ಮುಂಬಯಿ: ಡಾ| ಜಿ. ಡಿ. ಜೋಶಿ ಸಾಹಿತ್ಯಕ ಮತ್ತು ಸಾಂಸ್ಕೃತಿಕ ಪ್ರತಿಷ್ಠಾನ ಮುಂಬಯಿ ಇದರ ವತಿಯಿಂದ ಮನೆಮನೆಯಲ್ಲಿ ಸಾಹಿತ್ಯ ಸ್ಪಂದನ ಕಾರ್ಯಕ್ರಮವು ಎ. 8 ರಂದು ಸಂಗೀತ ವಿದ್ವಾನ್ ಪಂಡಿತ್ ಜಿ. ಜಿ. ಜೋಶಿ ಅವರ ನೇತೃತ್ವದಲ್ಲಿ ಅವರ ಕಲ್ವಾದ ನಿವಾಸದಲ್ಲಿ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪಂಡಿತ್ ಜಿ. ಜಿ. ಜೋಶಿ ಅವರು ವಹಿಸಿದ್ದರು. ಸರೋಜಾ ಅಮಾತಿ ಅವರು ಪ್ರಾರ್ಥನೆಗೈದರು. ಶಾಂತಾ ಶಾಸ್ತ್ರೀ ಅವರು ಸ್ವರಚಿತ “ಪ್ರೇಮಪತ್ರ’ ಲೇಖನವನ್ನು ಪ್ರಸ್ತುತಪಡಿಸಿದರು.
ಕವಿ, ಲೇಖಕಿ ದಾಕ್ಷಾಯಿಣಿ ಯಡಹಳ್ಳಿ ಅವರು “ನಮನ’ ಮತ್ತು “ಸಂಸಾರ’ ಎಂಬ ಎರಡು ಕವನಗಳನ್ನು, ಸರೋಜಾ ಅಮಾತಿ ಅವರು “ನುಡಿನಮನ’ ಕವನವನ್ನು ವಾಚಿಸಿದರು. ಅನಸೂಯಾ ಯಾಳಗಿ ಅವರು “ಗೆಳತಿ ಶ್ರದ್ಧಾ’ ಕತೆಯನ್ನು ಓದಿದರೆ, ವಾಣಿ ಶೆಟ್ಟಿ ಅವರು “ಪ್ರೀತಿ’ ಮತ್ತು “ಪುಷ್ಪ’ ಕವನವನ್ನು ವಾಚಿಸಿದರು. ಅನಿತಾ ಪೂಜಾರಿ ತಾಕೊಡೆ ಅವರು “ಇಲ್ಲ ಇಲ್ಲವೆಂದರೆ ಕೇಳದೆ’ ಕವನವನ್ನು, ರಮೇಶ್ ಕೆ. ಪುತ್ರನ್ ಅವರು ದೇಶಪ್ರೇಮದ ಮೇಲೆ ಬರೆದಿರುವ “ಸಮಾಜ ಪ್ರಜ್ಞೆ, ಸಾಮಾಜಿಕ ಪ್ರಜ್ಞೆ’ ಲೇಖನವನ್ನು ಓದಿದರು.
ಶ್ರೀಕಾಂತ್ ಅಮಾತಿ ಅವರು ಗುರುರಾಘವೇಂದ್ರರ “ಗುರುವಾರ ಬಂತಮ್ಮಾ’, ಸಾಹಿತಿ ಡಾ| ಕರುಣಾಕರ ಶೆಟ್ಟಿ ಪಣಿಯೂರು ಅವರು “ಬೋಗನ್ ವಿಲ್ಲಾ’ ಕವನವನ್ನು ಪ್ರಸ್ತುತಪಡಿಸಿದರು.
ಪ್ರಾಯೋಜಕ ಜಿ. ಜಿ. ಜೋಶಿ ಅವರು “ಗಾನ ಸಾಮ್ರಾಜಿn ಡಾ| ಗಂಗೂಬಾಯಿ ಹಾನಗಲ್’ ಅವರ ಜೀವನದ ಬಗ್ಗೆ ಲೇಖನ ಮಂಡಿಸಿದರು. ಕವಿ, ರಂಗನಿರ್ದೇಶಕ ಸಾ. ದಯಾ, ನಾಟಕಕಾರ ರಮೇಶ್ ಶಿವಪುರ ಅವರು ಉಪಸ್ಥಿತರಿದ್ದರು.
ತಾರಾ ಬಂಗೇರ, ಅವರು ತನ್ನ “ಹರೆಯ’ ಮತ್ತು “ನಾಚಿಗೆ’ ಕವನಗಳನ್ನು ಓದಿದರು. ಡಾ| ಜಿ. ಡಿ. ಜೋಡಿ ಅವರು ಕಾರ್ಯಕ್ರಮದ ಮಹತ್ವವನ್ನು ವಿವರಿಸಿದರು. ಆಯೋಜಕರಾದ ಜಿ. ಜಿ. ಜೋಶಿ ಅವರು ಅಧ್ಯಕ್ಷೀಯ ಭಾಷಣದಲ್ಲಿ ಕನ್ನಡವನ್ನು ಕಟ್ಟಿ ಬೆಳೆಸುತ್ತಿರುವ ಡಾ| ಜಿ. ಡಿ. ಜೋಶಿ ಪ್ರತಿಷ್ಠಾನದ ಸಿದ್ಧಿ-ಸಾಧನೆಗಳನ್ನು ವಿವರಿಸಿದರು. ಡಾ| ಕರುಣಾಕರ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು. ಎಚ್. ಎಸ್. ಅಡೂರ ವಂದಿಸಿದರು. ಕನ್ನಡಾಭಿಮಾನಿಗಳು, ಸಾಹಿತ್ಯಾಭಿಮಾನಿಗಳು ಪಾಲ್ಗೊಂಡಿದ್ದರು.