Advertisement

ದಕ್ಷಿಣ ಕನ್ನಡ: 13 ಮಂದಿಗೆ ಕೋವಿಡ್‌ ದೃಢ: ಕೇರಳ: 2,786 ಪಾಸಿಟಿವ್‌

12:42 AM Jun 20, 2022 | Team Udayavani |

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೋವಿಡ್‌ ದೈನಂದಿನ ವರದಿ ಮತ್ತೆ ಏರಿಕೆ ಕಂಡಿದೆ.

Advertisement

ರವಿವಾರ 13 ಮಂದಿಗೆ ಕೋವಿಡ್‌ ಪ್ರಕರಣ ದೃಢಪಟ್ಟಿದೆ. ಯಾವುದೇ ಸಾವಿನ ವರದಿಯಾಗಿಲ್ಲ. ಸದ್ಯ 48 ಸಕ್ರಿಯ ಪ್ರಕರಣಗಳಿವೆ. ಜಿಲ್ಲೆಯಲ್ಲಿ ಶೇ. 3.08 ರಷ್ಟು ಪಾಸಿಟಿವಿಟಿ ದರ ಇದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.

ಉಡುಪಿ: 4 ಪಾಸಿಟಿವ್‌
ಉಡುಪಿ: ಜಿಲ್ಲೆಯಲ್ಲಿ ರವಿವಾರ 4 ಮಂದಿಗೆ ಕೋವಿಡ್‌ ಸೋಂಕು ದೃಢಪಟ್ಟಿದೆ. 235 ಮಂದಿಯನ್ನು ಪರೀಕ್ಷೆಗೆ ಒಳಪಡಿಸಲಾಗಿದೆ. 18 ಪ್ರಕರಣಗಳು ಸಕ್ರಿಯವಾಗಿವೆ ಎಂದು ಜಿಲ್ಲಾ ಆರೋಗ್ಯ ಇಲಾಖೆ ತಿಳಿಸಿದೆ.

ಕೇರಳ: 2,786 ಪಾಸಿಟಿವ್‌
ಕಾಸರಗೋಡು: ಕೇರಳದಲ್ಲಿ ರವಿವಾರ 2,786 ಮಂದಿಗೆ ಕೋವಿಡ್‌ ಸೋಂಕು ದೃಢಪಟ್ಟಿದೆ. ಐವರು ಸಾವಿಗೀಡಾಗಿದ್ದಾರೆ. ಕಳೆದ ಕೆಲವು ದಿನಗಳಿಂದ ನಿತ್ಯ 3,000ಕ್ಕೂ ಹೆಚ್ಚು ಪ್ರಕರಣ ಇಲ್ಲಿ ದಾಖಲಾಗಿತ್ತು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next