Advertisement

ಗ್ಯಾರಂಟಿ ಕಾರ್ಡ್ ಮನೆ-ಮನೆಗೆ ತಲುಪಿಸುವ ಅಭಿಯಾನದಲ್ಲಿ ಡಾ.ಜಿ.ಪರಮೇಶ್ವರ್

09:10 PM Mar 15, 2023 | Team Udayavani |

ಕೊರಟಗೆರೆ: ತಾಲೂಕಿನ ಹುಲಿಕುಂಟೆ ಗ್ರಾಮದಲ್ಲಿ ಕಾಂಗ್ರೆಸ್ ಪಕ್ಷದ ಮುಖ್ಯ ಪ್ರಣಾಳಿಕೆಯ ಗ್ಯಾರಂಟಿ ಕಾರ್ಡಗಳನ್ನು ಮನೆ-ಮನೆಗೆ ತಲುಪಿಸುವ ಅಭಿಯಾನಕ್ಕೆ ಶಾಸಕ ಡಾ.ಜಿ.ಪರಮೇಶ್ವರ ಚಾಲನೆ ನೀಡಿ ಗ್ರಾಮದ ಹಲವು ಮನೆಗಳಿಗೆ ವಿತರಿಸಿದರು.

Advertisement

ನಂತರ ಪತ್ರಕರ್ತರೊಂದಿಗೆ ಮಾತನಾಡಿ, 2023ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುವುದು ಖಚಿತ, ಚುನಾವಣೆಗೆ ಮುಂಚಿತವಾಗಿ ನಮ್ಮ ಪಕ್ಷವು ಹಲವು ಭರವಸೆಗಳನ್ನು ಜನತೆಗೆ ನೀಡಲಿದೆ ಆದರೆ ಅದರಲ್ಲಿ ೩ ಮುಖ್ಯ ಪ್ರಣಾಳಿಕೆಗಳಾದ ಪ್ರತಿ ಕುಟುಂಬದ ಮನೆಯನ್ನು ನಿಭಾಯಿಸುವ ಗೃಹಿಣಿಗೆ ತಿಂಗಳಿಗೆ 2 ಸಾವಿರ ರೂಗಳನ್ನು ತಲುಪಿಸುವ ಭರವಸೆಯನ್ನು ನೀಡಿದ್ದೇವೆ, ಇದನ್ನು ಜಾತ್ಯಾತೀತವಾಗಿ, ಧರ್ಮಾತೀತವಾಗಿ ಎಲ್ಲಾ ಬಡ ವರ್ಗದ ಕುಟುಂಬದವರೆಗೂ ನೀಡುತ್ತೇವೆ ಇದನ್ನು ಖಚಿತ ಗೊಳಿಸಲು ಪ್ರತಿ ಕುಟುಂಬದ ಒಡತಿಗೆ ಪಕ್ಷದಿಂದ ನಮ್ಮ ಪಕ್ಷದ ಅಧ್ಯಕ್ಷರಾದ ಡಿ.ಕೆ.ಶಿವಕುಮಾರ್ ಮತ್ತು ನಾಯಕರಾದ ಸಿದ್ದರಾಮಯ್ಯ ರವರ ಸಹಿಯೊಂದಿಗೆ ಗ್ಯಾರಂಟಿ ಕಾರ್ಡ್ ರೂಪದಲ್ಲಿ ನೀಡಿ ಖಚಿತ ಗೊಳಿಸುತ್ತಿದ್ದೇವೆ.

ನಮ್ಮ ಸರ್ಕಾರ ಬಂದ ಮೊದಲ ದಿನವೇ ಇದನ್ನು ಆದೇಶಿಸಲಾಗುತ್ತದೆ ಇದರೊಂದಿಗೆ ಪ್ರತಿ ಕುಟುಂಬ ಒಬ್ಬ ವ್ಯಕ್ತಿಗೆ ತಲಾ ೧೦ ಕೆ.ಜಿ.ಅಕ್ಕಿ, ಹಾಗೂ ಪ್ರತಿ ಮನೆಗೆ 200 ಯೂನಿಟ್ ವಿದ್ಯುತ್ ಉಚಿತವಾಗಿ ನೀಡುವುದನ್ನು ಖಾಯಂ ಗೊಳಿಸಿ ಪ್ರತಿ ಮನೆಗೆ ನಮ್ಮ ಮುಖಂಡರು ಕಾರ್ಯಕರ್ತರು ಹಂಚಲ್ಲಿದ್ದಾರೆ, ಹಾಗೂ ಇದರೊಂದಿಗೆ ೫ ವರ್ಷದಲ್ಲಿ ಇಡೀ ಕ್ಷೇತ್ರದ ಅಭಿವೃದ್ದಿಗೆ ೨೫೨೩ ಕೋಟಿ ಅನುದಾನ ತಂದಿದ್ದು ಅದರಲ್ಲಿ ಆಯಾ ಪಂಚಾಯಿತಿಗಳಿಗೆ ಎಷ್ಟು ಕೋಟಿ ಅನುದಾನ ನೀಡಿರುವ ಬಗ್ಗೆ ವಿವರದ ಪುಸ್ತಕಗಳನ್ನು ಸಹ ನೀಡುತ್ತಿದ್ದೇವೆ ಎಂದರು.

ಈ ಗ್ಯಾರಂಟಿ ಕಾರ್ಡ್ ವಿರತಣೆಯನ್ನು ರಾಜ್ಯಾದ್ಯಾಂತ ನಮ್ಮ ಪಕ್ಷದ ಎಲ್ಲಾ ನಾಯಕರು, ಶಾಸಕರು ಹಾಗೂ ಮುಖಂಡರು ಚಾಲನೆ ನೀಡಿದ್ದಾರೆ, ಅದೇ ರೀತಿಯಾಗಿ ಕೊರಟಗೆರೆ ವಿಧಾನ ಸಭಾ ಕ್ಷೇತ್ರದಲ್ಲಿ ಹೂಲಿಕುಂಟೆ ಗ್ರಾಮದಲ್ಲಿ ಮನೆಗಳಿಗೆ ಹಂಚುವ ಮೂಲಕ ಚಾಲನೆ ನೀಡಲಾಗಿದೆ. ಪಕ್ಷದ ಚುನಾವಣಾ ಪ್ರಣಾಳಿಕೆ ಅಧ್ಯಕ್ಷ ಆಗಿರುವ ನಾನು ರಾಜ್ಯದಲ್ಲಿ ಎಲ್ಲಾ ಪಕ್ಷದ ಎಲ್ಲಾ ನಾಯಕರು, ಮುಖಂಡರು ಹಾಗೂ ವಿವಿಧ ಸಂಘ ಸಂಸ್ಥೆಗಳೊಂದಿಗೆ ಚರ್ಚಿಸಿ ರೈತರಿಗೆ, ಕಾರ್ಮಿಕರಿಗೆ, ನಿರುದ್ಯೋಗಿ ಯುವಕ ಯುವತಿಯರಿಗೆ, ಮಹಿಳೆಯರಿಗೆ, ಬೀದಿ ವ್ಯಾಪಾರಿಗಳಿಗೆ, ಸಣ್ಣ ವ್ಯಾಪಾರಿಗಳಿಗೆ ಸೇರಿದಂತೆ ಎಲ್ಲಾ ವರ್ಗದ ಜನರಿಗೆ ಉಪಯೋಗವಾಗುವ ಪ್ರಣಾಳಿಕೆ ಮಾಡಿ ಜಾರಿಗೆ ತರಲಾಗುವುದು ಎಂದರು.

ಈ ಸಂದರ್ಭಧಲ್ಲಿ ಕಸಬಾ ಹೋಬಳಿಯ ಮುಖಂಡ ಹೂಲಿಕುಂಟೆ ಪ್ರಸಾದ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಚಂದ್ರಶೇಖರ್ ಗೌಡ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರುಗಳಾದ ಅಶ್ವತ್ಥನಾರಾಯಣ್, ಅರಕೆರ ಶಂಕರ್, ಮಹಿಳಾ ಅಧ್ಯಕ್ಷೆ ಜಯಮ್ಮ, ಗ್ರಾ.ಪಂ.ಸದಸ್ಯರುಗಳಾದ ಮಲ್ಲಿಕಾರ್ಜುನಯ್ಯ, ಜಯಮ್ಮ, ಮುಖಂಡರುಗಳಾದ ಗಿರೀಶ್, ಹೆಚ್.ಬಿ.ಶಿವಾನಂದ್, ಜ್ಯೋತಿ ಪ್ರಕಾಶ್, ಮಹೇಶ್, ನಾಗರತ್ನಮ್ಮ, ನರಸೀಯಪ್ಪ, ಹೆಚ್.ಪಿ.ರಾಜಣ್ಣ, ತ್ರಿಯಂಭಕಾರಾದ್ಯ, ಸಲಾಮ್, ದಾದಾಪೀರ್, ಖಲೀಲ್, ಶಿವಕುಮಾರ್, ಮುತ್ತಪ್ಪ ಸೇರಿದಂತೆ ಇನ್ನಿತರರು ಹಾಜರಿದ್ದರು.

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next