Advertisement

ಸಂತಸದಲ್ಲಿದ್ದ ಕಾರ್ಮಿಕರಿಗೆ ಶಾಕ್ ನೀಡಿದ ಟಿಕೆಟ್ ದರ: ಕೊನೆಗೂ ಸಮಸ್ಯೆ ಬಗೆಹರಿಸಿದ ಸರಕಾರ

08:16 AM May 03, 2020 | keerthan |

ಬೆಂಗಳೂರು: ಕೋವಿಡ್19 ಲಾಕ್ ಡೌನ್ ಕಾರಣದಿಂದ ಬೇರೆ ರಾಜ್ಯದ ಬೇರೆ ಜಿಲ್ಲೆಗಳಲ್ಲಿ ಸಿಲುಕಿರುವ ಜನರನ್ನು ಅವರ ಊರಿಗೆ ಕಳುಹಿಸಲು ಸರಕಾರ ತಯಾರಿ ನಡೆಸಿದೆ. ಆದರೆ ಒಂದು ತಿಂಗಳಿನಿಂದ ಕಷ್ಟ ಪಡುತ್ತಿರುವ ಜನರಿಗೆ ಟಿಕೆಟ್ ದರ ದುಪ್ಪಟ್ಟು ಮಾಡಿ ಶಾಕ್ ನೀಡಿದೆ.

Advertisement

ಬೆಂಗಳೂರಿನ ಮೆಜೆಸ್ಟಿಕ್ ನಲ್ಲಿ ಇಂದು ಬೆಳಿಗ್ಗಿನಿಂದಲೇ ಸಾವಿರಾರು ಕಾರ್ಮಿಕರು ಸೇರಿದ್ದು, ಊರಿಗೆ ತೆರಳಲು ಸಜ್ಜಾಗಿದ್ದಾರೆ. ಒಂದು ತಿಂಗಳಿಂದ ಕೆಲಸವಿಲ್ಲದೇ ಸಂಕಷ್ಟದಲ್ಲಿದ್ದ ಕಾರ್ಮಿಕರಿಗೆ ಸ್ವಂತ ಖರ್ಚಿನಲ್ಲಿ ತೆರಳಬೇಕು ಎಂದು ಸರ್ಕಾರ ಹೇಳಿದ್ದು ಆಘಾತ ತಂದಿತ್ತು. ಅದರೊಂದಿಗೆ ಬಸ್ ದರವನ್ನು ದುಪ್ಪಟ್ಟು ಮಾಡಿದ್ದು, ಜನರ ಆಕ್ರೋಶಕ್ಕೆ ಕಾರಣವಾಗಿತ್ತು.

ಸದ್ಯ ಪರಿಸ್ಥಿತಿ ಅರ್ಥ ಮಾಡಿಕೊಂಡಿರುವ ಸರಕಾರ ಕಾರ್ಮಿಕರಿಗೆ ಏಕ ಶುಲ್ಕ ದರದಲ್ಲಿ ಊರಿಗೆ ತೆರಳಲು ಅವಕಾಶ ನೀಡಿದೆ. ಅಂದರೆ ಮಾಮೂಲಿ ದರದಲ್ಲೇ ಕಾರ್ಮಿಕರು ಕೆಎಸ್ ಆರ್ ಟಿಸಿ ಬಸ್ ಗಳಲ್ಲಿ ಮನೆಗೆ ತೆರಳಬಹುದು.

ಈ ಬಗ್ಗೆ ಟ್ವೀಟ್ ಮಾಡಿರುವ ಸಚಿವ ಸುರೇಶ್ ಕುಮಾರ್, “ಕೆಎಸ್ಆರ್ ಟಿ ಸಿ ಬಸ್ ಗಳ ಮೂಲಕ ತಮ್ಮ-ತಮ್ಮ ಸ್ಥಳಗಳಿಗೆ ಹೋಗಲು ಬೆಂಗಳೂರಿನ ಕೇಂದ್ರ ಬಸ್ ನಿಲ್ದಾಣದಲ್ಲಿ ಕಾದಿರುವ “ಕಾರ್ಮಿಕ” ರಿಗೆ Single Fare ದರದಲ್ಲಿ ಹೋಗಲು ಅನುವು ಮಾಡಿಕೊಡಲು ಮುಖ್ಯಮಂತ್ರಿಗಳು ಹಸಿರು‌ ನಿಶಾನೆ ತೋರಿದ್ದಾರೆ” ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next