Advertisement

ಚೀನ ಮೊಬೈಲ್‌ ಬಳಕೆ ಬೇಡ; ಯೋಧರಿಗೆ ಮಿಲಿಟರಿ ಇಂಟೆಲಿಜೆನ್ಸ್‌ ಸುತ್ತೋಲೆ

12:55 AM Mar 09, 2023 | Team Udayavani |

ಹೊಸದಿಲ್ಲಿ: ಭಾರತ ಮತ್ತು ಚೀನ ಗಡಿ ತಂಟೆ ಮುಂದುವರಿದಿರುವಂತೆಯೇ ಆ ದೇಶದ ಕಂಪೆನಿಗಳು ಉತ್ಪಾದಿಸುವ ಮೊಬೈಲ್‌ಗ‌ಳನ್ನು ಬಳಕೆ ಮಾಡಬಾರದು ಎಂದು ಮುನ್ನೆಚ್ಚರಿಕೆಯ ಸುತ್ತೋಲೆ ರವಾನೆಯಾಗಿದೆ. ಮಿಲಿಟರಿ ಇಂಟೆಲಿ ಜೆನ್ಸ್‌ ಈ ಎಚ್ಚರಿಕೆ ನೀಡಿದೆ.

Advertisement

2020ರಲ್ಲಿ ಚೀನ ಕಂಪೆನಿಗಳು ತಯಾರಿಸಿದ ಮೊಬೈಲ್‌ಗ‌ಳು ಮತ್ತು ಆ್ಯಪ್‌ಗ್ಳಿಂದಾಗಿ ರಕ್ಷಣೆಗೆ ಸಂಬಂಧಿಸಿದ ಸೂಕ್ಷ್ಮ ಮಾಹಿತಿ ಸೋರಿಕೆಯಾದ ಬಳಿಕ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾ ಗುತ್ತಿತ್ತು.

ಗಾಲ್ವನ್‌ ಗಲಾಟೆಯ ಬಳಿಕ ಚೀನ ವಿರುದ್ಧ ಕೇಂದ್ರ ಸರಕಾರ ಕಠಿನ ನಿಲುವು ತಳೆದಿದೆ. ಒನ್‌ಪ್ಲಸ್‌, ಒಪ್ಪೊ, ರಿಯಲ್‌ಮೀ ಹಾಗೂ ಇನ್ನೂ ಇತರ 11 ಪ್ರಮುಖ ಮೊಬೈಲ್‌ ಬ್ರಾಂಡ್‌ಗಳನ್ನು ಬಳಸದಂತೆ ಸೂಚಿಸಲಾಗಿದೆ ಎಂದು “ನ್ಯೂಸ್‌18′ ವರದಿ ಮಾಡಿದೆ.

ಗಡಿ ಪ್ರದೇಶಗಳಲ್ಲಿ ಇರುವ ಯೋಧರು, ಅವರ ಕುಟುಂಬಗಳು ಚೀನ ಮೊಬೈಲ್‌ಗ‌ಳನ್ನು ಬಳಸಬಾರದು. 31ರ ಒಳಗಾಗಿ ಚೀನಿ ಕಂಪೆನಿಗಳ ಮೊಬೈಲ್‌ ಬಳಕೆ ತ್ಯಜಿಸಬೇಕು. ಅನ್ಯ ಕಂಪೆನಿಗಳ ಮೊಬೈಲ್‌ ಖರೀದಿಗೆ ಸಲಹೆ ಮಾಡಲಾಗಿದೆ.

ಪಾಕ್‌ ಏಜೆಂಟರಿಗ್‌ ಸಿಮ್‌: ಐವರ ಬಂಧನ
ಪಾಕಿಸ್ಥಾನ ಏಜೆಂಟರಿಗೆ ಗುಪ್ತಚರರಿಗೆ ಸಿಮ್‌ಗಳನ್ನು, ಮೊಬೈಲ್‌ಗ‌ಳನ್ನು ಪೂರೈಸುತ್ತಿದ್ದ ಅಸ್ಸಾಂ ನಾಗಾಂವ್‌, ಮಾರಿಗಾಂವ್‌ ಜಿಲ್ಲೆಗಳಿಗೆ ಸೇರಿದ ಐವರನ್ನು ಬಂಧಿಸಲಾಗಿದೆ.

Advertisement

ಮಂಗಳವಾರ ತಡರಾತ್ರಿ ನಡೆದ ದಿಢೀರ್‌ ಪೊಲೀಸ್‌ ಕಾರ್ಯಾಚರಣೆಯಲ್ಲಿ 18 ಮೊಬೈಲ್‌, 136 ಸಿಮ್‌ಗಳು, ಇತರ ವಸ್ತುಗಳನ್ನು ಅಸ್ಸಾಂ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಇದರಲ್ಲಿ ವಿದೇಶಿ ರಾಯಭಾರಿ ಕಚೇರಿಯೊಂದಕ್ಕೆ ರಕ್ಷಣ ಮಾಹಿತಿಗಳನ್ನು ರವಾನಿಸುತ್ತಿದ್ದ ಮೊಬೈಲ್‌ ಕೂಡ ಸೇರಿದೆ ಎಂದು ಅಸ್ಸಾಂ ಪೊಲೀಸ್‌ ವಕ್ತಾರ ಪ್ರಶಾಂತ ಭುಯಾನ್‌ ತಿಳಿಸಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next