Advertisement

“ಶಕ್ತಿಧಾಮ”ದಲ್ಲಿ ನಿರ್ಗತಿಕ ಮಹಿಳೆಯರು,ಮಕ್ಕಳಿಗೆ ಆಸರೆಯಾಗಿದ್ದ ಅಮ್ಮ 

11:43 AM May 31, 2017 | |

ಮೈಸೂರು : ಬಹು ಅಂಗಾಂಗವೈಫ‌ಲ್ಯಗಳಿಂದ 77ರ ಹರೆಯದಲ್ಲಿ ಕೊನೆಯುಸಿರೆಳೆದಿರುವ ವರನಟ ಡಾ.ರಾಜ್‌ ಕುಮಾರ್‌ ಧರ್ಮಪತ್ನಿ, ಹಿರಿಯ ನಿರ್ಮಾಪಕಿ ಡಾ.ಪಾರ್ವತಮ್ಮ ರಾಜ್‌ಕುಮಾರ್‌ ಅವರು ಕೇವಲ ನಿರ್ಮಾಪಕಿಯಾಗಿ ಮಾತ್ರವಲ್ಲದೆ ಸಮಾಜಮುಖಿ ಕಾರ್ಯಗಳ ಮೂಲಕವೂ ಗುರುತಿಸಿಕೊಂಡವರು.

Advertisement

ಮೈಸೂರಿನ ನಂಜನಗೂಡು ರಸ್ತೆಯಲ್ಲಿ 2010 ರ ಮೇ 20 ರಂದು ನಿರ್ಗತಿಕ ಮಹಿಳೆಯರು ಮತ್ತು ಮಕ್ಕಳಿಗಾಗಿ ಶಕ್ತಿಧಾಮ ಎನ್ನುವ ಟ್ರಸ್ಟ್‌ ಮೂಲಕ ಪುನರ್‌ವಸತಿ ಕೇಂದ್ರವನ್ನು ತೆರೆದಿದ್ದರು. ಈ ಕೇಂದ್ರ ಆರಂಭವಾದುದರಿಂದ ಇಲ್ಲಿಯವರೆಗೆ ಸಾವಿವಾರು ಮಹಿಳೆಯರು,ಮಕ್ಕಳು  ಕಳೆದುಹೋದ ಬದುಕನ್ನು ಮರಳಿ ಪಡೆದಿದ್ದಾರೆ.ಪ್ರಸಕ್ತ ಈ ಕೇಂದ್ರದಲ್ಲಿ 35 ಮಹಿಳೆಯರು ಮತ್ತು 100 ಕ್ಕೂ ಮಿಕ್ಕಿ ವಿದ್ಯಾರ್ಥಿಗಳು ಶಿಕ್ಷಣವನ್ನು ಪಡೆಯುತ್ತಿದ್ದಾರೆ. 

ಶಕ್ತಿಧಾಮದಲ್ಲಿ ಪಾರ್ವತಮ್ಮ ಅವರ ನಿಧನದ ವಾರ್ತೆ ಕೇಳಿ ನೀರವ ಮೌನ ಆವರಿಸಿದ್ದು ಅನ್ನದಾತೆ ಇಲ್ಲದೆ ಮಹಿಳೆಯರು ಮಕ್ಕಳು ಕಂಬನಿ ಮಿಡಿದಿದ್ದಾರೆ. ಪಾರ್ವತಮ್ಮ ಅವರ ಭಾವ ಚಿತ್ರಕ್ಕೆ ಪುಷ್ಪಾಂಜಲಿ ಸಲ್ಲಿಸಿ ದೀಪ ಬೇಳಗಿ ಮೌನಾಚರಣೆ ಮಾಡುತ್ತಿದ್ದಾರೆ. 

ಅಶಕ್ತರ ಸೇವೆ ಮಾಡಬೇಕೆಂಬ,ಶೋಷಿತರ ಪರ ಧನಿಯಾಗಬೇಕೆಂಬ ತುಡಿತ ಹೊಂದಿದ್ದ ಪಾರ್ವತಮ್ಮ ಸಮಯ ಸಿಕ್ಕಾಗೆಲ್ಲಾ ಶಕ್ತಿಧಾಮಕ್ಕೆ ಭೇಟಿ ನೀಡಿ ನೊಂದವರಿಗೆ ಸಾಂತ್ವನ ಹೇಳಿ ಜೀವನ ಭರವಸೆ ತುಂಬುತ್ತಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next