Advertisement

ಗೋಹತ್ಯಾ ನಿಷೇಧ ಕಾನೂನಿಗೆ ಡಾ|ಸ್ವಾಮಿ ಆಗ್ರಹ

03:45 AM Jan 30, 2017 | Harsha Rao |

ಮಂಗಳೂರು: ದೇಶದ ಸಮಗ್ರ ಪ್ರಗತಿ ಹಾಗೂ ಪರಂಪರೆಯ ರಕ್ಷಣೆಗಾಗಿ ಗೋಸಂರಕ್ಷಣೆ, ಸಂಸ್ಕೃತದ ಪುನಶ್ಚೇತನ ಹಾಗೂ ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣ ಕೂಡಲೇ ನಡೆಯಬೇಕಾಗಿದೆ ಎಂದು ರಾಜ್ಯಸಭಾ ಸದಸ್ಯ, ಬಿಜೆಪಿ ಮುಂದಾಳು ಡಾ| ಸುಬ್ರಹ್ಮಣ್ಯನ್‌ ಸ್ವಾಮಿ ಅಭಿಪ್ರಾಯಪಟ್ಟರು.

Advertisement

ಶ್ರೀ ರಾಮಚಂದ್ರಾಪುರ ಮಠಾಧೀಶ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮೀಜಿ ಅವರ ಪರಿಕಲ್ಪನೆಯಲ್ಲಿ ಮಂಗಲ ಗೋಯಾತ್ರೆಯ ಮಹಾತ್ರಿವೇಣಿ – ಮಹಾಮಂಗಲದಲ್ಲಿ ರವಿವಾರ ಅವರು ಪ್ರಧಾನ ಭಾಷಣವಿತ್ತರು.

ಸಪ್ತರಾಜ್ಯಗಳಲ್ಲಿ 81 ದಿನಗಳ ಕಾಲ ಸಂಚರಿಸಿ, ಗೋ ಸಂರಕ್ಷಣಾ ಜ್ಯೋತಿಧಿಯನ್ನು ಪ್ರಜ್ವಲಿಸಿದ ಈ ಅಭಿಯಾನ ಐತಿಹಾಸಿಕ ಎಂದು ಅವರು ಸ್ವಾಮೀಜಿಯವರನ್ನು ಅಭಿಧಿನಂದಿಸಿದರು.

ಸ್ವಾಮೀಜಿಯವರ ಪರಿಕಲ್ಪನೆಯ ಈ ಅಭಿಧಿಯಾನ ದೇಶಾದ್ಯಂತ ಗೋರಕ್ಷಣೆಯ ಜಾಗೃತಿಧಿಯನ್ನು ಸೃಷ್ಟಿಸಿದೆ. ಸಹಸ್ರಾರು ಮಠಾಧಿಪತಿಧಿಗಳು ಈ ಜಾಗೃತಿಗೆ ಸಹಕಾರ ನೀಡಿದ್ದಾರೆ. ಈ ಮಹಾಧಿತ್ರಿವೇಣಿಯಲ್ಲಿ ಉಪಸ್ಥಿತರಿದ್ದಾರೆ. ಇವೆಲ್ಲವೂ ಸಂತಸಕರವಾದ ಸಂಗತಿ ಎಂದರು.

ಕಾನೂನು ಜಾರಿಗೊಳಿಸಿ
ದೇಶದಲ್ಲಿ ಗೋಹತ್ಯಾ ನಿಷೇಧದ ಕಾನೂನನ್ನು ಕೂಡಲೇ ಜಾರಿಗೊಳಿಸಿ ಎಂದು ಡಾ| ಸುಬ್ರಹ್ಮಣ್ಯನ್‌ ಸ್ವಾಮಿ ಅವರು ಕೇಂದ್ರ ಸರಕಾರಧಿವನ್ನು ಆಗ್ರಹಿಸಿದರು. ಈ ಕುರಿತು ಯಾವುದೇ ಸಮಸ್ಯೆಗಳಿಲ್ಲ. ಸರ್ವೋಚ್ಚ ನ್ಯಾಯಾಧಿಲಯ ಕೂಡ ಈ ಬಗ್ಗೆ ರಾಜ್ಯ ಸರಕಾರಧಿಗಳಿಗೆ ವಿವರಿಸಿದೆ. ಭಾರತದ ಮೂಲ ಸಂವಿಧಾನಧಿದಲ್ಲೇ ಗೋ ಸಂರಕ್ಷಣೆ ಬಗ್ಗೆ ವ್ಯಾಖ್ಯಾನಧಿವಿದೆ. ಮಹಾತ್ಮಾ ಗಾಂಧಿ ಅವರು ಗೋಹತ್ಯೆಗೆ ವಿರುದ್ಧವಾಗಿದ್ದರು. ಸಂವಿಧಾನ ಶಿಲ್ಪಿ ಡಾ| ಬಿ.ಆರ್‌. ಅಂಬೇಡ್ಕರ್‌ ಅವರೂ ವಿರೋಧಿಧಿಸಿದ್ದರು. ಆದ್ದರಿಂದ ಕೇಂದ್ರ ಕೂಡಲೇ ಸ್ಪಂದಿಸಲಿ. ಅಗತ್ಯ ಇದ್ದರೆ ತಾನು ರಾಜ್ಯಸಭೆಧಿಯಲ್ಲಿ ಈ ಬಗ್ಗೆ ವೈಯಕ್ತಿಕ ನಿಲುವಳಿ ಮಂಡಿಧಿಸುವುದಾಗಿಯೂ ಪ್ರಕಟಿಸಿದರು.

Advertisement

ಗೋಮಾಂಸ ರಫ್ತು ವ್ಯವಹಾರಕ್ಕೆ ಈ ಹಿಂದಿನ ಸರಕಾರವೇ ಸಬ್ಸಿಡಿ ನೀಡುತ್ತಿತ್ತು. ಆದರೆ ಈಗಿನ ಸರಕಾರ ಅದನ್ನು ಸ್ಥಗಿತಗೊಳಿಸಿರುವುದು ಸ್ವಾಗತಾರ್ಹ. ಗೋವಿನ ಹಾಲು ಅತ್ಯುತ್ತಮ ಪ್ರೊಟೀನ್‌ ಸಹಿತ ಸರ್ವಶ್ರೇಷ್ಠ ಆಹಾರವಾಗಿದೆ. ಗೋಮೂತ್ರ ಅನೇಕ ರೋಗಗಳಿಗೆ ಪರಿಹಾರಧಿವಾಗಿದೆ. ಈ ಬಗ್ಗೆ ಜಾಗೃತಿ ಮೂಡಿಸಿರುವ ಈ ಅಭಿಯಾನ ಪ್ರಶಂಸನೀಯ ಎಂದರು.

ಸಂಪತ್ತು: ವಿನಯ ಹೆಗ್ಡೆ
ನಿಟ್ಟೆ ವಿನಯ ಹೆಗ್ಡೆ ಅವರು ಪ್ರಸ್ತಾವನೆಧಿಗೈದರು. ದೇಶದ ಅತೀ ದೊಡ್ಡ ಸಂಪತ್ತು ಗೋವು ಸಂಪತ್ತು ಎಂದು ಹೇಳಿದರು. ರಾಘವೇಧಿಶ್ವರ ಶ್ರೀಗಳನ್ನು ಅಭಿನಂದಿಸಿದರು. ಕರಾಧಿವಳಿ- ರಾಜ್ಯ -ದೇಶದ 1,300ಕ್ಕೂ ಹೆಚ್ಚು ಮಠಾಧಿಪತಿಗಳು ವೇದಿಕೆಯಲ್ಲಿದ್ದರು. ರಾಘವೇಶ್ವರ ಶ್ರೀಗಳನ್ನು ಅಭಿನಂದಿಸಿದರು.
ಡಾ| ಕಲ್ಲಡ್ಕ ಪ್ರಭಾಕರ ಭಟ್‌ ಮುಂತಾದ ಗಣ್ಯರು ಉಪಸ್ಥಿತರಿದ್ದರು.

ಗೋಸಂರಕ್ಷಣೆಯ ಮಹಾಸಂಕಲ್ಪ
ರಾಘವೇಶ್ವರ ಶ್ರೀಗಳು ಸಹಸ್ರಾಧಿಕ ಮಠಾಧೀಶರು, ಲಕ್ಷೋಪಲಕ್ಷ ಗೋಭಕ್ತರ ಸಮ್ಮುಖದಲ್ಲಿ ನೀಡಿದ ಗೋಸಂರಕ್ಷಣೆಯ ಮಹಾ ಪ್ರತಿಜ್ಞೆ: ಮೂವತ್ತಮೂರು ಕೋಟಿ ದೇವತೆಗಳ ಆವಾಸ ಸ್ಥಾನವಾಗಿ ಚಲಿಸುವ ದೇವಾಲಯವೆನಿಸಿದ, ಪವಿತ್ರವಾದ ಪಂಚಗವ್ಯವನ್ನು ಕೊಡಮಾಡಿ ಚಲಿಸುವ ಔಷಧಾಲಯವೆನಿಸಿದ, ಸಕಲರೋಗ ನಿವಾರಕವಾದ ಔಷಧಗಳ ಖನಿಯಾಗಿ ಚಲಿಸುವ ಔಷಧಾಲಯವೆನಿಸಿದ ಭಾರತೀಯ ಗೋವಂಶವನ್ನು ಯಾವಜ್ಜೀವವೂ ಮೈಮಾತುಮನಗಳಿಂದ ಸಂರಕ್ಷಣೆ ಮಾಡುತ್ತೇನೆಂದು ಗೋಕಿಂಕರನಾಗಿ ಗೋಸೇವೆಗೆ ಬದ್ಧನಾಗುತ್ತೇನೆಂದು ಗೋ – ದೇವ – ಗುರು ಸನ್ನಿಧಿಯಲ್ಲಿ  ಪ್ರತಿಜ್ಞಾಬದ್ಧನಾಗುತ್ತೇನೆ.

ಭೂ ಮಂಗಲ ಯಾತ್ರೆ: ಪೇಜಾವರ ಶ್ರೀ ಸಂದೇಶ
ಗೋಯಾತ್ರಾ ಮಹಾಮಂಗಲಕ್ಕೆ ಪರ್ಯಾಯ ಶ್ರೀ ಪೇಜಾವರ ಮಠಾಧೀಶ ಶ್ರೀ ವಿಶ್ವೇಶತೀರ್ಥರು ವಿಡಿಯೋ ಮೂಲಕ ಕಳುಹಿಸಿದ ಅನುಗ್ರಹ ಸಂದೇಶವನ್ನು ಪ್ರಸಾರ ಮಾಡಲಾಯಿತು.

ಸಾರಾಂಶ: ಗೋಮಾತೆಯು ಸರ್ವರ ಮಾತೆ. ಎಲ್ಲರಿಗೂ ಹಾಲುಣಿಸುವ ತಾಯಿ. ರಾಘವೇಶ್ವರ ಶ್ರೀಗಳ ನೇತೃತ್ವದ ಈ ಮಂಗಲ ಗೋಯಾತ್ರೆಯು ಭೂ ಮಂಗಲ ಯಾತ್ರೆಯೂ ಹೌದು. ಈ ಮೂಲಕ ರಾಜ್ಯ, ದೇಶದಲ್ಲಿ ಹೊಸ ಉತ್ಸಾಹ ಮೂಡಿದೆ. ಗೋಹತ್ಯೆ ನಿಷೇಧ ಕಾನೂನು ಜಾರಿಯಾಗಲಿ. ಗೋರಕ್ಷೆಯಿಂದ ದೇಶ ಸುಭಿಕ್ಷವಾಗಲಿ.

Advertisement

Udayavani is now on Telegram. Click here to join our channel and stay updated with the latest news.

Next