ಶಹಾಪುರ: ತಾಲೂಕಿನ ದೋರನಹಳ್ಳಿ ಗ್ರಾಮದ ಯುಕೆಪಿ ಕ್ಯಾಂಪಿನಲ್ಲಿ ಫೆ.25 ರಂದು ಸೀಮಂತ ಕಾರ್ಯಕ್ರಮವೊಂದರಲ್ಲಿ ನಡೆದ ಸಿಲಿಂಡರ್ ಸ್ಪೋಟ ದುರಂತದಲ್ಲಿ ಮೃತರ ಸಂಖ್ಯೆ ಗುರುವಾರ 11 ಕ್ಕೆ ಏರಿಕೆಯಾಗಿದೆ.
ಹೆಚ್ಚಿನ ಚಿಕಿತ್ಸೆಗಾಗಿ ಮಹಾರಾಷ್ಟ್ರದ ಸೋಲಾಪುರ ಗಂಗಾಮಯಿ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಸಂಗಣ್ಣಗೌಡ ಗುರುಲಿಂಗಪ್ಪಗೌಡ ಲಕಶೆಟ್ಟಿ (55) ಚಿಕಿತ್ಸೆ ಫಲಕಾರಿಯಾಗದೆ ಇಂದು ಮೃತಪಟ್ಟಿದ್ದಾರೆ.
ಸಿಲಿಂಡರ್ ದುರಂತ ಜಿಲ್ಲೆಯಲ್ಲಿಯೇ ಅತಿದೊಡ್ಡ ದುರ್ಘಟನೆ ಇದಾಗಿದ್ದು, 24-25 ಜನ ಗಾಯಗೊಂಡಿದ್ದರು. ಇಡಿ ಗ್ರಾಮದ ತುಂಬಾ ಸೂತಕದ ಛಾಯೆ ಆವರಿಸಿದ್ದು, ಶಿವರಾತ್ರಿ ಹಬ್ಬ ಕರಾಳ ಆಚರಣೆಯಾಗಿ ಕಾಡುತ್ತಿದೆ.
ಇದನ್ನೂ ಓದಿ:ಚೆನ್ನೈ ಏರ್‌ಪೋರ್ಟ್‌ನಲ್ಲಿ ಸ್ವಯಂ ಗುಂಡು ಹಾರಿಸಿಕೊಂಡು ಭದ್ರತಾ ಸಿಬ್ಬಂದಿ ಆತ್ಮಹತ್ಯೆ
ನಿತ್ಯ ನರಕಯಾತನೆ ಅನುಭವಿಸುತ್ತಿರುವ ಗ್ರಾಮಸ್ಥರು ನಿತ್ಯ ಸಾವಿನ ಸುದ್ದಿ ಬರುತ್ತಲಿರುತ್ತದೆ. ಇವತ್ಯಾರದೋ ಎಂಬ ಚಿಂತೆಯಲ್ಲಿ ಸಂಸ್ಕಾರ ತಯಾರಿ ನಡೆಸುವ ಸ್ಥಿತಿ ಬಂದಿರುವದು ನಮ್ಮೆಲ್ಲರ ದೌರ್ಭಾಗ್ಯವೆಂದು ಗ್ರಾಮದ ಯುವ ಮುಖಂಡ ತಮ್ಮಣ್ಣಗೌಡ ಜೋಳದ ದುಃಖವನ್ನು ತೋಡಿಕೊಂಡಿದ್ದಾರೆ.