Advertisement

ದೋಟಿಹಾಳ: ಲಕ್ಷಾಂತರ ರೂ. ಖರ್ಚಾದರೂ ಶುದ್ಧ ನೀರಿಲ್ಲ

06:10 PM Feb 06, 2023 | Team Udayavani |

ದೋಟಿಹಾಳ: ಗ್ರಾಮೀಣ ಪ್ರದೇಶದ ಜನರಿಗೆ ಶುದ್ಧ ಕುಡಿಯುವ ನೀರು ಒದಗಿಸಲು ಸರಕಾರ ಹೊಸ ಹೊಸ ಯೋಜನೆ ಜಾರಿಗೆ ತಂದಿದೆ. ಆದರೆ ಅವುಗಳು ಸರಿಯಾದ ರೀತಿಯಲ್ಲಿ ಅನುಷ್ಠಾನಗೊಳ್ಳುತ್ತಿಲ್ಲ. ಹೌದು, ತಾಲೂಕಿನ ಅನೇಕ ಹಳ್ಳಿಗಳಲ್ಲಿ ಗ್ರಾಮೀಣ ಕುಡಿಯುವ ನೀರು, ನೈರ್ಮಲ್ಯ ಇಲಾಖೆ ಮತ್ತು ಜಿಲ್ಲಾ ಪಂಚಾಯತ್‌ ಸಹಯೋಗದೊಂದಿಗೆ ನಿರ್ಮಿಸಲಾದ ಶುದ್ಧ ನೀರಿನ ಘಟಕಗಳು ಹಲವು ವರ್ಷಗಳಾದರೂ ಆರಂಭವಾಗದೇ ಸರಕಾರದ ಲಕ್ಷಾಂತರ ರೂ. ಹಣ ನೀರಿನಲ್ಲಿ ಹೋಮ ಮಾಡಿದಂತಾಗಿದೆ.

Advertisement

ಸಮೀಪದ ಹೆಸರೂರು ಗ್ರಾಮದಲ್ಲಿ ಎರಡು ಶುದ್ಧ ನೀರಿನ ಘಟಕಗಳನ್ನು ನಿರ್ಮಿಸಿಲಾಗಿದೆ. ಒಂದು ಉದ್ಘಾಟನೆಗೊಂಡು ಕೆಲವೇ ತಿಂಗಳಿನಲ್ಲಿ ಸ್ಥಗಿತಗೊಂಡಿದೆ. ಮತ್ತೂಂದು ಘಟಕ ನಿರ್ಮಾಣಕ್ಕೆ ಬಾಕ್ಸ್‌ ಇಟ್ಟು (ನಿರ್ಮಿಸಿ) ವರ್ಷಗಳಾದರೂ ಅದು ಕಾರ್ಯರೂಪಕ್ಕೆ ಬರದೇ ಹಾಳಾಗಿದೆ. ಇದೇ ರೀತಿ ತೋನಸಿಹಾಳ ತಾಂಡಾದಲ್ಲಿ ಎರಡು ಶುದ್ಧ ಕುಡಿಯುವ ನೀರಿನ ಘಟಕಗಳನ್ನು ನಿರ್ಮಿಸಿದರೂ ಜನರಿಗೆ ಮಾತ್ರ ಶುದ್ಧ ನೀರು ಸಿಗುತ್ತಿಲ್ಲ. ತಾಂಡಾದಲ್ಲಿರುವ ಎರಡು
ಘಟಕಗಳು ಉದ್ಘಾಟನೆಯಾಗಿ ಹಾಳಾಗಿವೆ. ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪಿಸಿದ್ದೇ ಒಂದು ದೊಡ್ಡ ಸಾಧನೆ ಎಂಬಂತೆ ಜನಪ್ರತಿನಿಧಿಗಳು ಬಿಂಬಿಸುತ್ತಿದ್ದಾರೆ. ಆದರೆ ಅವುಗಳು ಇನ್ನೂ ಕಾರ್ಯರೂಪಕ್ಕೆ ಬಾರದೇ ಘಟಕದ ಯಂತ್ರಗಳು ಕೆಟ್ಟು ಮೂಲೆ ಸೇರಿವೆ.

ತಾಲೂಕಿನ ಇಂತಹ ಅನೇಕ ಹಳ್ಳಿಗಳಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ನಿರ್ಮಿಸಿ ವರ್ಷಗಳಾದರೂ ಇನ್ನೂ ಆರಂಭವಾಗಿದೆ ಯಂತ್ರ ಧೂಳು ತಿನ್ನುತ್ತಿವೆ. ಹಳ್ಳಿಗಳ ಜನರ ಆರೋಗ್ಯಕ್ಕಾಗಿ ಸರಕಾರ ಫ್ಲೋರೈಡ್‌ ಮುಕ್ತ ನೀರನ್ನು ಕಲ್ಪಿಸಲು ಲಕ್ಷಾಂತರ ರೂ. ಹಣ್ಣ ಖರ್ಚು ಮಾಡಿ ಸಮಗ್ರ ಕುಡಿಯುವ ನೀರಿನ ಜಲ ನಿರ್ಮಲ ಯೋಜನೆ ಅನುಷ್ಠಾನಗೊಳಿಸಿದೆ.

ಗ್ರಾಮೀಣ ಕುಡಿಯುವ ನೀರು, ನೈರ್ಮಲ್ಯ ಇಲಾಖೆ ಮತ್ತು ಜಿಲ್ಲಾ ಪಂಚಾಯತ್‌ ಇವರ ಸಹಯೋಗದೊಂದಿಗೆ ಹೆಸರೂರ, ತೋನಸಿಹಾಳ ತಾಂಡಾ ಗ್ರಾಮಗಳು ಸೇರಿದಂತೆ ಅನೇಕ ಕಡೆಗಳಲ್ಲಿ ನೀರಿನ ಶುದ್ಧೀಕರಣ ಘಟಕ ಸ್ಥಾಪಿಸಲಾಗಿದೆ. ಹಲವು ವರ್ಷಗಳಾದರೂ ಅದು ಜನರ ಉಪಯೋಗಕ್ಕೆ ಬರುತ್ತಿಲ್ಲ. ಸರ್ಕಾರ ಲಕ್ಷಾಂತರ ರೂ. ವೆಚ್ಚದಲ್ಲಿ ನೀರು ಶುದ್ಧೀಕರಣ ಘಟಕಕ್ಕೆ ಯಂತ್ರವನ್ನು ಅಳವಡಿಸಲಾಗಿದೆ. ಶುದ್ಧೀಕರಣ ಘಟಕವು ಸಿದ್ಧವಾಗಿ ವರ್ಷಗಳಾದರೂ
ಕಾರ್ಯಾರಂಭ ಮಾಡಿಲ್ಲ.

ತಾಂಡಾದಲ್ಲಿ ಶುದ್ಧ ನೀರಿನ ಘಟಕ ಸ್ಥಾಪನೆ ಮಾಡಿ ಮೂರ್‍ನಾಲ್ಕುì ವರ್ಷಗಳಾಗಿವೆ. ಆದರೆ ಶುದ್ಧೀಕರಣ ಘಟಕ ಕಾರ್ಯಾ ರಂಭವಾಗದೇ ಯಂತ್ರ ಹಾಳಾಗಿ ಮೂಲೆ ಸೇರಿದೆ ಎಂದು ಸಾರ್ವಜನಿಕರು ಆರೋಪಿಸುತ್ತಿದ್ದಾರೆ. ಇನ್ನಾದರೂ ಸಂಬಂಧಪಟ್ಟ ಅಧಿಕಾರಿಗಳು ಸರಕಾರದ ಯೋಜನೆಗಳನ್ನು ಜನರಿಗೆ ಸಿಗುವ ಸರಿಯಾದ ರೀತಿಯಲ್ಲಿ ಅನುಷ್ಠಾನ ಮಾಡಬೇಕೆಂಬುದೇ ಪ್ರಜ್ಞಾವಂತ ನಾಗರಿಕರ ಕಳಕಳಿಯಾಗಿದೆ.

Advertisement

ತೋನಸಿಹಾಳ ತಾಂಡಾದಲ್ಲಿರುವ ಎರಡು ಶುದ್ಧ ನೀರಿನ ಘಟಕಗಳ ಪೈಕಿ ಒಂದು ಘಟಕ ಕೆಟ್ಟು ಹೋಗಿದ್ದು, ಇನ್ನೊಂದು ಘಟಕವನ್ನು ರಿಪೇರಿ ಮಾಡಿಸಿದ್ದೇವೆ. ಆದರೆ ಸಾರ್ವಜನಿಕರು ಶುದ್ಧ ನೀರಿನ ಘಟಕದಿಂದ ನೀರು ಒಯ್ಯಲು ಹಿಂಜರಿಯುತ್ತಿದ್ದಾರೆ.
ಅಮೀನ್‌ ಅಲಂದಾರ್‌, ಕೇಸೂರು ಗ್ರಾಪಂ ಪಿಡಿಒ

ಹೇಸರೂರು ಗ್ರಾಮದ ಜನತಾ ಬಡಾವಣೆಯಲ್ಲಿರುವ ಶುದ್ಧ ಕುಡಿಯುವ ನೀರಿನ ಘಟಕ ಕೆಟ್ಟು ನಿಂತಿದೆ. ಇದನ್ನು ರಿಪೇರಿ ಮಾಡಿಸಲು ತಿಳಿಸಿದ್ದೇವೆ ಹಾಗೂ ಮುಖ್ಯ ರಸ್ತೆಯಲ್ಲಿರುವ ಇನ್ನೊಂದು ಘಟಕಕ್ಕೆ ಯಂತ್ರೋಪಕರಣ ಬರದ ಕಾರಣ ಹಾಳಾಗುತ್ತಿದೆ.
ಮುತ್ತಪ್ಪ ಛಲವಾದಿ, ದೋಟಿಹಾಳ ಗ್ರಾಪಂ ಪಿಡಿಒ

ಮಲ್ಲಿಕಾರ್ಜುನ ಮೆದಿಕೇರಿ

Advertisement

Udayavani is now on Telegram. Click here to join our channel and stay updated with the latest news.

Next