Advertisement
ಕೋವಿಡ್ ಹಿನ್ನೆಲೆ 5 ತಿಂಗಳ ನಂತರ ಮತ್ತೆ ಸಂಚಾರ ಆರಂಭಿಸಿದ ಡಬಲ್ ಡೆಕ್ಕರ್ ಬಸ್‌ಗೆ ಪ್ರವಾಸಿಗರಿಂದ ನೀರಸ ಪ್ರತಿಕ್ರಿಯೆ ವ್ಯಕ್ತವಾಯಿತು. ಮರು ಚಾಲನೆ ದೊರೆತ, ಮೊದಲ ದಿನವಾದ ಶನಿವಾರ ಒಂದು ಅಂಬಾರಿ ಬಸ್ 3 ಟ್ರಿಪ್ ಸಂಚಾರ ನಡೆಸಿದ್ದು, ಕೇವಲ 11ಮಂದಿ ಪ್ರಯಾಣಿಕರು ಮಾತ್ರ ಬಸ್‌ನಲ್ಲಿ ಸಂಚಾರ ನಡೆಸಿದರು.
Related Articles
Advertisement
ಪ್ರಚಾರದ ಕೊರತೆ: 11 ಮಂದಿ ಪ್ರಯಾಣಶನಿವಾರ ಬೆಳಗ್ಗೆ8.30ರಲ್ಲಿ ನಗರದ ಜೆಎಲ್‌ಬಿ ರಸ್ತೆಯಲ್ಲಿನ ರಾಜ್ಯ ಪ್ರವಾಸೊದ್ಯಮ ಅಭಿವೃದ್ಧಿ ಇಲಾಖೆಯ ಮಯೂರ ಹೋಟೆಲ್‌ನಲ್ಲಿ ಸಂಚಾರ ಪುನಾರಂಭಿಸಿದ ಅಂಬಾರಿ ಬಸ್ (ಡಬಲ್ ಡೆಕ್ಕರ್) ನಗರದ ಪ್ರಮುಖ ಸ್ಥಳಗಳಾದ ಡಿ.ಸಿ.ಕಚೇರಿ,ಕುಕ್ಕರಹಳ್ಳಿಕೆರೆ, ಮೈಸೂರು ವಿಶ್ವವಿದ್ಯಾಲಯ, ರಾಮಸ್ವಾಮಿ ಸರ್ಕಲ್, ಸಂಸ್ಕೃತ ಪಾಠಶಾಲೆ,ಕೆ.ಆರ್. ಸರ್ಕಲ್, ದೊಡ್ಡ ಗಡಿಯಾರ, ಅರಮನೆ ದಕ್ಷಿಣ ದ್ವಾರ, ಹಾರ್ಡಿಂಜ್ ಸರ್ಕಲ್, ಮೃಗಾಲಯ,ಕಾರಂಜಿ ಕೆರೆ, ಸರ್ಕಾರಿ ಅತಿಥಿ ಗೃಹ, ಸಂತ ಫಿಲೋಮಿನಾ ಚರ್ಚ್, ಬನ್ನಿಮಂಟಪ, ಆಯುರ್ವೆದಿಕ್ ಆಸ್ಪತ್ರೆ ಸರ್ಕಲ್, ರೈಲ್ವೆ ನಿಲ್ದಾಣ ಸೇರಿದಂತೆ ಪ್ರಮುಖ ರಸ್ತೆಯಲ್ಲಿ ಮೂರು ಟ್ರಿಪ್ ಸಂಚಾರ ನಡೆಸಿತು. ದಿನದ ಮೊದಲ ಸುತ್ತಿನಲ್ಲಿ07ಮಂದಿ, 2ನೇ ಸುತ್ತಿನಲ್ಲಿ 04 ಮಂದಿ ಹಾಗೂ 3ನೇ ಸುತ್ತಿನಲ್ಲಿ ಖಾಲಿ ಬಸ್ ಸಂಚರಿಸಿದೆ. ಪ್ರಚಾರದ ಕೊರತೆ ಹಿನ್ನೆಲೆ ಹಾಗೂ ಪ್ರಾರಂಭದ ದಿನವಾಗಿದ್ದರಿಂದ ಪ್ರಯಾಣಿಕರ ಸಂಖ್ಯೆಕ್ಷೀಣಿಸಿದ್ದು, ಮುಂದಿನ ದಿನಗಳಲ್ಲಿ ಸಹಜ ಸಂಚಾರ ಆಗುವ ನಿರೀಕ್ಷೆ ಇದೆ ಎಂದು ಪ್ರವಾಸೋದ್ಯಮ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.