Advertisement

ವರದಕ್ಷಿಣಿ ಕಿರುಕುಳ: ಗೃಹಿಣಿ ಆತ್ಮಹತ್ಯೆ

11:40 AM Oct 30, 2017 | Team Udayavani |

ಬೆಂಗಳೂರು: ಪತಿಯ ವರದಕ್ಷಿಣೆ ಕಿರುಕುಳದಿಂದ ಬೇಸತ್ತು ನಾಯಂಡಹಳ್ಳಿ ತಿಗಳರ ತೋಟ ಬಡವಾಣೆಯಲ್ಲಿ ಪ್ರಭಾವತಿ (22) ಎಂಬಾಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಸಂಬಂಧ ಚಂದ್ರಲೇಔಟ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

ಶನಿವಾರ ಮಧ್ಯಾಹ್ನ 2 ಗಂಟೆ ಸುಮಾರಿಗೆ ಪತಿ ವೀರಭದ್ರ ಮನೆಯಲ್ಲಿಲ್ಲದ ವೇಳೆ 2 ವರ್ಷದ ಮಗನನ್ನು ಮಲಗಿಸಿ ಬಳಿಕ ಪ್ರಭಾವತಿ ಸೀಲಿಂಗ್‌ ಫ್ಯಾನಿಗೆ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ನಿದ್ದೆಯಿಂದ ಎಚ್ಚರಗೊಂಡ ಮಗು ತಾಯಿಯ ಬಳಿ ಹೋಗಿ ಜೋರಾಗಿ ಅಳಲಾರಂಭಿಸಿದೆ.

ಸುಮಾರು ಐದತ್ತು ನಿಮಿಷ ಮಗು ಅಳುತ್ತಲೇ ಇದ್ದುದ್ದರಿಂದ ನೆರೆಮನೆಯವರು ಮನೆಯ ಹತ್ತಿರ ಬಂದು ನೋಡಿದಾಗ, ಪ್ರಭಾವತಿ ಆತ್ಮಹತ್ಯೆ ಮಾಡಿಕೊಂಡಿರುವುದು ಗೊತ್ತಾಗಿದೆ. ಕೂಡಲೇ ಅವರು ವೀರಭದ್ರನಿಗೆ ವಿಷಯ ತಿಳಿಸಿದ್ದಾರೆ, ಮನೆಗೆ ಬಂದ ಆತ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸುವಷ್ಟರಲ್ಲಿ ಪತ್ನಿ ಮೃತಪಟ್ಟಿದ್ದಾಳೆ. 

ಪ್ರಭಾವತಿ ಸಾವಿನ ಸಂಬಂಧ ಆಕೆಯ ಪೋಷಕರು ನೀಡಿದ ವರದಕ್ಷಿಣೆ ಕಿರುಕುಳ ಆರೋಪ ಹಿನ್ನೆಲೆಯಲ್ಲಿ ಪ್ರಭಾವತಿ ವೀರಭದ್ರನ ವಿರುದ್ಧ ಐಪಿಸಿ ಕಲಂ 304(ಬಿ) ಅನ್ವಯ ಪ್ರಕರಣ ದಾಖಲಿಸಿಕೊಂಡು ಬಂಧಿಸಿ ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಯಿತು. ಸದ್ಯ ಆರೋಪಿ ನ್ಯಾಯಾಂಗ ಬಂಧನದಲ್ಲಿದ್ದಾನೆ ಎಂದು ಪೊಲೀಸರು ತಿಳಿಸಿದರು.

ಮೂಲತ: ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆಯವರಾದ ವೀರಭದ್ರ ಹಾಗೂ ಪ್ರಭಾವತಿ ಕಳೆದ ಮೂರು ವರ್ಷಗಳ ಹಿಂದೆ ಮದುವೆಯಾಗಿದ್ದಾರೆ. ತಿಗಳರ ತೋಟದ ಬಾಡಿಗೆ ಮನೆಯೊಂದರಲ್ಲಿ ದಂಪತಿ ವಾಸವಿದ್ದರು. ಕಾರು ಚಾಲಕನಾಗಿರುವ ವೀರಭದ್ರ ಕೆಲ ತಿಂಗಳಿನಿಂದ ತವರು ಮನೆಯಿಂದ ಹಣ ತಂದುಕೊಡುವಂತೆ ಒತ್ತಾಯಮಾಡುತ್ತಿದ್ದ.

Advertisement

ಪೋಷಕರಿಗೂ ವಿಷಯ ತಿಳಿಸಿದ್ದಳು. ಇದೇ ವಿಚಾರವಾಗಿ ಜಗಳವೂ ನಡೆಯುತ್ತಿತ್ತು. ಶನಿವಾರ ಬೆಳಿಗ್ಗೆಯೂ ಜಗಳವಾಡಿಕೊಂಡಿದ್ದ ವೀರಭದ್ರ ಬಳಿಕ ಕೆಲಸಕ್ಕೆ ಹೊರಟುಹೋಗಿದ್ದ. ಗಂಡನ ಕಿರುಕುಳ ತಾಳದೇ ಮಗಳು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಆಕೆಯ ಪೋಷಕರು ದೂರು ನೀಡಿದ್ದಾರೆ ಎಂದು ಪೊಲೀಸರು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next