Advertisement

ಧರ್ಮಸ್ಥಳ ಲಕ್ಷದೀಪೋತ್ಸವ ಕುರಿತು ಭಕ್ತರಿಗೆ ಡಾ. ವೀರೇಂದ್ರ ಹೆಗ್ಗಡೆ ಸಂದೇಶ | Udayavani

11:55 PM Dec 10, 2020 | Team Udayavani |
ಶ್ರೀ ಕ್ಷೇತ್ರ‌ ಧರ್ಮಸ್ಥಳ ಪ್ರಮುಖವಾದುದು ಮೂರು ಜಾತ್ರೆಗಳು ಪ್ರಮುಖವಾದುದಾಗಿದೆ. ಮೊದಲನೆಯದಾಗಿ ಕಾರ್ತಿಕ ಮಾಸದಲ್ಲಿ ಬರುವಂತಹ ಲಕ್ಷದೀಪೋತ್ಸವ. ಎರಡನೆಯದಾಗಿ ಬರುವಂತಹದು ಶಿವರಾತ್ರಿ. ಇದು ಮಂಜುನಾಥ ಸ್ವಾಮಿಗೆ ಜನರು ಬಹಳ ವಿಶೇಷವಾಗಿ ಭಕ್ತಿಯಿಂದ ನಡೆದುಕೊಳ್ಳುವ ಹಬ್ಬ. ಇನ್ನು ಏಪ್ರಿಲ್ ತಿಂಗಳ 13ರಿಂದ 24ರವರೆಗೆ ನಡೆಯುವ ವಿಷು ಜಾತ್ರೆ ನಡೆಯುತ್ತದೆ. ಈ ಮೂರು ಜಾತ್ರೆಗಳು ಧರ್ಮಸ್ಥಳ ಜಾತ್ರೆಗಳ ಪೈಕಿ ಹೆಗ್ಗುರುತಾಗಿ ಆರಾಧಿಸಲ್ಪಡುತ್ತದೆ. ಆದರೆ ಕಾರ್ತಿಕ ಮಾಸದ ರೀತಿ ನೀತಿ, ನಿಯಮಗಳಲ್ಲಿ ಸ್ವಲ್ಪ ಸಡಿಲಿಕೆಗಳಿರುತ್ತವೆ. ಧರ್ಮಸ್ಥಳ ಲಕ್ಷದೀಪೋತ್ಸವ ಸಂದರ್ಭದಲ್ಲಿ ಮಂಜುನಾಥ ಸ್ವಾಮಿಗೆ 5 ಕಟ್ಟೆಗಳಿಗೆ ಹೋಗಿ ವಿಶೇಷ ಪೂಜೆ ಸಲ್ಲಿಸಲಾಗುತ್ತವೆ. ವಿಷೇಷ ವಾಹನಗಳಾದ ಬೆಳ್ಳಿರಥ, ನಂದಿ ವಾಹನ, ಅಷ್ಟಪಟ್ಟಿ ಪಲ್ಲಕ್ಕಿ ಮೂಲಕ ವಿಶೇಷ ಪೂಜೆ ನಡೆಯುತ್ತದೆ. ಈ ನಡುವೆ ಭಕ್ತರ ಮನೋರಂಜನೆಗಾಗಿ ಮತ್ತು ಸಂತೆಗೆ ಹಿಂದೆ ಅವಕಾಶ ಕಲ್ಪಿಸಲಾಗುತ್ತದೆ. ಈ ಬಾರಿ ಕರೊನಾ ಇರೋದರಿಂದ ವಸ್ತುಪ್ರದರ್ಶನ ಮತ್ತು ಬೀದಿ ಬದಿಯ ಅಂಗಡಿಗಳನ್ನು ಹಾಕಲು ತಡೆಹಿಡಿಯಲಾಗಿದೆ. ಜನರು ಎಚ್ಚರಿಕೆಯಿಂದ ಭಾಗವಹಿಸಬೇಕು. ಅಂತರ ಇಡುವುದು ಕಷ್ಟವಾಗಿರುವುದರಿಂದ ಮಾಸ್ಕ್ ಕಡ್ಡಾಯವಾಗಿ ಬಳಸಬೇಕಿದೆ. ಇದರ ಜತೆಗೆ ಕನಿಷ್ಠ 6 ಸಲ Disinfections ಆಗದಾಗೆ ಸ್ಪ್ರೇ (ಭಕ್ತರು ಹೋಗುವ ದಾರಿ, ಶೌಚಾಲಯ) ಮಾಡಿ ಸಾಕಷ್ಟು ಮುನ್ನೆಚ್ಚರಿಕೆ ವಹಿಸಿದ್ದೇವೆ. ಈ ವರ್ಷ ಲಕ್ಷ ದೀಪೋತ್ಸವದ ಅವಧಿಯಲ್ಲಿ ನಡೆಯುವ ಸರ್ವಧರ್ಮ ಮತ್ತು ಸಾಹಿತ್ಯ ಸಮ್ಮೇಳಗಳನ್ನ ಆನ್ ಲೈನ್ ನಲ್ಲಿ ಪ್ರಸಾರ ಪ್ರಚಾರ ಮುಂದಾಗಿದ್ದೇವೆ. ಧರ್ಮದ ವಿಚಾರದಲ್ಲಿ ಆಸಕ್ತಿ ಇದ್ದಾರೆ, ಸಾಹಿತ್ಯದ ಬಗ್ಗೆ ಕುತೂಹಲ ಇರುವವರಿಗೆ ಮನೆಯಲ್ಲೇ ಕುಳಿತು ಅದನ್ನ ನೋಡುವಂತ ಅವಕಾಶ ಮಾಡಿಕೊಡುತ್ತೇವೆ. ಲಕ್ಷದೀಪೋತ್ಸವ ಮಾಮೂಲಿ ಆಗಿ ಸ್ವಾಮಿಗೆ ನಡೆಯುವ ಸೇವೆ ನಡೆಯುತ್ತವೆ. ಆದರೆ ಬಾಹ್ಯವಾದಂತಹ ಕೆಲ ಚಟುವಟಿಕೆಗಳನ್ನು ನಿಯಂತ್ರಣದಲ್ಲಿ ಇರಿಸಿದ್ದೇವೆ. ಹೆಚ್ಚಾಗಿ ಧರ್ಮಸ್ಥಳ ಕ್ಷೇತ್ರಕ್ಕೆ ಶಿವರಾತ್ರಿಯಂದು ಪಾದಯಾತ್ರಿಗಳ ದಂಡೆ ಹರಿದುಬರುತ್ತದೆ. ಲಕ್ಷದೀಪೋತ್ಸವಕ್ಕೆ ಹೆಚ್ಚಿಗೆ ಬರುವುದಿಲ್ಲ. ಇತ್ತೀಚಿನ 25 ವರ್ಷಗಳಿಂದೀಚೆಗೆ ಪ್ರಾರಂಭವಾಗಿದ್ದು, ಹಿಂದೆ ಇರಲಿಲ್ಲ. ಆದರೂ ಲಕ್ಷದೀಪೋತ್ಸವಕ್ಕೆ ಪಾದಯಾತ್ರಿಗಳು ಬರುವ ನಿರೀಕ್ಷೆಯಿಲ್ಲ. ಕನಿಷ್ಟಪಕ್ಷ ಮುಂದಿನ ಮಾರ್ಚ್ ಶಿವರಾತ್ರಿವರೆಗೆ ಸಂಯಮ ಕಾಪಾಡಿಕೊಂಡು ಯಾವುದೇ ಪಾದೆಯಾತ್ರೆ ಅಥವಾ ಜನಸಂದಣಿ ಮಾಡುವಂತ ವಿಚಾರಗಳಿಂದ ದೂರವಿರಿ ಎಂಬುದು ನಮ್ಮ ಕಳಕಳಿಯಾಗಿದೆ. ನೇತ್ರಾವತಿ ಸ್ನಾನಘಟ್ಟ ಪ್ರಾದೇಶಿಕವಾಗಿ ನಾನಾ ದೇಶ, ರಾಜ್ಯಗಳಿಂದ ಕ್ಷೇತ್ರಕ್ಕೆ ಭೇಟಿ ನೀಡುತ್ತಾರೆ. ಬಿನ್ನ ಸ್ವಭಾವದವರೆಂಬ ಕಲ್ಪನೆಯಾಗಿದೆ. ಯಾವುದೇ ವಿಚಾರವನ್ನು ನಿಯಂತ್ರಿಸಬಹುದೇ ವಿನಃ ನಿರ್ಬಂಧ ಹೇರುವುದು ಸಾಧ್ಯವಿಲ್ಲ. ಹಾಗಾಗಿ ನಾವು ಸರಕಾರದ ಸಹಕಾರದಿಂದ ಸ್ನಾನಘಟ್ಟ ಹೊಸದಾಗಿ ನಿರ್ಮಾಣ ಮಾಡಲು ಮುಂದಾಗಿದ್ದೇವೆ. ಬಟ್ಟೆಯನ್ನು ನೀರಿಗೆ ಎಸೆಯುವುದು ಸಾಬೂನು, ದಿನಬಳಕೆ ವಸ್ತುಗಳನ್ನು ಎಲ್ಲೆಂದರಲ್ಲೆ ಎಸೆಯುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಕಾನೂನು ರೀತಿಯಲ್ಲಿ ನದಿಗಳಿಗೆ ಬಟ್ಟೆ ಇನ್ನಿತರ ವಸ್ತು ಎಸೆಯದಂತೆ ನಿಯಂತ್ರಿಸಲು ಪ್ರಯತ್ನಿಸುತ್ತಿದ್ದೇವೆ. * ಕೊರೊನಾದ ಕೊಡುಗೆ ಯಕ್ಷಗಾನ ಹಾಗೂ ಸಾಂಸ್ಕೃತಿಕ ಪ್ರದರ್ಶನಕ್ಕೆ ತೀವ್ರವಾದ ಹೊಡೆತ ಬಿದ್ದಿದೆ ಎಂದು ತಿಳಿಯುತ್ತಿದ್ದೇನೆ. ನಾವೊಂದು ಊರಿಗೆ ಹೋಗಿ ಯಕ್ಷಗಾನ ಪ್ರದರ್ಶನ ಮಾಡಿದರೆ ಗರಿಷ್ಠ ಅಂದರೆ 3 ಸಾವಿರ ಮಂದಿ ಬರುತ್ತಿದ್ದರು. ಮುಂಜಾನೆಯಾದಾಗ ಬೆರಳೆನಿಕೆ ಜನ ಇರುತ್ತಿದ್ದರು. ಆದರೆ ಕಾಲಮಿತಿ ಆಗಿರುವುದರಿಂದ ಮತ್ತು ಸಾಮಾಜಿಕ ಜಾಲತಾಣದ ಪ್ರಸಾರ ಕೈಗೊಂಡಿರುವುದರಿಂದ ಕನಿಷ್ಠ ಪಕ್ಷ 20 ಸಾವಿರ ಮಂದಿ ಪ್ರತಿ ದಿವಸ ವೀಕ್ಷಣೆ ಮಾಡುತ್ತಿದ್ದಾರೆ. ಇದೊಂದು ಕೊರೊನಾದ ಕೊಡುಗೆಯಾಗಿದೆ. ಇತ್ತೀಚೆಗೆ ಬಯಲುಗಳು ಕಡಿಮೆಯಾಗಿ ಮನೆಗಳು ಹೆಚ್ಚಾಗತೊಡಗಿದೆ. ಇದರಿಂದ ಯಕ್ಷಗಾನ ಪ್ರರ್ಶನಕ್ಕೆ ಸ್ಥಳವಕಾಶ ಕೊರತೆಯಿಂದ ಈ ಬಾರಿ ಧರ್ಮಸ್ಥಳ ಕ್ಷೇತ್ರದಲ್ಲೇ ಸೇವಾರ್ಥಿಗಳ ಯಕ್ಷಗಾನ ಪ್ರದರ್ಶನಕ್ಕೆ ಹೊಸ ರೂಪ‌ನೀಡಲಾಗಿದೆ. ಬದಲಾವಣೆಗಳನ್ನ ನಾವು ಜನಪರ, ಕಲಾವಿದರು, ಯಕ್ಷಗಾನ ಪ್ರೇಮಿಗಳು, ಭಕ್ತರ ಪರವಾಗಿ ಬದಲಾವಣೆ ತರುತ್ತಿದ್ದೇವೆ. ಅದನ್ನ ಅವರ ಒಪ್ಪಿಕೊಳ್ಳುತ್ತಿದ್ದಾರೆ ಎನ್ನುವುದು ಸಂತೋಷ. ಈ ಬಾರಿ ಲಕ್ಷದೀಪೋತ್ಸವ ಸಂದರ್ಭ ಜನರ ಮನರಂಜನೆಗಾಗಿ ಕ್ಷೇತ್ರದಲ್ಲೆ ನಡೆಯುವ ಯಕ್ಷಗಾನ ಸೇವೆಯಾಟ ವೀಕ್ಷಣೆಗೂ ಒಂದು ಅವಕಾಶ ಸಿಕ್ಕಂತಾಗಿದೆ. ಲಕ್ಷದೀಪೋತ್ಸವ ಬಳಿಕ ತಕ್ಷಣ ಯಕ್ಷಗಾನ ಪ್ರವಾಸ ಆರಂಭವಾಗಲಿದೆ. ಲಕ್ಷದೀಪೋತ್ಸವಕ್ಕೆ ಬಹಳ ಸಾಂಪ್ರದಾಯ ಮಹತ್ವಿದೆ. ಧರ್ಮಸ್ಥಳವನ್ನು ಸೂಕ್ಷ್ಮವಾಗಿ ಗಮನಿಸಿದರೆ. ಪ್ರತಿ ಮೂಲೆಯಿಂದ ಬೃಹತ್ ಕಟ್ಟಡವರೆಗೆ ಎಲ್ಲವನ್ನೂ ಶುದ್ಧೀಕರಿಸಿ, ಬಣ್ಣ ಬಳಿದು ಸುಸ್ಥಿತಿಗೆ ತರುವಂತ ಕೆಲಸ ಕಳೆದ 150 ವರ್ಷಗಳಿಂದ ನಡೆಯುತ್ತಾ ಬಂದಿದೆ. ಮಹದ್ವಾರದಿಂದ ಹಿಡಿದು ದೇವಸ್ಥಾನ ಮತ್ತು ಎಲ್ಲೆಡೆ ಯುದ್ಧೋತ್ಸಾಹದಲ್ಲಿ ಕಳೆತುಂಬಿದೆ. ಲಕ್ಷದೀಪೋತ್ಸವ ಸಂಬರ್ಧದಲ್ಲಿ ಎಲ್ಲಾ ಚಟುವಟಿಕೆಗಳು ಶುದ್ಧೀಕರಿಸಿಕೊಂಡು ಅಲಂಕಾರದೊಂದಿಗೆ ಹೊಸ ಕಳೆ ಕೊಡುವುದೇ ಲಕ್ಷದೀಪೋತ್ಸವ ಕಲ್ಪನೆಯಾಗಿದೆ.
Advertisement

Udayavani is now on Telegram. Click here to join our channel and stay updated with the latest news.

Next