ದೋಟಿಹಾಳ: ಜೆ.ಜೆ.ಎಂ. ಕಳಪೆ ಕಾಮಗಾರಿಯನ್ನು ನಿಲ್ಲಿಸಿ, ತಪ್ಪಿತಸ್ಥ ಅಧಿಕಾರಿಗಳು ಮತ್ತು ಗುತ್ತಿಗೆದಾರರ ವಿರದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲು ಒತ್ತಾಯಿಸಿ ಕರ್ನಾಟಕ ವಿಶ್ವ ಮಾನವ ಸೇನೆ ಸಂಘಟನೆಯಿಂದ ಗ್ರಾಪಂ ಕಚೇರಿಯ ಮುಂದೇ ಪ್ರತಿಭಟನೆ ಆರಂಭಿಸಿದಾರೆ.
ಕರ್ನಾಟಕ ವಿಶ್ವ ಮಾನವ ಸೇನೆ ಸಂಘಟನೆ ಜಿಲ್ಲಾ ಅಧ್ಯಕ್ಷ ನವೀನಕುಮಾರ ಕೆಂಗಾರಿ, ಜಿಲ್ಲಾ ಕಾರ್ಯಧಕ್ಷ ಮುಕ್ತುಮ್ ಕಡಿವಾಲ, ತಾಲೂಕು ಅಧ್ಯಕ್ಷ ಯಮನೂರ ಶಿವನಗುತ್ತಿ ಇವರ ನೇತೃತ್ವದಲ್ಲಿ ಬುಧವಾರ ಗ್ರಾಮದ ಗ್ರಾಮ ಪಂಚಾಯತಿ ಮುಂದೆ ಪ್ರತಿಭಟನೆ ಆರಂಭವಾಗಿದೆ.
ಗ್ರಾಮ ಪಂಚಾಯತಿ ವ್ಯಾಪ್ತಿಗೆ ಬರುವ ಎಲ್ಲಾ ವಾರ್ಡಗಳಲ್ಲಿ ಮತ್ತು ಗ್ರಾಮಗಳಲ್ಲಿ ಜೆ.ಜೆ.ಎಂ. ಕಾಮಗಾರಿಯು ಸಂಬಂಧಪಟ್ಟ ಇಲಾಖೆಯು ನೀಡಿರುವ ಎಸ್ಟಿಮೇಟ್ ಪ್ಲಾನ್ ಪ್ರಕಾರ ಮಾಡಿಲ್ಲ. ಕಾಮಗಾರಿಗಳಿಗೆ ಬಳಸಿರುವ ಪೈಪ್‌ಗಳು ಕಳಪೆ ಗುಣಮಟ್ಟದಾಗಿರುತ್ತದೆ. ಸದರಿ ಜೆ.ಜೆ.ಎಂ. ಕಾಮಗಾರಿಯ ಪೈಪ್‌ಗಳು ಚರಂಡಿಗಳಲ್ಲಿ ಹಾಯ್ದು ಹೋಗಿರುವುದು, ಮತ್ತು ಅವುಗಳಿಗೆ ಸೇಫ್ಟಿ ಕ್ಯಾಪ್ ಬಳಸದಿರುವುದು, ಹಾಗೂ ಚರಂಡಿಗಳಲ್ಲಿ ಹಾಯ್ದು ಹೋದ ಪೈಪ್‌ಗಳನ್ನು ಸಿಮೇಂಟ್ ಚಿಲಗಳಿಂದ ಸುತ್ತಿ ಅದಕ್ಕೆ ಹಗ್ಗ ಬಿಗಿದಿರುವುದು ಕಂಡು ಬಂದಿರುತ್ತದೆ. ತಮ್ಮ ಜೆ.ಜೆ.ಎಂ. ಕಾಮಾಗಾರಿಯ ಮೂಲಕ ಜನರಿಗೆ ಕೋಳಚೆ ಚರಂಡಿ ನೀರು ಹಾಗೂ ವಿಷಪೂರಿತ ಕುಡಿಯುವ ನೀರನ್ನು ಸರಬರಾಜು ಮಾಡಿ ಗ್ರಾಮಸ್ತರಿಗೆ ರೋಗ ಹರಡುವುದರಲ್ಲಿ ಯಾವುದೇ ಸಂಶಯವಿಲ್ಲ.
ಈ ಹಿಂದೆ ನಮ್ಮ ಕುಷ್ಟಗಿ ತಾಲೂಕಿನ ಬಿಜಕಲ್ಲ ಗ್ರಾಮದಲ್ಲಿ ಇಂತಹ ಕಳಪೆ ಕಾಮಗಾರಿಯಿಂದ ಓರ್ವ ಬಾಲಕಿ ಮೃತಪಟ್ಟಿರುವ ಘಟನೆಯ ರಾಜ್ಯಾದ್ಯಾಂತ ಸುದ್ದಿ ಮಾಡಿತು, ಇಂತಹ ಘಟನೆ ಮತ್ತೊಮ್ಮೆ ನಮ್ಮತಾಲೂಕಿನಲ್ಲಿ ನಡೆಯಬಾರದು ಎಂಬ ಉದ್ದೇಶದಿಂದ ನಮ್ಮ ಸಂಘಟನೆಯು ಈ ಪ್ರತಿಭಟನೆ ಆರಂಬಿಸಿದೇವೆ.
ಗ್ರಾಮದಲ್ಲಿ ಇಷ್ಟೆಲ್ಲ ಕಳಪೆ ಕಾಮಗಾರಿ ಮಾಡಲು ಗ್ರಾಪಂ ಅಧಿಕಾರಗಳೆ ಕಾರಣ, ಗ್ರಾಮಕ್ಕೆ ಸಿಇಓ ಅವರು ಭೇಟಿ ನೀಡಿ, ಕಳಪೆ ಕಾಮಗಾರಿಗಳನ್ನು ಪರಿಶಿಲಿಸಿ ಸಂಬಂಧಪಟ್ಟ ತಪ್ಪಿತಸ್ಥ ಅಧಿಕಾರಿಗಳನ್ನು ವಜಾಮಾಡಬೇಕು ಹಾಗೂ ಈ ಕಾಮಗಾರಿಗೆ ಸಂಬಂಧಪಟ್ಟ ಗುತ್ತಿಗೆದಾರರ ಪರವಾಣಿಗೆಯನ್ನು ಕಪ್ಪು ಪಟ್ಟಿಗೆ ಸೇರಿಸುವವರಗೆ ನಮ್ಮ ಈ ಹೋರಾಟ ಮುಂದುವರಿಯುತ್ತದೆ ಎಂದು ಸಂಘಟನೆಯರು ತಿಳಿಸಿದಾರೆ.
ಈ ಪ್ರತಿಭಟನೆಗೆ ಕರ್ನಾಟಕ ರಕ್ಷಣ ವೇದಿಕೆ, ಲಂಚ ಮೂಕ್ತ ಕರ್ನಾಟಕ ವೇದಿಕೆ, ಸೇರಿದಂತೆ ಸ್ಥಳೀಯ ಸಂಘನೆಗಲು ಬೆಂಬಲ ನೀಡಿದಾರೆ.
ಇದನ್ನೂ ಓದಿ: Pakistan: ನಮ್ಮ ನಿಧಾನಗತಿಯ ಫೀಲ್ಡಿಂಗ್‌ಗೆ ʼಹೈದರಾಬಾದ್ ಬಿರಿಯಾನಿʼ ಕಾರಣವೆಂದ ಪಾಕ್ ಆಟಗಾರ