Advertisement

ನವೀಕರಿಸಬಹುದಾದ ಇಂಧನ, ಎಲೆಕ್ಟ್ರಿಕ್‌ ವಾಹನಗಳಿಗೆ ಸಬ್ಸಿಡಿ ದ್ವಿಗುಣ

11:47 PM Dec 20, 2022 | Team Udayavani |

ಹೊಸದಿಲ್ಲಿ: 2022ರಲ್ಲಿ ದೇಶದಲ್ಲಿ ನವೀಕರಿಸಬಹುದಾದ ಇಂಧನ ಮತ್ತು ಎಲೆಕ್ಟ್ರಿಕ್‌ ವಾಹನಗಳಿಗೆ ಸಬ್ಸಿಡಿಗಳು ದ್ವಿಗುಣಗೊಂಡಿವೆ. ಆದರೆ ಮುಂಬರುವ ಸವಾಲುಗಳನ್ನು ಎದುರಿಸಿ ಗುರಿ ಸಾಧಿಸುವುದು ಸರಕಾರಕ್ಕೆ ಸವಾಲಾಗಿದೆ ಎಂದು ಇಂಟರ್‌ನ್ಯಾಶನಲ್‌ ಇನ್‌ಸ್ಟಿಟ್ಯೂಟ್‌ ಫಾರ್‌ ಸಸ್ಟೆನೆಬಲ್‌ ಡೆವಲಪ್‌ಮೆಂಟ್‌ ಹೇಳಿದೆ.

Advertisement

ಸಂಸ್ಥೆ ಬಿಡುಗಡೆ ಮಾಡಿರುವ ಅಧ್ಯಯನ ವರದಿಯಲ್ಲಿ ನವೀಕರಿಸಬಹುದಾದ ಇಂಧನಕ್ಕಾಗಿ ಸಬ್ಸಿಡಿಗಳು 2022 ರಲ್ಲಿ ರೂ 11,529 ಕೋ.ರೂ. ಗೆ ತಲುಪಿದೆ ಎಂದು ಹೇಳಿದೆ. 2021 ರಲ್ಲಿ ರೂ 5,774 ಕೋ. ರೂ.ಗಳಾಗಿದ್ದವು. ಇದೇ ವೇಳೆ ಎಲೆಕ್ಟ್ರಿಕ್‌ ವಾಹನಗಳಿಗೆ ಹೆಚ್ಚಿನ ಬೇಡಿಕೆ ವ್ಯಕ್ತವಾಗಿದ್ದು ಆ ಅವಧಿಯಲ್ಲಿ ಸಬ್ಸಿಡಿಯು 906 ಕೋ.ರೂ.ನಿಂದ 2,358 ಕೋ. ರೂ.ಗೆ ಜಿಗಿದಿದೆ. ಸೌರ ವಿದ್ಯುತ್‌ ಕ್ಷೇತ್ರದಲ್ಲಿ 155 ಪ್ರತಿಶತದಷ್ಟು ಜಿಗಿತ ಕಂಡುಬಂದಿದೆ. ಸರಕಾರವು ಮುಂದಿನ ಕೆಲವು ವರ್ಷಗಳಲ್ಲಿ ಸಬ್ಸಿಡಿಗಳು, ಸಾರ್ವಜನಿಕ ಹಣಕಾಸು ಮತ್ತು ಸಾರ್ವಜನಿಕ ಸ್ವಾಮ್ಯದ ಕಂಪೆನಿಗಳ ಹೂಡಿಕೆಗಳ ಸಹಿತ ಬೆಂಬಲ ಕ್ರಮಗಳನ್ನು ಹೆಚ್ಚಿಸುವ ಅಗತ್ಯವಿದೆ ಎಂದು ಸಲಹೆ ನೀಡಲಾಗಿದೆ.

2022ರ ಹಣಕಾಸಿನ ವರ್ಷದಲ್ಲಿ ಸ್ವತ್ಛ ಇಂಧನಗಿಳಿಗಿಂತ ಭಾರತ ಪಳೆಯುಳಿಕೆ ಇಂಧನಕ್ಕೆ 4 ಪಟ್ಟು ಹೆಚ್ಚಿನ ಮೊತ್ತವನ್ನು ವಿನಿಯೋಗಿಸಿದೆ. 2021ಕ್ಕೂ ಮುನ್ನ 9 ಪಟ್ಟು ಹೆಚ್ಚಿನ ಅನುದಾನವನ್ನು ವಿನಿಯೋಗಿಸುತ್ತಿತ್ತು.

2022ರ ಹಣಕಾಸು ವರ್ಷದಲ್ಲಿ ಭಾರತ ಕಲ್ಲಿದ್ದಲು, ಗ್ಯಾಸ್‌, ತೈಲಗಳ ಸಬ್ಸಿಡಿಗಳು 60,316 ಕೋಟಿ ರೂ.ಗಳಾಗಿದ್ದು, 2014ರಿಂದ ಶೇ.76ರಷ್ಟು ಕುಸಿದಿದೆ. ಪ್ರಸಕ್ತ ಹಣಕಾಸು ವರ್ಷದಲ್ಲಿ  ಪ್ರಮುಖವಾಗಿ, ತೈಲ ಮತ್ತು ಅನಿಲ ಸಬ್ಸಿಡಿಗಳು 44,383 ಕೋಟಿ ರೂ.ಗೆ 28 ಪ್ರತಿಶತದಷ್ಟು ಕುಸಿದಿದೆ.

Advertisement

Udayavani is now on Telegram. Click here to join our channel and stay updated with the latest news.

Next