Advertisement

ಶಿರಾಡಿ ಘಾಟಲ್ಲಿ  ಡಬಲ್‌ ಡೆಕ್ಕರ್‌

09:07 AM Sep 21, 2017 | Team Udayavani |

ಹೊಸದಿಲ್ಲಿ: ದಶಕಗಳ ಹಿಂದೆ ಬೆಂಗಳೂರು ನಗರದಲ್ಲಿ ಡಬಲ್‌ ಡೆಕ್ಕರ್‌ ಬಸ್‌ ಸಂಚಾರ ವಿತ್ತು. ಅದೇ ಮಾದರಿಯ ಬಸ್‌ ಸಂಚಾರ ಮಂಗಳೂರಿನಿಂದ ಬೆಂಗಳೂರಿಗೆ ಶಿರಾಡಿ ಘಾಟ್‌ ಮೂಲಕ ಸಂಚರಿಸಿದರೆ ಹೇಗೆ ಇರುತ್ತದೆ? ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗಳಲ್ಲಿ ಅದೇ ಮಾದರಿಯ ಐಷಾರಾಮಿ ಬಸ್‌ಗಳನ್ನು ಓಡಿಸಲು ಕೇಂದ್ರ ಚಿಂತನೆ ನಡೆಸುತ್ತಿದೆ. ಕರ್ನಾಟಕ ಸೇರಿದಂತೆ ಎಂಟಕ್ಕೂ ಹೆಚ್ಚು ರಾಜ್ಯಗಳಲ್ಲಿ ಇಂಥ ಸೇವೆ ಜಾರಿಯಾಗಲಿದೆ.

Advertisement

ಅತಿ ದೂರದ ಪ್ರಮುಖ ನಗರಗಳಿಗೆ ಈ ಸೇವೆ ಒದಗಿಸುವುದು ಇದರ ಉದ್ದೇಶ. ದೇಶದಲ್ಲಿ ಒಟ್ಟು 75 ಮಾರ್ಗಗಳನ್ನು ಗುರುತಿಸಲಾಗಿದೆ. ಅವುಗಳಲ್ಲಿ ಬೆಂಗಳೂರು- ಮಂಗಳೂರು, ದಿಲ್ಲಿ-ಆಗ್ರಾ, ದಿಲ್ಲಿ- ಜೈಪುರ, ಲಕ್ನೋ-ಗೋರಖ್‌ಪುರ, ವಡೋದರ- ಮುಂಬೈ, ಶ್ರೀನಗರ- ಜಲಂದರ್‌, ಕಲ್ಲಿಕೋಟೆ-ಕೊಚ್ಚಿ ಹಾಗೂ ವಿಶಾಖಪಟ್ಟಣ -ಭುವನೇಶ್ವರ ಮಹತ್ವದ್ದಾಗಿವೆ ಎಂದು ಕೇಂದ್ರ ಸಾರಿಗೆ ಸಚಿವ ನಿತಿನ್‌ ಗಡ್ಕರಿ ಬುಧವಾರ ತಿಳಿಸಿದ್ದಾರೆ. ಅಲ್ಲದೆ, ಈ ಯೋಜನೆಗಾಗಿ ರಾಜ್ಯ ಸಾರಿಗೆ ಸಂಸ್ಥೆಗಳಿಗೆ ಕೇಂದ್ರ ಹಣಕಾಸಿನ ನೆರವನ್ನೂ ನೀಡಲಿದೆ. ಮೂಲಗಳ ಪ್ರಕಾರ ಮೊದಲ ಮೂರು ವರ್ಷ ಪ್ರತಿ ಕಿಲೋಮೀಟರ್‌ಗೆ 10 ರೂ.ನಂತೆ ಟಿಕೆಟ್‌ ದರ ನಿಗದಿಪಡಿಸಲಿದೆ.  

ಪ್ರಯಾಣಿಕರ ಪ್ರಮಾಣ ಕುಸಿತ: ರಾಷ್ಟ್ರೀಯ ಹೆದ್ದಾರಿಯಲ್ಲಿ 30,000 ಕಿಲೋಮೀಟರ್‌ನಲ್ಲಿ ನಡೆಸಲಾದ ಟ್ರಾಫಿಕ್‌ ಸರ್ವೆಯೊಂದರ ಪ್ರಕಾರ ಸರಕಾರಿ ಬಸ್‌ಗಳಲ್ಲಿ ಓಡಾಡುವವರ ಸಂಖ್ಯೆ ಕುಸಿತ ಕಂಡಿದೆ.  2016ರಲ್ಲಿ 45%ರಷ್ಟಿತ್ತು. 2017ರಲ್ಲಿ 40%ಕ್ಕೆ ಕುಸಿದಿದೆ. ಕಾರಿನಲ್ಲಿ ಓಡಾಡುವವರ ಸಂಖ್ಯೆ 55%ರಿಂದ 60%ಕ್ಕೆ ಏರಿದೆ.

Advertisement

Udayavani is now on Telegram. Click here to join our channel and stay updated with the latest news.

Next