Advertisement
ಬಾಳೆಕಾಯಿ ದೋಸೆಬೇಕಾಗುವ ಸಾಮಗ್ರಿಗಳು · ಬೆಳ್ತಿಗೆ ಅಕ್ಕಿ -2 ಕಪ್ · ಬಾಳೆಕಾಯಿ (ಕದಳಿ, ಗಾಳಿ, ಮೈಸೂರು, ಕ್ಯಾವಂಡಿಷ್, ಬೂದು ಹೀಗೆ ಯಾವುದೇ ಬಾಳೆಕಾಯಿ) - 10 · ತೆಂಗಿನ ಕಾಯಿ ತುರಿ – 1 ಕಪ್ · ತೆಂಗಿನ ಎಣ್ಣೆ – 5 ಚಮಚ · ನೀರು – 4 ಕಪ್ · ಉಪ್ಪು – ರುಚಿಗೆ ತಕ್ಕಷು. ಮಾಡುವ ವಿಧಾನ: ಅಕ್ಕಿಯನ್ನು ಒಂದು ಗಂಟೆ ನೀರಿನಲ್ಲಿ ನೆನೆ ಹಾಕಿ. ಬಾಳೆಕಾಯಿಯ ಸಿಪ್ಪೆ ತೆಗೆದು ಪ್ರತಿಯೊಂದನ್ನು ಮೂರು- ನಾಲ್ಕು ಹೋಳುಗಳಾಗಿ ಮಾಡಿ, ಅರ್ಧ ಗಂಟೆಯ ಕಾಲ ನೀರಿನಲ್ಲಿ ನೆನೆಸಿ. ಅಕ್ಕಿಯನ್ನು ಚೆನ್ನಾಗಿ ತೊಳೆದು, ಬಾಳೆಕಾಯಿ ಹೋಳುಗಳೊಂದಿಗೆ ಹದವಾಗಿ ನೀರು ಬೆರೆಸಿ ರುಬ್ಬಿ. ಹಿಟ್ಟು ತರಿತರಿಯಾಗುತ್ತಾ ಬರುವಾಗ, ಕಾಯಿ ತುರಿ ಹಾಗೂ ಉಪ್ಪು ಸೇರಿಸಿ ನುಣ್ಣಗೆ ರುಬ್ಬಿ. ಹಿಟ್ಟನ್ನು ಪಾತ್ರೆಗೆ ಸುರಿದು, ನೀರು ಸೇರಿಸಿ ದಪ್ಪ ದೋಸೆಯ ಹದಕ್ಕೆ ಮಾಡಿಕೊಳ್ಳಿ. ಸಣ್ಣ ಉರಿಯಲ್ಲಿ ಕಾವಲಿ ಇಡಿ. ಕಾವಲಿ ಕಾದಾಗ ತೆಂಗಿನ ಎಣ್ಣೆ ಸವರಿ ದೋಸೆ ಹೊಯ್ಯಿರಿ.
ಬೇಕಾಗುವ ಸಾಮಗ್ರಿಗಳು · ಬೆಳ್ತಿಗೆ ಅಕ್ಕಿ- 2 ಕಪ್ · ಸಣ್ಣದಾಗಿ ಕತ್ತರಿಸಿದ ಸಾಂಬಾರ್ ಸೌತೆ ಹೋಳು 2 ಕಪ್ · ರುಚಿಗೆ ತಕ್ಕಷ್ಟು ಉಪ್ಪು.
ಮಾಡುವ ವಿಧಾನ: ಅರ್ಧ ಗಂಟೆ ಕಾಲ ಅಕ್ಕಿ ನೀರಿನಲ್ಲಿ ನೆನೆಹಾಕಿ. ಅಕ್ಕಿ, ಸೌತೆ ಹೋಳು, ಉಪ್ಪು ಸೇರಿಸಿ ಅರೆಯಿರಿ. ನೀರುದೋಸೆ ಹದಕ್ಕೆ ಹಿಟ್ಟು ತಯಾರಿಸಿ ಕಾದ ತವಾದ ಮೇಲೆ ಹೊಯ್ಯಿರಿ. ಬೂದು ಕುಂಬಳಕಾಯಿ ದೋಸೆ
ಬೇಕಾಗುವ ಸಾಮಗ್ರಿಗಳು · ಬೆಳ್ತಿಗೆ ಅಕ್ಕಿ 2 ಕಪ್ · ಸಣ್ಣ ದಾ ಗಿ ಕತ್ತರಿಸಿದ ಬೂದು ಕುಂಬಳಕಾಯಿ ಹೋಳು 2 ಕಪ್ · ರುಚಿಗೆ ತಕ್ಕಷ್ಟು ಉಪ್ಪು. ಮಾಡುವ ವಿಧಾನ: ಅರ್ಧ ಗಂಟೆ ಕಾಲ ಅಕ್ಕಿ ನೀರಿನಲ್ಲಿ ನೆನೆಹಾಕಿ. ಬೂದು ಕುಂಬಳಕಾಯಿ ಹೋಳು, ಅಕ್ಕಿ, ಉಪ್ಪು ಸೇರಿಸಿ ಅರೆಯಿರಿ, ಹಿಟ್ಟು ಸ್ವಲ್ಪ ದಪ್ಪಕ್ಕೆ (ಉದ್ದಿನ ದೋಸೆ ಹಿಟ್ಟಿನಂತೆ) ಇರಲಿ. ಕಾದ ತವಾದ ಮೇಲೆ ಹೊಯ್ಯಿರಿ.
Related Articles
ಬೇಕಾಗುವ ಸಾಮಗ್ರಿಗಳು · ಬೆಳ್ತಿಗೆ ಅಕ್ಕಿ 2 ಕಪ್ · ಸಣ್ಣದಾಗಿ ಕತ್ತರಿಸಿದ ಸೋರೆಕಾಯಿ ಹೋಳ 2 ಕಪ್ · ಉಪ್ಪು ರುಚಿಗೆ ತಕ್ಕಷ್ಟು. ಮಾಡುವ ವಿಧಾನ: ಬೆಳ್ತಿಗೆ ಅಕ್ಕಿಯನ್ನು ಅರ್ಧ ಗಂಟೆ ಕಾಲ ನೀರಿನಲ್ಲಿ ನೆನೆಹಾಕಿ. ಸೋರೆಕಾಯಿ ಹೋಳು, ಅಕ್ಕಿ, ಉಪ್ಪು ಸೇರಿಸಿ ಅರೆಯಿರಿ. ಹಿಟ್ಟು ಉದ್ದಿನ ಹಿಟ್ಟಿಗಿಂತ ಸ್ವಲ್ಪ ತೆಳ್ಳಗಿರಲಿ. ಕಾದ ತವಾದ ಮೇಲೆ ಹೊಯ್ಯಿರಿ. ಸೋರೆಕಾಯಿ ದೋಸೆಯನ್ನು ಯಾವುದೇ ಬಗೆಯ ಚಟ್ನಿ ಅಥವಾ ಸಾಂಬಾರ್ ನೊಂದಿಗೆ ಸವಿಯಬಹುದು.
Advertisement
ಸಿಹಿ ದೋಸೆಬೇಕಾಗುವ ಸಾಮಗ್ರಿಗಳು · ಬೆಳ್ತಿಗೆ ಅಕ್ಕಿ – 2 ಕಪ್ · ಎಳೆ ತೆಂಗಿನ ಕಾಯಿ ತುರಿ 1 ಕಪ್ · ಬೆಲ್ಲ – ಅರ್ಧ ಕಪ್ · ಉಪ್ಪು ರುಚಿಗೆ ತಕ್ಕಷ್ಟು · ತುಪ್ಪ – 2 ಚಮಚ. ಮಾಡುವ ವಿಧಾನ: ಅಕ್ಕಿಯನ್ನುನ 2 ಗಂಟೆಗಳ ಕಾಲ ನೀರಿನಲ್ಲಿ ನೆನೆ ಹಾಕಿ. ಬಳಿಕ ಅದಕ್ಕೆ ಎಳೆ ತೆಂಗಿನ ಕಾಯಿ ತುರಿ, ಬೆಲ್ಲ, ಉಪ್ಪು ಸೇರಿಸಿ ರುಬ್ಬಿಕೊಳ್ಳಿ. ನೀರು ದೋಸೆ ಹಿಟ್ಟಿಗಿಂತ ದಪ್ಪ ಇರಲಿ. ಕಾದತವಾದ ಮೇಲೆ ತುಪ್ಪ ಸವರಿ ಸ್ವಲ್ಪ ದಪ್ಪಕೆ ಹೊಯ್ಯಿರಿ. ಕ್ಯಾರೆಟ್ ದೋಸೆ
ಬೇಕಾಗುವ ಸಾಮಗ್ರಿಗಳು · ಬೆಳ್ತಿಗೆ ಅಕ್ಕಿ- 2 ಕಪ್ · ಕ್ಯಾರೆಟ್ ತುರಿ – 1 ಕಪ್ · ತೆಂಗಿನೆಣ್ಣೆ – 4 ಚಮಚ · ಉಪ್ಪು ರುಚಿಗೆ ತಕ್ಕಷ್ಟು.ಮಾಡುವ ವಿಧಾನ: ಅಕ್ಕಿಯನ್ನುನ 2 ಗಂಟೆಗಳ ಕಾಲ ನೀರಿನಲ್ಲಿ ನೆನೆ ಹಾಕಿ. ಅಕ್ಕಿಗೆ ಉಪ್ಪು ಸೇರಿಸಿ ಅರೆದು ನೀರು ದೋಸೆ ಹಿಟ್ಟಿನ ಹದಕ್ಕೆ ಹಿಟ್ಟು ತಯಾರಿಸಿ.ಅದಕ್ಕೆ ಕ್ಯಾರೆಟ್ ತುರಿ ಮಿಶ್ರ ಮಾಡಿರುಬ್ಬಬೇಕು. ಕಾದ ಕಾವಲಿಗೆ ಎಣ್ಣೆ ಸವರಿ ದೋಸೆ ಹೊಯ್ಯಿರಿ. ಬೆಂಡೆಕಾಯಿ ದೋಸೆ
ಬೇಕಾಗುವ ಸಾಮಗ್ರಿಗಳು · ಬೆಳ್ತಿಗೆ ಅಕ್ಕಿ- 2 ಕಪ್ · ಬೆಂಡೆಕಾಯಿ ಹೋಳು 1 ಕಪ್ · ಉಪ್ಪು ರುಚಿಗೆ ತಕ್ಕಷ್ಟು · ತೆಂಗಿನೆಣ್ಣೆ – 4 ಚಮಚ. ಮಾಡುವ ವಿಧಾನ: ಅಕ್ಕಿಯನ್ನು 1-2 ಗಂಟೆಗಳ ಕಾಲ ನೀರಿನಲ್ಲಿ ನೆನೆ ಹಾಕಿ. ಅಕ್ಕಿಗೆ ಉಪ್ಪು ಸೇರಿಸಿ ಅರೆಯಿರಿ. ಅಕ್ಕಿ ಸಣ್ಣಗಾದಾಗ (ನೀರುದೋಸೆ ಹಿಟ್ಟಿಗಿಂತ ಸ್ವಲ್ಪ ದಪ್ಪಗಿರಲಿ) ಅದಕ್ಕೆ ಬೆಂಡೆಕಾಯಿ ಹೋಳು ಸೇರಿಸಿ ಸ್ವಲ್ಪ ರುಬ್ಬಿಕೊಳ್ಳಿ. ಕಾದತವಾದ ಮೇಲೆ ಎಣ್ಣೆ ಸವರಿ ಹೊಯ್ಯಿರಿ. ಬೆಂಡೆಕಾಯಿ ದೋಸೆ ಸಿದ್ಧ. ಹಲಸಿನಕಾಯಿ ದೋಸೆ
ಬೇಕಾಗುವ ಸಾಮಗ್ರಿಗಳು: · ಬೆಳ್ತಿಗೆ ಅಕ್ಕಿ 2 ಕಪ್ · ಹಲಸಿನ ಕಾಯಿಯ ಸೊಳೆ ಹೋಳು (ಸಣ್ಣಗೆ ಕತ್ತರಿಸಿದ ಹಲಸಿನ ಕಾಯಿಯ ಸೊಳೆ) ಒಂದು ಕಪ್
· ಉಪ್ಪು ರುಚಿಗೆ ತಕ್ಕಷ್ಟು. ಮಾಡುವ ವಿಧಾನ: ಬೆಳ್ತಿಗೆ ಅಕ್ಕಿಯನ್ನು ಅರ್ಧ ಗಂಟೆ ಕಾಲ ನೀರಿನಲ್ಲಿ ನೆನೆಹಾಕಿ. ಮೊದಲು ಅಕ್ಕಿಯನ್ನು ಸ್ವಲ್ಪ ಅರೆಯಿರಿ. ಅಕ್ಕಿ ಸಜ್ಜಿಗೆಯಂತೆ ತರಿತರಿ ಇರುವಾಗ ಹಲಸಿನ ಕಾಯಿ ಸೊಳೆ ಹೋಳು ಮತ್ತು ಉಪ್ಪು ಸೇರಿಸಿ ನುಣ್ಣಗೆ ಅರೆಯಿರಿ. ಉದ್ದಿನ ದೋಸೆ ಹಿಟ್ಟಿಗಿಂತ ಸ್ವಲ್ಪ ತೆಳ್ಳಗೆ ಹಿಟ್ಟು ತಯಾರಿಸಿ ಕಾದ ತವಾದ ಮೇಲೆ ಹೊಯ್ಯಿರಿ. ಬಿಸಿಬಿಸಿಯಾದ ಹಲಸಿನಕಾಯಿ ದೋಸೆಗೆ ಎಣ್ಣೆ, ಉಪ್ಪಿನ ಕಾಯಿ ರಸ, ಜೇನು ತುಪ್ಪ ಅಥವಾ ಮಾವಿನ ಕಾಯಿ ಚಟ್ನಿ ಸೇರಿಸಿ ಸವಿಯಬಹುದು. ಕ್ಯಾಬೇಜ್ ದೋಸೆ
ಬೇಕಾಗುವ ಸಾಮಗ್ರಿಗಳು · ಬೆಳ್ತಿಗೆ ಅಕ್ಕಿ – 2 ಕಪ್ · ಸಣ್ಣಕ್ಕೆ ಕತ್ತರಿಸಿದ ಕ್ಯಾಬೇಜ್- 1 ಕಪ್ · ಒಣಮೆಣಸು -2ರಿಂದ 3 · ಕೊತ್ತಂಬರಿ – 3 ಟೀ ಚಮಚ · ಉಪ್ಪು ರುಚಿಗೆ · ತೆಂಗಿನ ಎಣ್ಣೆ – 4 ಚಮಚ. ಮಾಡುವ ವಿಧಾನ: ಅಕ್ಕಿಯನ್ನು 1- 2ಗಂಟೆಗಳ ಕಾಲ ನೀರಿನಲ್ಲಿ ನೆನೆ ಹಾಕಿ. ಬಳಿಕ ಅದರೊಂದಿಗೆ ಕ್ಯಾಬೇಜ್, ಕೊತ್ತಂಬರಿ, ಒಣಮೆಣಸು, ಉಪ್ಪು ಸೇರಿಸಿ ರುಬ್ಬಿ. ಕಾದ ಕಾವಲಿಗೆ ಮೇಲೆ ಎಣ್ಣೆ ಸವರಿ ಹೊಯ್ಯಿರಿ. ಇದೇ ಅಳತೆಯಲ್ಲಿ ಕ್ಯಾಬೇಜ್ ಬದಲು ಚೀನಿ ಕಾಯಿ ಅಥವಾ ಬಾಳೆ ಕಾಯಿ ಅಥವಾ ಬಾಳೆ ದಿಂಡು ಸೇರಿಸಿ ಕೂಡ ದೋಸೆ ಮಾಡಬಹುದು. ಮಜ್ಜಿಗೆ ದೋಸೆ
ಬೇಕಾಗುವ ಸಾಮಗ್ರಿಗಳು· ಬೆಳ್ತಿಗೆ ಅಕ್ಕಿ- 1 ಕಪ್ · ಕುಚ್ಚಿಗೆ ಅಕ್ಕಿ- 1 ಕಪ್ · ಹುಳಿ ಮಜ್ಜಿಗೆ -1 ಕಪ್ · ಅವಲಕ್ಕಿ -ಅರ್ಧ ಕಪ್ · ತೆಂಗಿನ ಎಣ್ಣೆ -4 ಚಮಚ · ರುಚಿಗೆ ತಕ್ಕಷ್ಟು ಉಪ್ಪು ಮಾಡುವ ವಿಧಾನ: ಬೆಳ್ತಿಗೆ ಹಾಗೂ ಕುಚ್ಚಿಗೆ ಎರಡೂ ಬಗೆಯ ಅಕ್ಕಿಯನ್ನು 2-3 ಗಂಟೆಗಳ ಕಾಲ ನೀರಿನಲ್ಲಿ ನೆನೆ ಹಾಕಿ ಇಡಿ. ಬಳಿಕ ಉಪ್ಪು ಸೇರಿಸಿ ರುಬ್ಬಿ ಹಿಟ್ಟನ್ನು 5- 6 ಗಂಟೆಗಳ ಕಾಲ ಮುಚ್ಚಿ ಇಡಿ. ಅನಂತರ ಹಿಟ್ಟಿಗೆ ಹುಳಿ ಮಜ್ಜಿಗೆ, ಅವಲಕ್ಕಿ ಹಾಕಿ ಚೆನ್ನಾಗಿ ಮಿಶ್ರ ಮಾಡಿ. ಕಾದ ತವಾದ ಮೇಲೆ ಎಣ್ಣೆ ಸವರಿ ದೋಸೆ (ಉದ್ದಿನ ದೋಸೆಯಂತೆ ದಪ್ಪಗೆ) ಹುಯ್ಯಿರಿ. ಗಣೇಶ ಕುಳಮರ್ವ