ಕೊರಟಗೆರೆ : ಮಾಜಿ ಉಪಮುಖ್ಯಮಂತ್ರಿ ಡಾ.ಜಿ ಪರಮೇಶ್ವರ ಅವರ 71ನೇ ಹುಟ್ಟುಹಬ್ಬದ ಪ್ರಯುಕ್ತ ತಾಲೂಕು ಕಚೇರಿ ಆವರಣದಲ್ಲಿ ಅವರ ಅಭಿಮಾನಿಗಳಿಂದ ಕಿರು ಉದ್ಯಾನವನವನ್ನು ಲೋಕಾರ್ಪಣೆ ಮಾಡಿಸಲಾಯಿತು.
ಕೊರಟಗೆರೆ ತಾಲೂಕು ಡಾ. ಜಿ ಪರಮೇಶ್ವರ ಕ್ರೀಡಾ ಹಾಗೂ ಸಾಂಸ್ಕೃತಿಕ ವೇದಿಕೆ, ಮುಂಜಾನೆ ಗೆಳೆಯರ ಬಳಗ, ರಂಗಭೂಮಿ ಸಾಂಸ್ಕೃತಿಕ ವೇದಿಕೆ ಸಂಯುಕ್ತ ಆಶ್ರಯದಲ್ಲಿ ನಿರ್ಮಿಸಲಾದ ಕಿರು ಉದ್ಯಾನವನ್ನು ಶಾಸಕ ಡಾ. ಜಿ ಪರಮೇಶ್ವರ್ ಮುಖೇನ ಗಿಡ ನೆಟ್ಟು ನೀರೆರೆಯುವ ಮೂಲಕ ಸಾರ್ವಜನಿಕರ ಬಳಕೆಗೆ ಲೋಕಾರ್ಪಣೆ ಮಾಡಲಾಯಿತು.
ಕಿರು ಉದ್ಯಾನವನ್ನು ಲೋಕಾರ್ಪಣೆಯ ಬಳಿಕ ಮಾತನಾಡಿದ ಡಾ. ಜಿ ಪರಮೇಶ್ವರ್ ನನ್ನ 71ನೇ ಹುಟ್ಟುಹಬ್ಬದ ಪ್ರಯುಕ್ತ ನನ್ನ ಅಭಿಮಾನಿಗಳು ನನ್ನ ಮೇಲಿನ ಪ್ರೀತಿಯಿಂದ ತಾಲೂಕು ಆಡಳಿತ ಕಂದಾಯ ಇಲಾಖೆಗೆ ಬರುವ ಸಾರ್ವಜನಿಕರ ಅನುಕೂಲಕ್ಕಾಗಿ ಕಿರು ಉದ್ಯಾನವನ ನಿರ್ಮಿಸಿರುವುದು ಬಹಳಷ್ಟು ಸಾರ್ವಜನಿಕರಿಗೆ ಅನುಕೂಲಕರವಾಗಲಿದ್ದು, ತಾಲೂಕು ಕಚೇರಿಗೆ ಬರುವಂತ ಬಹಳಷ್ಟು ಜನರಿಗೆ ಕುಳಿತುಕೊಳ್ಳಲು ಸರಿಯಾದ ಆಸನ ವ್ಯವಸ್ಥೆ ಗಳಿಲ್ಲದೆ ಪರದಾಡುವಂತಹ ಸಮಸ್ಯೆಯನ್ನು ಅಭಿಮಾನಿಗಳು ನನ್ನ ಹುಟ್ಟು ಹಬ್ಬ ಸಂದರ್ಭದಲ್ಲಿ ಸಾರ್ವಜನಿಕರ ಬಳಕೆಗೆ ಲೋಕಾರ್ಪಣೆ ಮಾಡಿರುವುದು ತುಂಬಾ ಉತ್ತಮ ಬೆಳವಣಿಗೆಯಾಗಿದೆ ಎಂದು ಹರ್ಷ ವ್ಯಕ್ತಪಡಿಸಿದರು.
ತಾಲೂಕು ಕಂದಾಯ ಇಲಾಖೆ ಆವರಣದಲ್ಲಿ ವೃದ್ಧಾಪ್ಯ- ವಿಧವೆ-ಅಂಗವಿಕಲ ಅಸಹಾಯಕ ಜನರು ತಾಲೂಕು ಕಚೇರಿಗೆ ಬಂದ ಸಂದರ್ಭದಲ್ಲಿ ಒಂದಷ್ಟು ವಿಶ್ರಾಂತಿ ಪಡೆಯಲು ಈ ಆಸನ ವ್ಯವಸ್ಥೆಯಿಂದ ತುಂಬಾ ಅನುಕೂಲಕರವಾಗಿದ್ದು, ತಮ್ಮ ಹುಟ್ಟು ಹಬ್ಬ ಸಂದರ್ಭದಲ್ಲಿ ಲೋಕಾರ್ಪಣೆಗೊಂಡಿರುವುದು ಉತ್ತಮ ಬೆಳವಣಿಗೆಯಾಗಿದೆ ಎಂದರು.
ಈ ಸಂದರ್ಭದಲ್ಲಿ ತಹಶಿಲ್ದಾರ್ ನಾಹಿದಾ ಜಮ್ ಜಮ್, ಪಪಂ ಸದಸ್ಯ ಕೆ ಆರ್ .ಓಬಳರಾಜ್, ಎ ಡಿ ಬಲರಾಮಯ್ಯ, ಮುಂಜಾನೆ ಗೆಳೆಯರ ಬಳಗದ ಅಧ್ಯಕ್ಷ ಎಲ್ ರಾಜಣ್ಣ, ರಂಗಭೂಮಿ ಸಾಂಸ್ಕೃತಿಕ ವೇದಿಕೆ ಅಧ್ಯಕ್ಷ ಪುಟ್ಟಣ್ಣ, ಮುಖಂಡರಾದ ಕೆ ವಿ ಮಂಜುನಾಥ್, ಕೆಎಂ ಸುರೇಶ್, ಕೆ ಬಿ ಸುನಿಎಲ್, ಜಿಕೆ ಕುಮಾರ್ ,ಕಾರು ಮಹೇಶ್, ದಿವ್ಯ ಪ್ರಸಾದ್, ಖಡ್ಗ ತಿಮ್ಮರಾಜು, ಚಿನ್ನ ವೆಂಕಟಶೆಟ್ಟಿ, ಚನ್ನವೀರಯ್ಯ ಸೇರಿದಂತೆ ಹಲವರು ಹಾಜರಿದ್ದರು.