ಬೆಂಗಳೂರು : ಕೋವಿಡ್ ರೂಪಾಂತರಿ ಅಲೆ ರಾಜ್ಯದಲ್ಲಿ ನಿತ್ಯ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ನಿನ್ನೆ(ಮಂಗಳವಾರ, ಏಪ್ರಿಲ್ 20) ರಾತ್ರಿ ವೀಕೆಂಡ್ ಲಾಕ್ ಡೌನ್, ವಾರದ ಐದು ದಿನಗಳ ನೈಟ್ ಕರ್ಫ್ಯೂ ಘೋಷಣೆ ಮಾಡಿ ಕೆಲವು ಕಠಿಣ ನಿರ್ಬಂಧಗಳನ್ನು ಹೇರಿದೆ.
ರಾಜ್ಯದಲ್ಲಿ ಕೋವಿಡ್ ಸೋಂಕಿನ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಎರಡು ವಾರಗಳ ಭಾಗಶಃ ಲಾಕ್ ಡೌ ನ್ ರಾಜ್ಯದಲ್ಲಿರಲಿದೆ.
ಕೋವಿಡ್ ಸೋಂಕಿನ ಪಾಸಿಟಿವ್ ಪ್ರಕರಣಗಳ ಸಂಖ್ಯೆ ಏರಿಕೆಯಾಗುತ್ತಿರುವುದರ ಜೊತೆಗೆ ರಾಜ್ಯದಲ್ಲಿ ಕೋವಿಡ್ ನಿಂದ ಮೃತಪಡುತ್ತಿರುವರ ಸಂಖ್ಯೆಯೂ ಏರಿಕೆಯಾಗುತ್ತಿದ್ದು, ಆಮ್ಲಜನಕದ ಕೊರತೆಯೇ ಕಾರಣ ಎಂದು ಪ್ರತಿ ಪಕ್ಷಗಳು ಆಡಳತ ಪಕ್ಷವನ್ನು ಆರೋಫ ಮಾಡುತ್ತಿವೆ.
ಇದನ್ನೂ ಓದಿ : ಸಮಾಜ ಬಾಂಧವರ ಯೋಗಕ್ಷೇಮ ಸಂಘದ ಮುಖ್ಯ ಧ್ಯೇಯ: ಚಂದ್ರಹಾಸ್ ಶೆಟ್ಟಿ
Related Articles
ಇನ್ನೊಂದೆಡೆ ಆಡಳಿತ ಪಕ್ಷ ತನ್ನನ್ನು ಸಮರ್ಥಿಸಿಕೊಳ್ಳುತ್ತಾ, ಕೋವಿಡ್ ನಿಯಂತ್ರಣಕ್ಕೆ ಬೇಕಾದ ಎಲ್ಲಾ ಸೌಲಭ‍್ಯಗಳು ಇವೆ, ಹೆಚ್ಚುವರಿ ತುರ್ತ ಅಗತ್ಯತೆಗಳನ್ನು ಪೂರೈಸಲಾಗುತ್ತಿದೆ ಎಂದು ಹೇಳುತ್ತಿದೆ.
ಈ ವಿಚಾರಕ್ಕೆ ಪೂರಕವಾಗುವಂತೆ, ಆರೋಗ್ಯ ಸಚಿವ ಡಾ. ಕೆ. ಸುಧಾಕರ್ ಇಂದು(ಬುಧವಾರ, ಏ. 21) ತಮ್ಮ ಟ್ವೀಟರ್ ನಲ್ಲಿ ಆಕ್ಸಿಜನ್ ಮತ್ತು ರೆಮಿಡಿಸಿವಿರ್ ಪೂರೈಕೆಗೆ 24/7 ವಾರ್ ರೂಮ್ ಸ್ಥಾಪಿಸಲಾಗಿದ್ದು, ಸಿಬ್ಬಂದಿಗಳು 3 ಪಾಳಿಗಳಲ್ಲಿ ಕಾರ್ಯನಿರ್ವಹಿಸಲಿದ್ದಾರೆ ಎಂದು ಬರೆದುಕೊಂಡಿದ್ದಾರೆ.
ಮಾತ್ರವಲ್ಲದೇ, ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ ಆರು ಸಾವಿರ ಲೀಟರ್ ಸಾಮರ್ಥ್ಯದ ಆಮ್ಲಜನಕ ಘಟಕ ಸ್ಥಾಪಿಸಲಾಗಿದ್ದು ಅತೀ ಶೀಘ್ರದಲ್ಲಿ ಕಾರ್ಯಾರಂಭ ಮಾಡಲಿದೆ ಎಂದು ಕೂಡ ತಿಳಿಸಿದ್ದಾರೆ.
ಇದನ್ನೂ ಓದಿ : ಕಾಲಿವುಡ್ ನಟಿ ಸಾಕ್ಷಿ ಅಗರ್ವಾಲ್ ಬ್ಯೂಟಿಫುಲ್ ಫೋಟೋ ಗ್ಯಾಲರಿ