Advertisement

ಕಾಂಗ್ರೆಸ್‌ಗೆ ಸವಾಲು ಹಾಕದೆ ಬಿಜೆಪಿಯವರೇ ದಲಿತ ಸಿಎಂ ಘೋಷಿಸಲಿ; ಡಾ. ಪರಮೇಶ್ವರ್ ಸವಾಲು

07:59 PM Jan 05, 2023 | Team Udayavani |

ಬಳ್ಳಾರಿ: ಬಿಜೆಪಿಯವರು, ದಲಿತ ಸಿಎಂ ಘೋಷಣೆ ಮಾಡುವಂತೆ ಬರೀ ಕಾಂಗ್ರೆಸ್‌ನವರಿಗೆ ಸವಾಲು ಹಾಕುವುದಲ್ಲ. ಬಿಜೆಪಿಯವರು ಏಕೆ ದಲಿತ ಸಿಎಂ ಘೋಷಣೆ ಮಾಡಬಾರದು? ಎಂದು ಮಾಜಿ ಉಪಮುಖ್ಯಮಂತ್ರಿ ಡಾ. ಜಿ.ಪರಮೇಶ್ವರ್ ಸವಾಲು ಹಾಕಿದರು.

Advertisement

ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿಯವರು, ದಲಿತ ಸಿಎಂ ಮಾಡುವಂತೆ ಬರೀ ಕಾಂಗ್ರೆಸ್ ಪಕ್ಷಕ್ಕೆ ಸವಾಲು ಹಾಕುವುದಲ್ಲ. ಬಿಜೆಪಿಯವರು ಏಕೆ ದಲಿತ ಮುಖ್ಯಮಂತ್ರಿಯನ್ನು ಘೋಷಣೆ ಮಾಡಬಾರದು? ನೀವೂ ಘೋಷಣೆ ಮಾಡಿ ನೋಡೋಣ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸುತ್ತಾ ಬಿಜೆಪಿಯವರಿಗೆ ಸವಾಲು ಹಾಕಿದರು.

ಇದೇ ಏಪ್ರಿಲ್ ತಿಂಗಲ್ಲಿ ರಾಜ್ಯ ವಿಧಾನಸಭೆಗೆ ಸಾರ್ವತ್ರಿಕ ಚುನಾವಣೆ ನಡೆಯಲಿದೆ. ಮುಖ್ಯಮಂತ್ರಿ ವಿಚಾರಕ್ಕೆ ಸಂಬಂಧಿಸಿದಂತೆ ಚುನಾವಣೆಯಲ್ಲಿ ಬಹುಮತ ಬಂದಲ್ಲಿ ಸಿಎಲ್‌ಪಿ ಸಭೆಯನ್ನು ಕರೆದು, ದೆಹಲಿಯಿಂದ ಬರುವ ವರಿಷ್ಠರು ಶಾಸಕರ ಅಭಿಪ್ರಾಯ ಸಂಗ್ರಹಿಸಲಿದ್ದಾರೆ. ಹೆಚ್ಚಿನ ಶಾಸಕರು ಯಾರ ಪರವಾಗಿ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ ಅಂತಹವರನ್ನು ಹೈಕಮಾಂಡ್ ಮುಖ್ಯಮಂತ್ರಿಯನ್ನಾಗಿ ಘೋಷಣೆ ಮಾಡಲಿದೆ ಎಂದು ಸ್ಪಷ್ಟಪಡಿಸಿದರು.

ನಾನು ಪವರ್ ಫುಲ್;
ಮುಖ್ಯಮಂತ್ರಿ ಸ್ಥಾನ ತಪ್ಪಿದ ಬಳಿಕ ಪಕ್ಷದಲ್ಲಿ ನಾನು ನೇಪತ್ಯಕ್ಕೆ ಸರಿದಿಲ್ಲ. ಅಂದು- ಇಂದು ನಾನು ಪವರ್ ಫುಲ್ ಆಗಿದ್ದೇನೆ. ಕೆಪಿಸಿಸಿ ಅಧ್ಯಕ್ಷರಾಗಿ ಡಿ.ಎ.ಶಿವಕುಮಾರ್, ಮಾಜಿ ಸಿಎಂ ಸಿದ್ದರಾಮಯ್ಯ ಸಿಎಲ್‌ಪಿ ನಾಯಕರಾಗಿದ್ದಾರೆ. ಹಾಗಾಗಿ ಸ್ವಾಭಾವಿಕವಾಗಿ ಅವರು ಮುಂಚೂಣಿಯಲ್ಲಿರುತ್ತಾರೆ. ಸ್ವಲ್ಪ ನಾನು ಹಿಂದಿದ್ದೇನೆ ಅನ್ನಿಸಿರಬಹುದು. ಆದರೆ, ನಾನು ಅಂದು – ಇಂದು ಪವರ್‌ಫುಲ್ ಆಗಿದ್ದೇನೆ ಎಂದು ತಿಳಿಸಿದರು.

ಇದೇ ವೇಳೆ ಪಕ್ಷದಲ್ಲಿ ನಾವೆಲ್ಲರೂ ಒಗ್ಗಟ್ಟಾಗಿದ್ದೇವೆ ಎಂದ ಡಾ. ಜಿ.ಪರಮೇಶ್ವರ್ ಅವರು, 2019 ರಲ್ಲಿ ಕಾಂಗ್ರೆಸ್ ಜೆಡಿಎಸ್ ಸಮ್ಮಿಶ್ರ ಸರ್ಕಾರವನ್ನು ಕೆಡವಿದ್ದು ಯಾರೆಂಬುದು ಜನರಿಗೆ ಗೊತ್ತಿದೆ. 17 ಶಾಸಕರನ್ನು ಮುಂಬೈಗೆ ಕರೆದುಕೊಂಡು ಹೋಗಿದ್ದು, ಹೋಟೇಲ್‌ನಲ್ಲಿ ತಂಗಿದ್ದು, ರಾಜೀನಾಮೆ ನೀಡಲು ಓಡೋಡಿ ಬಂದಿದ್ದು ಎಲ್ಲವೂ ಜನರಿಗೆ ಗೊತ್ತಿದೆ. ಪಕ್ಷದಲ್ಲಿ ನಾವೆಲ್ಲ ಒಗ್ಗಟ್ಟಾಗಿದ್ದೇವೆ. ಆದರೆ, ಕೆಲವೊಂದು ಅಭಿಪ್ರಾಯ ಭೇದಗಳಿರಬಹುದು ಎಂದು ಸ್ಪಷ್ಟಪಡಿಸಿದರು.

Advertisement

ಸುದ್ದಿಗೋಷ್ಠಿಯಲ್ಲಿ ಮಾಜಿ ಸಚಿವ ಡಾ. ಹೆಚ್.ಸಿ.ಮಹಾದೇವಪ್ಪ, ಮಾಜಿ ಸಂಸದ ಬಿ.ಎನ್.ಚಂದ್ರಪ್ಪ, ಶಾಸಕರಾದ ಪಿ.ಟಿ.ಪರಮೇಶ್ವರ್ ನಾಯ್ಕ್, ಈ.ತುಕಾರಾಂ, ಬಿ.ನಾಗೇಂದ್ರ, ಜೆ.ಎನ್.ಗಣೇಶ್, ಮೇಯರ್ ರಾಜೇಶ್ವರಿ ಸುಬ್ಬರಾಯುಡು, ಜಿಲ್ಲಾಧ್ಯಕ್ಷ ಜಿ.ಎಸ್.ಮಹಮ್ಮದ್ ರಫೀಕ್, ಹಿರಿಯ ಮುಖಂಡರಾದ ಮುಂಡ್ರಿಗಿ ನಾಗರಾಜ್, ಎ.ಮಾನಯ್ಯ ಸೇರಿದಂತೆ ಹಲವರು ಇದ್ದರು.

ಇದನ್ನೂ ಓದಿ: ವಿಮಾನದಲ್ಲೇ ಮಹಿಳಾ ಪ್ರಯಾಣಿಕರೊಬ್ಬರ ಮೇಲೆ ಮೂತ್ರ ವಿಸರ್ಜನೆ; ಡಿಜಿಸಿಎ ಆಕ್ರೋಶ

Advertisement

Udayavani is now on Telegram. Click here to join our channel and stay updated with the latest news.

Next