Advertisement

Udayavani ಜತೆ ಸೇನ್ ಮಾತುಕತೆ: ಮುಂದಿನ 50 ವರ್ಷಗಳಲ್ಲಿ ಹಿಮಾಲಯ ಹೇಗಿರಬಹುದು?

07:11 PM Feb 29, 2024 | Team Udayavani |

ನಿಮ್ಲಿ: ಹಿಮಾಲಯದ ಪ್ರಾಂತ್ಯದಲ್ಲಿ ಹೆಚ್ಚುತ್ತಿರುವ ಮೇಘಸ್ಫೋಟ, ಭೂಕುಸಿತ ದಂಥ ಘಟನೆಗಳ ಹಿನ್ನೆಲೆಯಲ್ಲಿ ಮುಂದಿನ 50 ವರ್ಷಗಳಲ್ಲಿ ಹಿಮಾಲಯದ ಭೂ ದೃಶ್ಯ ಎಷ್ಟು ಮತ್ತು ಹೇಗೆ ಬದಲಾಗುತ್ತದೆ? ಹಿಮಾಲಯ ಉಳಿಯುತ್ತದೆಯೇ? ಎಂಬ ಪ್ರಶ್ನೆಗೆ ಸಿಕ್ಕ ಉತ್ತರ ‘ಈಗಲೇ ಏನೂ ಹೇಳಲಾಗದು’.

Advertisement

ಡೆಹ್ರಾಡೂನ್ ನ ವಾಡಿಯಾ ಇನ್ ಸ್ಟಿಟ್ಯೂಟ್ ಆಫ್ ಹಿಮಾಲಯನ್ ಜಿಯಾಲಜಿ ನಿರ್ದೇಶಕ ಡಾ. ಕಲಾಚಂದ್ ಸೇನ್ ಅವರ ಪ್ರಕಾರ, ಹಿಮಾಲಯ ನಾವು ಹಿಂದೆ ಇದ್ದಂತೆ ಈಗಿಲ್ಲ. ಹಾಗೆಂದು ನಿಖರ ಅಧ್ಯಯನ ಮತ್ತು‌ದತ್ತಾಂಶಗಳ ಮಾದರಿಯಿಂದ ಮಾತ್ರ ಹಿಮಾಲಯದ ತಪ್ಪಲು ಬದಲಾಗುತ್ತಿರುವ ಪರಿಯನ್ನು ಹೇಳಬಹುದಷ್ಟೇ ಎಂದು ಉದಯವಾಣಿಗೆ ತಿಳಿಸಿದರು.

ಸಿಎಸ್ಇ ಪರಿಸರ ಸಂವಾದದಲ್ಲಿ ಭಾಗವಹಿಸಿದ ಬಳಿಕ ಮಾತನಾಡಿ, ಮುಂದಿನ ಐವತ್ತು‌ ವರ್ಷಗಳಲ್ಲಿ ಹಿಮಾಲಯ ಹೀಗೇ ಇರುತ್ತದೆ ಅಥವಾ ಇಲ್ಲ ಎಂದು ಈಗಲೇ ಹೇಳಲು ಆಗದು. ಯಾಕೆಂದರೆ ಗ್ಲೇಸಿಯರ್ ಗಳು ಕರಗತೊಡಗಿರುವುದು ನಿಜ.‌ಅದೇ ಸಂದರ್ಭದಲ್ಲಿ ಗ್ಲೇಸಿಯರ್ ಗಳು ವಿಸ್ತಾರಗೊಳ್ಳುತ್ತಿರುವ ಉದಾಹರಣೆಗಳೂ ಇವೆ. ಹಾಗಾಗಿ ನಿರಂತರವಾಗಿ ಈ ಪ್ರದೇಶದಲ್ಲಿ ಬದಲಾವಣೆಗಳು ಆಗುತ್ತಿರುವುದೇ ಈ ಹೊತ್ತಿಮ ಸತ್ಯ ಎಂದು ಸ್ಪಷ್ಟಪಡಿಸಿದರು.

ಹಿಮಾಲಯ ಕೌನ್ಸಿಲ್ ಹಿಮಾಲಯದಲ್ಲಿನ ಬೆಳವಣಿಗೆಗಳು ಸೇರಿದಂತೆ ಪರಿಸರ ಸಂಬಂಧಿ ಬೆಳವಣಿಗೆಗಲು ಒಂದು ಪ್ರದೇಶಕ್ಕಾಗಲೀ, ಭೌಗೋಳಿಕ ಸರಹದ್ದಿಗಾಗಲೀ ಸೀಮಿತಗೊಂಡಿರುವುದಿಲ್ಲ. ಈ ಹಿನ್ನೆಲೆಯಲ್ಲಿ ಹಿಮಾಲಯ ಪ್ರದೇಶವನ್ನು ಹಂಚಿಕೊಂಡಿರುವ ಎಲ್ಲ ರಾಷ್ಟ್ರಗಳು ಸಮರ್ಥ ಕೌನ್ಸಿಲ್ ಅನ್ನು ಹೊಂದುವುದು ಮುಖ್ಯ‌ಎಂದು ಅಬಿಪ್ರಾಯಪಟ್ಟರು.

ಹಾಗಾದರೆ ಪ್ರಸ್ತುತ ಅಂಥದೊಂದು ವ್ಯವಸ್ಥೆ ಇಲ್ಲವೇ ಎಂಬ ಪ್ರಶ್ನೆಗೆ, ಇದೆ. ಆದರೆ ಇನ್ನಷ್ಟು ಸಮರ್ಥವಾಗಿರಬೇಕು. ಅದಕ್ಕೆ ಪೂರಕವಾಗಿ ನೆರೆ ಹೊರೆ ರಾಷ್ಟ್ರಗಳೂ ‌ಪರಸ್ಪರ ವಿಶ್ವಾಸ ಮತ್ತು ಸಹಕಾರ ಹೊಂದಿರಬೇಕು.‌ಆಗ ಅನುಕೂಲ ಹೆಚ್ಚು. ಇಲ್ಲವಾದರೆ ಪ್ರತಿಯೊಬ್ಬರೂ ತಮ್ಮ ನೇರಕ್ಕೆ ತಾವು ಪರಿಹಾರಗಳನ್ನು ಪ್ರಯೋಗಿಸುತ್ತಾರೆ. ಆದರೆ ಅದು ನೆರೆಯ ರಾಷ್ಟ್ರಕ್ಕೆ ಸಮಸ್ಯೆ ತಂದೊಡ್ಡಬಹುದು. ಅದು ನಮ್ಮ ಆದ್ಯತೆ ಅಲ್ಲ ಎಂದು ತಳ್ಳಿ ಹಾಕುವಂತಿಲ್ಲ. ಹಾಗಾಗಿಯೇ ಇದೊಂದು ಸಂಘಟನಾತ್ಕಕ ಹಾಗೂ ಸಹಕಾರಾತ್ಮಕ ನೆಲೆಯಲ್ಲಿ ಆಗಬೇಕಾದ ತುರ್ತಿನ ಕೆಲಸ ಎಂದು ಹೇಳಿದರು.

Advertisement

ಅಭಿವೃದ್ಧಿ ಬೇಕು..ಆದರೆ ಉತ್ತರಾಖಂಡ್ ಸೇರಿದಂತೆ ಹಿಮಾಲಯ ತಪ್ಪಲಿನ ಪ್ರದೇಶಗಳಲ್ಲಿನ ಅಭಿವೃದ್ಧಿಯೇ ಅನಾಹುತಗಳಿಗೆ ಕಾರಣವಾಗುತ್ತಿದೆಯೇ ಎಂಬ ಮತ್ತೊಂದು ಪ್ರಶ್ನೆಗೆ, ಪರ್ವತ ಪ್ರದೇಶದ, ಹಿಮಾಲಯದ ತಪ್ಪಲಿನ ಜನರಿಗೆ ಸೌಲಭ್ಯ ಸಿಗಬೇಕು. ಅವರಿಗೆ ಅಭಿವೃದ್ದಿಯನ್ನು ನಿರಾಕರಿಸಬಾರದು.‌ ಆದರೆ ಏನು ಮಾಡಬೇಕು ಮತ್ತು ಎಷ್ಟು ಮಾಡಬೇಕು ಎಂಬುದನ್ನು ಮೊದಲು ನಿರ್ಧರಿಸಬೇಕು.‌ಆ ಬಳಿಕ ವೈಜ್ನಾನಿಕವಾಗಿ ಹೇಗೆ ಮಾಡಬಹುದೆಂಬುದನ್ನು ಅಧ್ಯಯನ ಮಾಡಿ ನಿರ್ಧರಿಸಬೇಕು. ಸ್ಥಳೀಯ ಸಂಸ್ಥೆಗಳನ್ನು, ಸ್ಥಳೀಯರ ಸಲಹೆಯನ್ನೂ ಪಡೆಯಬೇಕು. ಸುಸ್ಥಿರತೆಗೆ ಆದ್ಯತೆ ಕೊಡದೇ ಯಾವುದೇ ಅಭಿವೃದ್ಧಿ ನಡೆಸಿದರೂ ಅನಾಹುತ ಇದ್ದದ್ದೇ ಎಂದರಲ್ಲದೇ, ನಾವು ಒಳ್ಳೆದಾಗಬೇಕೆಂದು ಅಭಿವೃದ್ಧಿ ಮಾಡಿ, ಜನರಿಗೆ ಅನಾಹುತ ಉಂಟಾಗುವುದಾದರೆ ಏನು ಪ್ರಯೋಜನ ಎಂದು ಪ್ರಶ್ನಿಸಿದರು.

ಜೋಶಿಮಠ ಪ್ರಕರಣ
2023 ರಲ್ಲಿ ಉತ್ತರಾಖಂಡ್ ರಾಜ್ಯದ ಚಮೋಲಿ ‌ಜಿಲ್ಲೆಯ ಜೋಶಿಮಠ ಪ್ರದೇಶದಲ್ಲಿ ಉಂಟಾದ ಬಿರುಕಿಗೆ ಆ ಪ್ರದೇಶದಲ್ಲಿ ಆದ ಅಂತರ್ಜಲದ ಪ್ರಮಾಣದಲ್ಲಿನ ಏರಿಳಿತವೂ ಒಂದು ಕಾರಣ ಎಂದು ಸೇನ್ ತಿಳಿಸಿದರು.

ಬಿರುಕು ಬಿಟ್ಟ ತರುವಾಯ ನಾವು ಸ್ಥಳಜ್ಕೆ ಭೇಟಿ ನೀಡಿ ಪರಿಶೀಲಿಸಿದೆವು ಬಳಿಕವೂ ಹಲವು ಬಾರಿ‌ ಭೇಟಿ ನೀಡಿ ಪರಿಶೀಲಿಸಿದಾಗ ಈ ಅಂಶ ಬೆಳಕಿಗೆ ಬಂದಿತು. ಇನ್ನಷ್ಟು ಅಧ್ಯಯನ ನಡೆಸುವುದಾಗಿ ತಿಳಿಸಿದರು.ಅಭಿವೃದ್ಧಿ ಬೇಕಿದೆ, ಆದರೆ ಅವೈಜ್ಞಾನಿಕವಾಗಿ ಅಲ್ಲ ಎಂಬುದು ನನ್ನ ಅಭಿಪ್ರಾಯ ಎನ್ನುವುದಕ್ಕೆ ಮರೆಯಲಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next