Advertisement

ಕಠ್ಮಂಡು: ವಿಶ್ವದ ಅತಿ ಕಡಿಮೆ ಎತ್ತರದ ತರುಣನೀತ

07:37 PM May 26, 2022 | Team Udayavani |

ಕಠ್ಮಂಡು: ನೇಪಾಳದ ದೊರ್‌ ಬಹದೂರ್‌ ಖಪಂಗಿ(17) ಅವರನ್ನು ವಿಶ್ವದ ಅತ್ಯಂತ ಕಡಿಮೆ ಎತ್ತರದ ತರುಣ ಎಂದು ಗಿನ್ನೆಸ್‌ ವರ್ಲ್ಡ್ ರೆಕಾರ್ಡ್‌ ಸಂಸ್ಥೆ ಘೋಷಿಸಿದೆ.

Advertisement

ದೊರ್‌ 73.43 ಸೆಂ.ಮೀ(2 ಅಡಿ 4.9 ಇಂಚು) ಎತ್ತರವಿದ್ದಾರೆ. ಹುಟ್ಟಿದಾಗಿನಿಂದ ಎಲ್ಲರಂತೆಯೇ ಸಾಮಾನ್ಯವಾಗಿ ಬೆಳೆದ ದೊರ್‌ರಲ್ಲಿ ಏಳು ವರ್ಷ ವಯಸ್ಸಿನಿಂದ ಯಾವುದೇ ಬೆಳವಣಿಗೆ ಕಂಡಿಲ್ಲ. ಅದಕ್ಕೆ ಕಾರಣವೇನು ಎನ್ನುವುದೂ ಗೊತ್ತಿಲ್ಲ ಎಂದಿದೆ ಕುಟುಂಬ.

ಸಿಂಧುಲಿ ಜಿಲ್ಲೆಯಲ್ಲಿರುವ ದೊರ್‌ ಸ್ಥಳೀಯ ಶಿಕ್ಷಣ ಸಂಸ್ಥೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಈ ಹಿಂದೆ ವಿಶ್ವದ ಅತ್ಯಂತ ಕಡಿಮೆ ಎತ್ತರದ ತರುಣ ಎನ್ನುವ ದಾಖಲೆಯು ನೇಪಾಳದ ಖಗೇಂದ್ರ ಥಾಪ ಮಗರ್‌ ಅವರ ಪಾಲಾಗಿತ್ತು. 1992ರಲ್ಲಿ ಜನಿಸಿದ್ದ ಅವರು 2020ರಲ್ಲಿ ಕೊನೆಯುಸಿರೆಳೆದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next