Advertisement

13 ಅಂತಸ್ತಿನ ಕಟ್ಟಡದಲ್ಲಿ ಭಾರಿ ಬೆಂಕಿ : 46 ಮಂದಿ ಸಜೀವ ದಹನ

04:10 PM Oct 14, 2021 | Team Udayavani |

ತೈಪೆ : 13 ಅಂತಸ್ತಿನ ಕಟ್ಟಡದಲ್ಲಿ ಗುರುವಾರ ನಸುಕಿನ 3 ಗಂಟೆಯ ವೇಳೆಗೆ ಭಾರಿ ಬೆಂಕಿ ಕಾಣಿಸಿಕೊಂಡು 46 ಮಂದಿ ಸಜೀವ ದಹನಗೊಂಡು 55 ಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡಿರುವ ಭೀಕರ ದುರಂತ ತೈವಾನ್ ನ ದಕ್ಷಿಣ ಭಾಗದಲ್ಲಿ ನಡೆದಿದೆ.

Advertisement

ಭಾರಿ ಸ್ಫೋಟದ ಬಳಿಕ ಬೆಂಕಿ ವ್ಯಾಪಿಸಿಕೊಂಡು ಹಲವರನ್ನು ಬಳಿ ಪಡೆದಿದೆ. ಬೆಂಕಿಯ ಕೆನ್ನಾಲಗೆಗೆ ಸಿಲುಕಿ ಹಲವಾರು ಸಜೀವವಾಗಿ ದಹನಗೊಂಡಿದ್ದರೆ ಇನ್ನು ಕೆಲವರನ್ನು ರಕ್ಷಿಸಲಾಗಿದೆ.

ಕಟ್ಟಡದ ಕೆಲ ಭಾಗದಲ್ಲಿ ಅಂಗಡಿ ಮತ್ತು ಮಳಿಗೆಗಳಿದ್ದು, ಮೇಲ್ಭಾಗದಲ್ಲಿ ಜನವಸತಿಯಿತ್ತು ಎಂದು ಮಾಧ್ಯಮಗಳು ವರದಿ ಮಾಡಿವೆ.

ಕೆಲ ಅಂತಸ್ತಿನಲ್ಲಿ ಬೆಂಕಿ ಕಾಣಿಸಿಕೊಂಡು ವ್ಯಾಪಿಸಿದ್ದು , ಭಾರಿ ಪ್ರಮಾಣದಲ್ಲಿ ಬೆಂಕಿ ಮತ್ತು ಹೋಗೆ ಸ್ಥಳದಲ್ಲಿ ಆವರಿಸಿತ್ತು ಎಂದು ವರದಿ ಲಭ್ಯವಾಗಿದೆ.

ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಬೆಂಕಿ ಹೊತ್ತಿಕೊಳ್ಳಲು ಕಾರಣವೇನೆಂಬುದು ಇನ್ನಷ್ಟೇ ತಿಳಿದು ಬರಬೇಕಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next