Advertisement

ಶಿರ್ವದ ಜನಪ್ರಿಯ ವೈದ್ಯ ಡಾ|ಎನ್‌.ಎಸ್‌. ನಾಯಕ್‌ ನಿಧನ

09:30 AM Sep 20, 2022 | Team Udayavani |

ಶಿರ್ವ : ಶಿರ್ವದ ಜನಪ್ರಿಯ ಹಿರಿಯ ವೈದ್ಯ, ಮುಖ್ಯ ರಸ್ತೆ ಬಳಿಯ ನಿವಾಸಿ ಡಾ| ನಗರ ಸೂರ್ಯನಾರಾಯಣ ನಾಯಕ್‌ (ಎನ್‌.ಎಸ್‌. ನಾಯಕ್‌)(71) ಅವರು ಸೆ. 19 ರಂದು ಮಣಿಪಾಲದ ಆಸ್ಪತ್ರೆಯಲ್ಲಿ ನಿಧನ ಹೊಂದಿದರು.

Advertisement

ಮೃತರು ಪತ್ನಿ, ಮತ್ತು ಮೂವರು ವೈದ್ಯೆ ಪುತ್ರಿಯರನ್ನು ಅಗಲಿದ್ದಾರೆ.

ಸುಮಾರು 45 ವರ್ಷಗಳಿಗೂ ಹೆಚ್ಚು ಕಾಲ ಶಿರ್ವದಲ್ಲಿ ವೈದ್ಯರಾಗಿ ಸೇವೆ ಸಲ್ಲಿಸುತ್ತಿದ್ದ ಅವರು ನಾಯಕ್ಸ್‌ ನರ್ಸಿಂಗ್‌ ಹೋಂ ಸ್ಥಾಪಿಸಿ ಗ್ರಾಮೀಣ ಭಾಗದ ಬಡ ಜನರಿಗೆ ವೈದ್ಯಕೀಯ ಸೇವೆ ನೀಡಿ ಜನಾನುರಾಗಿಯಾಗಿದ್ದರು.

ಶಿರ್ವಯಂಗ್‌ ಮೆನ್ಸ್‌ ನ್ಪೋರ್ಟ್ಸ್ ಆಂಡ್‌ ಕಲ್ಚರಲ್‌ ಎಸೋಸಿಯೇಶನ್‌ ಮತ್ತು ಲಯನ್ಸ್‌ ಕ್ಲಬ್‌ನ ಸ್ಥಾಪಕ ಸದಸ್ಯರಾಗಿದ್ದ ಅವರು ಪರಿಸರದ ವಿವಿಧ ಸಂಘ ಸಂಸ್ಥೆಗಳಲ್ಲಿ ತೊಡಗಿಸಿಕೊಂಡು ಸಾಮಾಜಿಕವಾಗಿ ಗುರುತಿಸಿಕೊಂಡಿದ್ದರು.

ಇದನ್ನೂ ಓದಿ : ಉಡುಪಿ : ಅ. 5ರಿಂದ ಗ್ರಾಮ ಪಂಚಾಯತ್‌ ವ್ಯಾಪ್ತಿಯಲ್ಲಿ ಮರಳು ಲಭ್ಯ… ಪಡೆಯುವುದು ಹೇಗೆ?

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next