ಕೊಪ್ಪಳ : ಸಿದ್ದರಾಮಯ್ಯ ಅವರಿಗೆ ಕ್ಷೇತ್ರವಿಲ್ಲ ಎಂಬ ಪ್ರಚಾರ ಪ್ರತಿಪಕ್ಷದ ತಂತ್ರ ಎಂದು ಕಾಂಗ್ರೆಸ್ ಶಾಸಕ ಡಾ.ಯತೀಂದ್ರ ಸಿದ್ದರಾಮಯ್ಯ ಶುಕ್ರವಾರ ಹೇಳಿಕೆ ನೀಡಿದ್ದಾರೆ.
ಸಿದ್ದರಾಮಯ್ಯ ಅವರು ಬೇರೆ ಬೇರೆ ಕ್ಷೇತ್ರಕ್ಕೆ ನಿಲ್ಲುತ್ತಿದ್ದಾರೆ ಎನ್ನುವ ಹೇಳಿಕೆ ವ್ಯಕ್ತವಾಗುತ್ತಿದೆ. ಅವರ ಕ್ಷೇತ್ರದ ಬಗ್ಗೆ ಈಗಲೇ ಫೈನಲ್ ಮಾಡುವ ಅವಶ್ಯಕತೆ ಇಲ್ಲ. ಈಗಲೂ ಸಿದ್ದರಾಮಯ್ಯನವರಿಗೆ ವರುಣಾ ಕ್ಷೇತ್ರದಲ್ಲಿ ಅವಕಾಶ ತೆರೆದ ಬಾಗಿಲು ಎಂದರು.
ಅವರು ಕೊಪ್ಪಳದಲ್ಲೂ ನಿಲ್ಲುತ್ತಾರೆ ಎನ್ನುವ ವದಂತಿ ತಳ್ಳಿ ಹಾಕಿದ ಯತಿಂದ್ರ, ಇದು ಅವರ ಕೊನೆಯ ಚುನಾವಣೆ, ಹೀಗಾಗಿ ಮೈಸೂರು ಜಿಲ್ಲೆಯಲ್ಲಿ ನಿಲ್ಲಲು ಜನ ಕೇಳಿದ್ದಾರೆ. ಸಿದ್ದರಾಮಯ್ಯನವರಿಗೆ ಒಂದಕ್ಕಿಂತ ಹೆಚ್ಚು ಕ್ಷೇತ್ರಕ್ಕೆ ಬೇಡಿಕೆ ಬರುತ್ತಿವೆ.ಹೀಗಾಗಿ ಸ್ವಲ್ಪ ಗೊಂದಲವಿದೆ ಎಂದರು.
ಕೋಲಾರದಲ್ಲಿ ಸಿದ್ದರಾಮಯ್ಯ ವಿರುದ್ದ ಪೋಸ್ಟರ್ ಅಭಿಯಾನಕ್ಕೆ ಸಂಬಂಧಿಸಿ ಪ್ರತಿಕ್ರಿಯಿಸಿ, ‘ಇದು ಪ್ರತಿಪಕ್ಷದವರ ಕೆಲಸ.ಪ್ರತಿಪಕ್ಷದವರು ಸಿದ್ದರಾಮಯ್ಯ ಅವರನ್ನು ಸೋಲಿಸಬೇಕೆಂಬ ಕಾರಣಕ್ಕೆ ಟಾರ್ಗೆಟ್ ಮಾಡುತ್ತಿದ್ದಾರೆ ಎಂದರು.
Related Articles
ಸಿದ್ದರಾಮಯ್ಯ ಎರಡು ಕ್ಷೇತ್ರದಲ್ಲಿ ನಿಲ್ಲಬೇಕೆನ್ನುವ ದೇವಿಯ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಅದು ನಮ್ಮ ಮನೆ ದೇವರು ಅಲ್ಲ.ಅದಕ್ಕೂ ನಾವು ತೆಗೆದುಕೊಳ್ಳುವ ನಿರ್ಧಾರಕ್ಕೂ ಸಂಬಂಧವಿಲ್ಲ ಎಂದರು.