Advertisement

ತುಷ್ಟೀಕರಣ ರಾಜಕಾರಣ, ಕಾಂಗ್ರೆಸ್‌ಗೆ ತಕ್ಕ ಪಾಠ: ಸಚಿವ ಡಾ|ಅಶ್ವತ್ಥನಾರಾಯಣ

12:45 AM Jan 19, 2023 | Team Udayavani |

ಬಂಟ್ವಾಳ: ಕಾಂಗ್ರೆಸ್‌ ಅಧಿಕಾರದಲ್ಲಿದ್ದ ಸಂದರ್ಭ ತುಷ್ಟೀ ಕರಣ, ಅಧಿಕಾರದ ದುರ್ಬಳಕೆ, ಸ್ವಾರ್ಥ, ಕುಟುಂಬ ರಾಜಕಾರಣ ಮಾಡಿದ ಫಲವಾಗಿ ಜನತೆ ಅವರಿಗೆ ಸರಿಯಾದ ಪಾಠವನ್ನು ಕಲಿಸಿತ್ತು. ಬಿಜೆಪಿಯು ಕೋವಿಡ್‌ನ‌ಂತಹ ಪರಿಸ್ಥಿತಿಯಲ್ಲೂ ಜನಪರ ಆಡಳಿತ ನೀಡಿದ ಹೆಗ್ಗಳಿಕೆ ಗಳಿಸಿದೆ ಎಂದು ರಾಜ್ಯ ಉನ್ನತ ಶಿಕ್ಷಣ, ಐಟಿ-ಬಿಟಿ ಇಲಾಖೆ ಸಚಿವ ಡಾ| ಅಶ್ವತ್ಥನಾರಾಯಣ ಸಿ.ಎನ್‌. ಹೇಳಿದರು.

Advertisement

ಅವರು ಬುಧವಾರ ಸಂಜೆ ಕಲ್ಲಡ್ಕ ಶ್ರೀರಾಮ ಮಂದಿರದಲ್ಲಿ ಬಂಟ್ವಾಳ ಬಿಜೆಪಿ ವತಿಯಿಂದ ಶಾಸಕ ರಾಜೇಶ್‌ ನಾೖಕ್‌ ಉಳಿಪಾಡಿಗುತ್ತು ಅವರ ನೇತೃತ್ವದಲ್ಲಿ ನಡೆಯುತ್ತಿರುವ ಗ್ರಾಮವಿಕಾಸ ಯಾತ್ರೆ- ಗ್ರಾಮದೆಡೆಗೆ ಶಾಸಕರ ನಡಿಗೆಯ 5ನೇ ದಿನ ಸಮಾರೋಪ ಸಮಾರಂಭದಲ್ಲಿ ಪ್ರಧಾನ ಭಾಷಣ ಮಾಡಿದರು.

ಹಿಂದೆ ಸಿದ್ದರಾಮಯ್ಯ ಅಧಿಕಾರ ದಲ್ಲಿದ್ದಾಗ ಲೋಕಾಯುಕ್ತದ ಅಧಿಕಾರ ವನ್ನೇ ಹಿಂಪಡೆದು ಭ್ರಷ್ಟಾಚಾರಕ್ಕೆ ರಕ್ಷಣೆ ಕೊಡಿಸಿ ಬೆಳೆಸಿ, ಪೋಷಿಸುವ ಕಾರ್ಯ ಮಾಡಿದ್ದರು. 2018-19ರ ಸಮ್ಮಿಶ್ರ ಸರಕಾರದಲ್ಲಿ ಬರೀ ಕೆಲವೇ ಮಂದಿಗೆ ಕೇಂದ್ರದ ಕಿಸಾನ್‌ ಸಮ್ಮಾನ್‌ನ ಲಾಭ ಸಿಕ್ಕಿದ್ದು, ಆದರೆ ಬಿಜೆಪಿ ಸರಕಾರದಲ್ಲಿ ಲಕ್ಷಾಂತರ ಮಂದಿ ಇದರ ಪ್ರಯೋಜನ ಪಡೆದಿದ್ದಾರೆ. ಸರಳ ಸಜ್ಜನಿಕೆಯ ರಾಜೇಶ್‌ ನಾೖಕ್‌ ಮತ್ತೂಮ್ಮೆ ಶಾಸಕರಾಗಿ ಮಂತ್ರಿಯಾಗಿ ಬರಬೇಕು ಎಂದರು.

ಮಾಹಿತಿ ತಲುಪಿಸೋಣ
ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ. ನಾಗೇಶ್‌ ಮಾತ ನಾಡಿ, ಬಿಜೆಪಿ ಸರಕಾರವು ನೀಡಿದ ಹಲವಾರು ಯೋಜನೆ, ಮಾಹಿತಿ ಯನ್ನು ಸಮಾಜದ ಕಟ್ಟಕಡೆಯ ವ್ಯಕ್ತಿಗೂ ತಲುಪಿಸುವ ಹೊಣೆಗಾರಿಕೆ ನಮ್ಮೆಲ್ಲರ ಮೇಲಿದ್ದು, ಅದನ್ನು ಯಶಸ್ವಿಯಾಗಿ ಮಾಡಿದ್ದೇ ಆದಲ್ಲಿ ನಾವು ಮತ್ತೂಮ್ಮೆ ಅಧಿಕಾರಕ್ಕೆ ಬರುವಲ್ಲಿ ಯಾವುದೇ ಸಂದೇಶ ಬೇಡ ಎಂದರು.

ಅಭಿವೃದ್ಧಿಯೇ ಉತ್ತರ
ಬಂದರು, ಮೀನುಗಾರಿಕೆ ಇಲಾಖೆ ಸಚಿವ ಎಸ್‌. ಅಂಗಾರ ಮಾತನಾಡಿ, ಯುಪಿಎ ಸರಕಾರ ಅಧಿಕಾರದಲ್ಲಿದ್ದ ಸಂದರ್ಭದಲ್ಲಿ ಹೆದ್ದಾರಿ ಸೇರಿದಂತೆ ಇತರ ಅಭಿವೃದ್ಧಿ ಕಾರ್ಯಗಳ ಕುರಿತು
ಮಾತನಾಡದವರು ಬಿಜೆಪಿ ಸರಕಾರ ಬಂದ ತತ್‌ಕ್ಷಣ ನಮ್ಮ ನಾಯಕರನ್ನು ಗೇಲಿ ಮಾಡುತ್ತಿದ್ದಾರೆ. ಅಭಿವೃದ್ಧಿಯೇ ಅವರ ಟೀಕೆಗಳಿಗೆ ಉತ್ತರವಾಗಿದ್ದು, ರಾಜ್ಯ ಹಾಗೂ ಬಂಟ್ವಾಳದಲ್ಲಿ ವಿಜಯ ನಮ್ಮದೇ ಈ ಕುರಿತು ಯಾರಿಗೂ ಸಂಶಯ ಬೇಡ ಎಂದರು.

Advertisement

ಬಂಟ್ವಾಳ ಬಿಜೆಪಿ ಅಧ್ಯಕ್ಷ ದೇವಪ್ಪ ಪೂಜಾರಿ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಶಾಸಕ ಎ. ರುಕ್ಮಯ ಪೂಜಾರಿ, ಪಕ್ಷದ ಪ್ರಮುಖರಾದ ಸುಲೋಚನಾ ಜಿ.ಕೆ. ಭಟ್‌, ಡೊಂಬಯ ಅರಳ, ರವೀಶ್‌ ಶೆಟ್ಟಿ ಕರ್ಕಳ, ಮಾಧವ ಮಾವೆ, ಯಶೋಧರ ಕರ್ಬೆಟ್ಟು, ಮೋಹನ್‌ ಪಿ.ಎಸ್‌., ಸಂದೇಶ್‌ ಶೆಟ್ಟಿ, ಮೋನಪ್ಪ ದೇವಸ್ಯ, ವಿವಿಧ ಗ್ರಾ.ಪಂ.ಗಳ ಅಧ್ಯಕ್ಷರಾದ ಶಶಿಕಲಾ, ಅಭಿಷೇಕ್‌ ಶೆಟ್ಟಿ, ಹಿರಣ್ಮಯಿ ಉಪಸ್ಥಿತರಿದ್ದರು.

ಪಾದಯಾತ್ರೆಯ ಸಂಚಾಲಕ
ಬಿ. ದೇವದಾಸ್‌ ಶೆಟ್ಟಿ ಅವರು ಕ್ಷೇತ್ರದ ಅಭಿವೃದ್ಧಿಯ ವಿವರ ನೀಡಿದರು. ಮಾಜಿ ಶಾಸಕ ಕೆ. ಪದ್ಮನಾಭಕೊಟ್ಟಾರಿ ಸ್ವಾಗತಿಸಿದರು. ಕ್ಷೇತ್ರ ಉಪಾಧ್ಯಕ್ಷ ವಜ್ರನಾಥ ಕಲ್ಲಡ್ಕ ವಂದಿಸಿದರು. ಗೋಳ್ತಮಜಲು ಗ್ರಾ.ಪಂ. ಸದಸ್ಯ ರಾಜೇಶ್‌ ಕೊಟ್ಟಾರಿ ನಿರ್ವಹಿಸಿದರು.

ಟಿಕೆಟ್‌ ಕೊಡಿಸಿದ್ದು ಡಾ| ಪ್ರಭಾಕರ ಭಟ್‌
ನನಗೆ ಟಿಕೆಟ್‌ ಕೊಡಿಸಿದವರು ಆಶೀರ್ವಾದ ಮಾಡಿದವರು ಡಾ| ಪ್ರಭಾಕರ ಭಟ್ಟರು. 2008ರಲ್ಲಿ ಟಿಕೆಟ್‌ ಕೊಡುವ ಸಂದರ್ಭ ನನಗೆ ಕೊಡಬೇಕೋ, ಬೇಡವೋ ಎಂಬ ಗೊಂದಲ ಉಂಟಾದಾಗ ಡಾ| ಭಟ್ಟರು ನನ್ನ ಪರ ನಿಂತು ಟಿಕೆಟ್‌ ಕೊಡಿಸಿ ಆಶೀರ್ವಾದ ಮಾಡಿದ್ದರು ಎಂದು ಡಾ| ಅಶ್ವತ್ಥನಾರಾಯಣ ನೆನಪಿಸಿಕೊಂಡರು.

ಜ. 27ಕ್ಕೆ ಸಮಾರೋಪ
ಶಾಸಕ ರಾಜೇಶ್‌ ನಾೖಕ್‌ ಮಾತನಾಡಿ, ಯಾತ್ರೆಯ ಸಮಾರೋಪವು ಬಿ.ಸಿ.ರೋಡಿನಲ್ಲಿ ಜ. 26ರ ಬದಲಿಗೆ 27ಕ್ಕೆ ನಡೆಯುತ್ತಿದ್ದು, ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ, ತಮಿಳುನಾಡು ಬಿಜೆಪಿ ಅಧ್ಯಕ್ಷ ಅಣ್ಣಾಮಲೈ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ಕುಮಾರ್‌ ಕಟೀಲು ಸೇರಿದಂತೆ ಮೊದಲಾದ ಗಣ್ಯರು ಭಾಗವಹಿಸಲಿದ್ದಾರೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next