ನವದೆಹಲಿ:ಎರಡನೇ ಕೋವಿಡ್ ಲಸಿಕೆ ಅಭಿಯಾನದಲ್ಲಿ ಮನೆ, ಮನೆ ಬಾಗಿಲಿಗೆ ತಲುಪಿಸಬೇಕಾಗಿದೆ. ಯಾಕೆಂದರೆ ಕೋವಿಡ್ ಪ್ರಕರಣಗಳ ಸಂಖ್ಯೆ ಇಳಿಕೆಯಾಗುತ್ತಿರುವ ಸಂದರ್ಭದಲ್ಲಿ ನಮಗೆ ಕೆಲವೊಮ್ಮೆ ನಮ್ಮ ಅಗತ್ಯತೆಗಳು ಕಡಿಮೆಯಾಗುವ ಅನುಭವವಾಗತೊಡಗುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಬುಧವಾರ (ನವೆಂಬರ್ 03) ಅಭಿಪ್ರಾಯವ್ಯಕ್ತಪಡಿಸಿದರು.
ಇದನ್ನೂ ಓದಿ:ಹಾನಗಲ್ ನಲ್ಲಿ ಡಿಕೆಶಿ,ಸಿದ್ಧರಾಮಯ್ಯ ಜೇಬಿಗೆ ನೋಟು ಇಟ್ಟು ವೋಟ್ ಕೇಳಿದ್ರಾ?: ಈಶ್ವರಪ್ಪ
ಈವರೆಗೂ ನೀವೆಲ್ಲರೂ ಜನರನ್ನು ಲಸಿಕಾ ಕೇಂದ್ರಕ್ಕೆ ಕರೆದೊಯ್ಯುವ ಏರ್ಪಾಟು ಮಾಡಿದ್ದೀರಿ. ಆದರೆ ಇದೀಗ ನೀವು ಲಸಿಕೆಯನ್ನು ಪ್ರತಿ ಮನೆ ಬಾಗಿಲಿಗೆ ಕೊಂಡೊಯ್ಯಬೇಕಾಗಿದೆ. ಅದು ಮನೆ, ಮನೆಗೆ ಲಸಿಕೆಯನ್ನು ತಲುಪಬೇಕಾಗಿದೆ. ಇದೊಂದು ಅಭ್ಯಾಸವಾಗಬೇಕಾಗಿದೆ ಎಂದು ಕಡಿಮೆ ಪ್ರಮಾಣದ ಲಸಿಕೆ ನೀಡಿರುವ ರಾಜ್ಯಗಳ ಮುಖ್ಯಮಂತ್ರಿಗಳು ಮತ್ತು ಅಧಿಕಾರಿಗಳ ವರ್ಚುವಲ್ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತ ಪ್ರಧಾನಿ ಮೋದಿ ಹೇಳಿದರು.
ಜಾರ್ಖಂಡ್, ಮಣಿಪುರ, ನಾಗಲ್ಯಾಂಡ್, ಅರುಣಾಚಲ ಪ್ರದೇಶ, ಮಹಾರಾಷ್ಟ್ರ, ಮೇಘಾಲಯ ಮತ್ತು ಇತರ ರಾಜ್ಯಗಳ 40ಕ್ಕೂ ಅಧಿಕ ಜಿಲ್ಲೆಗಳಲ್ಲಿ ಕಡಿಮೆ ಪ್ರಮಾಣದ ಲಸಿಕೆ ವಿತರಿಸಲಾಗಿದೆ ಎಂದು ಸಭೆಯಲ್ಲಿ ತಿಳಿಸಿದರು. ಈ ವೇಳೆ ಕಡಿಮೆ ಲಸಿಕೆ ನೀಡಿದ ರಾಜ್ಯಗಳ ಮುಖ್ಯಮಂತ್ರಿಗಳು ಸಭೆಯಲ್ಲಿ ಹಾಜರಿದ್ದರು.
ಉಚಿತ ಲಸಿಕೆ ಅಭಿಯಾನದಡಿ, ನಾವು ದಿನಂಪ್ರತಿ 2.5 ಕೋಟಿ ಲಸಿಕೆ ನೀಡಬೇಕಾಗಿದೆ. ಇದು ನಮ್ಮ ಸಾಮರ್ಥ್ಯವೂ ಹೌದು. ಇದೀಗ ನಮ್ಮ ಗುರಿ ಪ್ರತಿ ಮನೆ, ಮನೆ ಬಾಗಿಲಿಗೆ ಲಸಿಕೆ ಎಂಬ ಅಭಿಯಾನದ ಮೂಲಕ ಪ್ರತಿಯೊಂದು ಮನೆಯನ್ನು ತಲುಪಬೇಕಾಗಿದೆ ಎಂದು ಪ್ರಧಾನಿ ಮೋದಿ ತಿಳಿಸಿದರು.