನು ಮಧ್ಯಾಹ್ಯ 12.30ಕ್ಕೆ ನನ್ನ ಇನ್‌ ಸ್ಟಾಗ್ರಾಂ ಅಕೌಂಟ್‌ನಿಂದ ಲೈವ್‌ ಬಂದು ಅಪ್ಪಾಜಿಯವರ ಅಭಿಮಾನಿಗಳಿಗೆ ಮತ್ತು ಕನ್ನಡ ಪ್ರೇಕ್ಷಕರಿಗೆ ಚಿಕ್ಕ ಸರ್‌ಪ್ರೈಸ್‌ ನೀಡುತ್ತಿದ್ದೇನೆ. ನಾವೆಲ್ಲರೂ ಈ ಸಂಕಷ್ಟದಿಂದ ಹೊರಬಂದ ಮೇಲೆ ಸಂಭ್ರಮಪಡಬಹುದು ಎಂದು ಪುನೀತ್‌  ರಾಜ್ ಕುಮಾರ್ ಇದೇ ವೇಳೆ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next