Advertisement

Threat: ಭಯಬೇಡ, ಬಾಂಬ್ ಹುಸಿ ಬೆದರಿಕೆ: ಜಿಲ್ಲಾಡಳಿತ

03:09 PM Jan 06, 2024 | Kavyashree |

ವಿಜಯಪುರ: ಐತಿಹಾಸಿಕ ಗೋಲ್‌ ಗುಂಬಜ್ ಆವರಣದಲ್ಲಿರುವ ಪಾರಂಪರಿಕ ವಸ್ತುಸಂಗ್ರಹಾಲಯಕ್ಕೆ ಬಾಂಬ್ ಇರಿಸಿರುವ ಇ-ಮೇಲ್ ಸಂದೇಶ ಹುಸಿ ಬೆದರಿಕೆಯಾಗಿದೆ. ಪೊಲೀಸರು ಪರಿಶೀಲಿಸಿದ್ದು, ಸಾರ್ವಜನಿಕರು ಭಯಪಡಬೇಕಿಲ್ಲ ಎಂದು ಜಿಲ್ಲಾಡಳಿತ ಸ್ಪಷ್ಟಪಡಿಸಿದೆ.

Advertisement

ಈ ಘಟನೆ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಜಿಲ್ಲಾಧಿಕಾರಿ ಭೂಬಾಲನ್, ಐತಿಹಾಸಿಕ ಗೋಲ್‌ಗುಂಬಜ್ ಪರಿಸರದಲ್ಲಿ ಬಾಂಬ್ ಇರಿಸಿರುವ ಹುಸಿ ಮೇಲ್ ಬಂದಿದ್ದು, ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಹೀಗಾಗಿ ಸಾರ್ವಜನಿಕರು ಭಯ ಪಡುವ ಅಗತ್ಯವಿಲ್ಲ ಎಂದರು.

ಈ ಕುರಿತು ಮಾಧ್ಯಮಗಳಿಗೆ ಮಾಹಿತಿ ನೀಡಿರುವ ವಿಜಯಪುರ ಎಸ್ಪಿ ಋಷಿಕೇಶ ಭಗವಾನ್, ವಿಜಯಪುರದ ಗೋಲ್‌ಗುಂಬಜ್ ಆವರಣದಲ್ಲಿರುವ ಪಾರಂಪರಿಕ ವಸ್ತು ಸಂಗ್ರಹಾಲಯ ಸೇರಿದಂತೆ ದೇಶದಾದ್ಯಂಥ ಇರುವ ವಿವಿಧ ವಸ್ತುಸಂಗ್ರಹಾಲಯಗಳ ಮೇಲ್ ಐಡಿಗಳಿಗೆ ಬಾಂಬ್ ಬೆದರಿಕೆ ಕುರಿತ ಇ-ಮೇಲ್ ಕಳುಹಿಸಲಾಗಿತ್ತು. ಪರಿಶೀಲನೆ ಬಳಿಕ ಈ ಬಾಂಬ್ ಬೆದರಿಕೆ ನಕಲಿ ಎಂಬುದು ಸ್ಪಷ್ಟವಾಗಿದೆ ಎಂದಿದ್ದಾರೆ.

ಘಟನೆಯ ಕುರಿತು ಎನ್‍ಸಿ ದಾಖಲಿಸಿದ್ದು, ಎಫ್‍ಐಆರ್ ದಾಖಲಿಸುವುದಕ್ಕೆ ನ್ಯಾಯಾಲಯದ ಅನುಮತಿಗೆ ಕಾಯಲಾಗುತ್ತಿದೆ ಎಂದು ವಿವರಿಸಿದ್ದಾರೆ. ಸುದ್ದಿ ತಿಳಿಯುತ್ತಲೇ ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ ಎಂದು ವಿವರಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next