Advertisement

ಶಿಥಿಲಗೊಂಡ ಕೊಠಡಿಗಳ ಮಧ್ಯೆ ಮಕ್ಕಳಿಗೆ ಶಿಕ್ಷಣ; ಭಯದ ವಾತಾವರಣದಲ್ಲಿ ಶಾಲಾ ಮಕ್ಕಳು

01:18 PM Nov 07, 2022 | Team Udayavani |

ದೋಟಿಹಾಳ: ಕೇಸೂರ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ನಾಲ್ಕು ಕೊಠಡಿಗಳ ಕಟ್ಟಡ ಸಂಪೂರ್ಣವಾಗಿ ಶಿಥಿಲಗೊಂಡು, ಯಾವುದೇ ಕ್ಷಣದಲ್ಲಿ ಕುಸಿದು ಬೀಳುವಂತಿದೆ. ಯಾವ ಕ್ಷಣದಲ್ಲಿ ಈ ಕೊಠಡಿಗಳು ಕುಸಿದು ಬೀಳುವುದೋ ಎಂಬ ಆತಂಕದಲ್ಲಿ ಮಕ್ಕಳು ಮತ್ತು ಶಿಕ್ಷಕರು ಕಾಲ ಕಳೆಯುತ್ತಿದ್ದಾರೆ.

Advertisement

ಕುರುಡು, ಕಿವುಡು ಅಧಿಕಾರಿಗಳು: ಈ ಶಾಲೆಯ ದುಸ್ಥಿತಿ ಬಗ್ಗೆ ಕಳೆದ 3-4 ವರ್ಷಗಳಿಂದಲೂ ಮಕ್ಕಳು ಹಾಗೂ ಶಿಕ್ಷಕರು, ಈ ಭಾಗದ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳ ಗಮನಕ್ಕೆ ತರುತ್ತಿದ್ದರೂ ಈ ವಿಚಾರವಾಗಿ ಅವರ್ಯಾರಿಗೂ ಕಿವಿ ಕೇಳಿಸುತ್ತಿಲ್ಲ, ಕಣ್ಣು ಕೂಡಾ ಕಾಣಿಸುತ್ತಿಲ್ಲ ಎಂಬುದು ಶಾಲೆಯ ದುಸ್ಥಿತಿ ನೋಡಿದರೆ ತಿಳಿಯುತ್ತದೆ ಎಂಬುವುದು ಶಿಕ್ಷಣ ಪ್ರೇಮಿಗಳ ವಾದಗಿದೆ.

ಶಾಲೆಯಲ್ಲಿ ಸುಮಾರು 235 ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ. ಶಾಲಾ ಆವರಣದಲ್ಲಿ ಒಟ್ಟು 13 ಕೊಠಡಿಗಳಿದ್ದರೂ, 9 ಕೊಠಡಿಗಳನ್ನು ಬಳಸುತ್ತಿದ್ದು, ಉಳಿದ ನಾಲ್ಕು ಕೊಠಡಿಗಳು ಸಂಪೂರ್ಣ ಶಿಥಿಲಗೊಂಡಿದೆ. ಕೊಠಡಿಗಳು ಯಾವುದೇ ಕ್ಷಣದಲ್ಲಿಯೂ ಕುಸಿದು ಬೀಳುವಂತಿದೆ. ಶಿಥಿಲಗೊಂಡ ಈ ಹಳೆ ಕಟ್ಟಡಗಳ ಶಾಲಾ ಆರವಣದ ಮಧ್ಯಭಾಗದಲ್ಲಿ ಇರುವುದರಿಂದ ಶಾಲಾ ಮಕ್ಕಳು ಪ್ರತಿನಿತ್ಯ ಕಟ್ಟಡದ ಹೊರಾಂಗಣದಲ್ಲಿ ಆಟವಾಡುತ್ತಾರೆ. ಈ ವೇಳೆ ಕಟ್ಟಡ ಕುಸಿದು ಬಿದ್ದರೆ ದೊಡ್ಡ ಅನಾಹುತವಾಗುತ್ತದೆ. ಇದರ ಬಗ್ಗೆ ಶಾಲಾ ಶಿಕ್ಷಕರು ಮತ್ತು ಎಸ್‌ಡಿಎಮ್‌ಸಿ ಅಧ್ಯಕ್ಷರು, ಸದಸ್ಯರು ಹಲವು ಬಾರಿ ಜನಪ್ರತಿನಿಧಿಗಳಿಗೆ, ಅಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಲಿಲ್ಲ.

ಈ ಶಾಲೆಯ ಸ್ಥಿತಿಯ ಬಗ್ಗೆ 3-4 ವರ್ಷಗಳ ಹಿಂದಿನಿಂದಲೂ ಕ್ಷೇತ್ರ ಶಿಕ್ಷಣಾಧಿಕಾರಿಗಳು, ತಾಪಂ ಇಲಾಖೆಗೆ ಹಲವು ಬಾರಿ ಮನವಿ ಸಲ್ಲಿಸಲಾಗಿದೆ. ಎಲ್ಲರೂ ಭರವಸೆ ನೀಡುವರೇ ಆಗಿದ್ದಾರೆ. ಆದಷ್ಟು ಬೇಗ ಈ ಶಾಲೆಯ ಶಿಥಿಲಗೊಂಡು ಹಳೇ ಕಟ್ಟಡಗಳು ತೆರವುಗೊಳ್ಳಿಸುತ್ತೇವೆ ಎಂದು ಭರವಸೆ ನೀಡುತ್ತಲೇ 3-4 ವರ್ಷಗಳು ಕಳೆದಿವೆ. ಈ ಶಾಲೆಯ ವಿದ್ಯಾರ್ಥಿಗಳು ಭಯದ ವಾತಾವರಣದಲ್ಲಿ ಕಲಿಯಬೇಕಾಗಿದೆ ಎಂದು ಮುಖ್ಯ ಶಿಕ್ಷಕರು ನೋವು ತೋಡಿಕೊಳ್ಳುತ್ತಾರೆ.

Advertisement

ಸಂಪೂರ್ಣ ಶಿಥಿಲಗೊಂಡ ನಾಲ್ಕೂ ಕೊಠಡಿಗಳನ್ನು ತೆರವುಗೊಳಿಸಲು 3-4 ವರ್ಷಗಳಿಂದ ಅಧಿಕಾರಿಗಳು, ಜನಪ್ರತಿನಿಧಿಗಳಿಗೆ ಎಸ್‌ಡಿಎಮ್‌ಸಿ ಅಧ್ಯಕ್ಷರು, ಸದಸ್ಯರು, ಶಿಕ್ಷಕರು ಮತ್ತು ಗ್ರಾಮಸ್ಥರು ಭೇಟಿ ನೀಡಿ ಮನವಿ ಸಲ್ಲಿಸಿದರು ಯಾವುದೇ ಪ್ರಯೋಜನವಾಗಿಲ್ಲ. ಶಾಲಾ ಮಕ್ಕಳ ಸುರಕ್ಷತೆ ಬಗ್ಗೆ ಯೋಚಿಸಿದರೆ ಗ್ರಾಮಸ್ಥರಿಗೆ ಭಯವಾಗುತ್ತದೆ. ಅಧಿಕಾರಿಗಳಿಗೆ ಮಕ್ಕಳ ಬಗ್ಗೆ ಕನಿಷ್ಟ ಕಾಳಜಿಯೂ ಇಲ್ಲ, ಕರ್ತವ್ಯ ಪ್ರಜ್ಞೆಯೂ ಇಲ್ಲ ಎಂಬುದು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ.

ಶಾಲೆಯ ನಾಲ್ಕೂ ಕೊಠಡಿಗಳು ಸಂಪೂರ್ಣವಾಗಿ ಶಿಥಿಲಗೊಂಡು ಇವುಗಳನ್ನು ತೆರವುಗೊಳಿಸಲು 2017 ರಿಂದಲೇ ಅಧಿಕಾರಿಗಳಿಗೆ, ಜನಪ್ರತಿನಿಧಿಗಳಿಗೆ ತೆರವುಗೊಳಿಸಲು ಮನವಿ ಸಲ್ಲಿಸುತ್ತಿದ್ದೇವೆ. ಆದರೆ ಇದುವರೆಗೂ ಯಾವುದೇ ಪ್ರಯೋಜನವಾಗಿಲ್ಲ. ಇಂಥಹ ಶಿಥಿಲಗೊಂಡ ಕಟ್ಟಡ ಮದ್ಯೆ ಭಯದ ವಾತಾವರಣದಲ್ಲಿ ಮಕ್ಕಳು ಕಲಿಯಬೇಕಾಗಿದೆ. – ಭಾರತಿ ಭಟ್ಟ, ಶಾಲಾ ಮುಖ್ಯ ಶಿಕ್ಷಕರು

ಇತ್ತೀಚೆಗೆ ಕೇಸೂರ ಶಾಲೆಗೆ ಭೇಟಿ ನೀಡಿದ ವೇಳೆ ಶಾಲೆಯ ಶಿಥಿಲಗೊಂಡ ನಾಲ್ಕೂ ಕೊಠಡಿಗಳನ್ನು ಪರಿಶೀಲಿಸಿದ್ದೇನೆ. ಇದರ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ಗಮನಕ್ಕೆ ತಂದು ಆದಷ್ಟು ಬೇಗ ಈ ಕಟ್ಟಡಗಳನ್ನು ತೆರವುಗೊಳಿಸಲು ಸೂಕ ಕ್ರಮ ಕೈಗೊಳ್ಳುತ್ತೇನೆ. –ಸುರೇಂದ್ರ ಕಾಂಬ್ಳೆ, ಕ್ಷೇತ್ರ ಶಿಕ್ಷಣಾಧಿಕಾರಿಗಳು ಕುಷ್ಟಗಿ

-ಮಲ್ಲಿಕಾರ್ಜುನ ಮೆದಿಕೇರಿ ದೋಟಿಹಾಳ

Advertisement

Udayavani is now on Telegram. Click here to join our channel and stay updated with the latest news.

Next