Advertisement

ಕಳಚದಿರಲಿ ಕೂಡಿ ಬಾಳುವ ಕೊಂಡಿ: ರತ್ನಾ

11:43 AM Aug 15, 2017 | Team Udayavani |

ವಾಡಿ: ಸತಿ ಪತಿ ಸಂಬಂಧ ಕತ್ತರಿಸಿಕೊಂಡು ಹೆತ್ತ ಕುಡಿಗಳನ್ನು ವಸತಿ ನಿಲಯಗಳಿಗೆ ಸೇರಿಸುವ ಸಂಸ್ಕೃತಿ ವಿದೇಶಿಗರದ್ದಾದರೆ, ಸ್ನೇಹ, ಪ್ರೀತಿ ಹಾಗೂ ಸಹೋದರತೆಯಿಂದ ಕೂಡಿ ಬಾಳುವ ಸಂಸ್ಕೃತಿ ನಮ್ಮ ಭಾರತದ್ದು. ಇಂತಹ ಪವಿತ್ರವಾದ ಸಂಬಂಧದ ಕೊಂಡಿಗಳು ಯಾವತ್ತಿಗೂ ಕಳಚಬಾರದು ಎಂದು ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಕಲಬುರಗಿ ವಲಯ ನಿರ್ದೇಶಕಿ ಬಿ.ಕೆ.ರತ್ನಾ ಅಕ್ಕನವರು ಹೇಳಿದರು. ಪ್ರಜಾಪಿತ ಬ್ರಹ್ಮಕುಮಾರಿ ಸ್ಥಳೀಯ ಘಟಕ ವತಿಯಿಂದ ಪಟ್ಟಣದ ಶ್ರೀಶೈಲ ಮಲ್ಲಿಕಾರ್ಜುನ ದೇವಸ್ಥಾನ ಆವರಣದಲ್ಲಿ ಏರ್ಪಡಿಸಲಾಗಿದ್ದ ರಕ್ಷಾಬಂಧನ ಕಾರ್ಯಕ್ರಮ ಉದ್ದೇಶಿಸಿ ಅವರು ಮಾತನಾಡಿದರು. ಎರಡು ಎಳೆ ದಾರದಿಂದ ಕೂಡಿದ ರಾಖೀ ಕಟ್ಟುವುದರಲ್ಲಿ ಮಹತ್ವದ ಭಾವ ಅಡಗಿದೆ. ಸಹೋದರತ್ವಕ್ಕೆ ಜಾತಿ ಮತ್ತು ಧರ್ಮ
ಅಡತಡೆಯಾಗಬಾರದು. ರಕ್ಷಾಬಂಧನ ಎಂಬುದು ಕೋಮು ಸೌಹಾರ್ಧತೆ ಕಾಪಾಡುವ ಪವಿತ್ರ ಆಚರಣೆಯಾಗಿದೆ ಎಂದು ಹೇಳಿದರು.
ದೈಹಿಕ ಆರೋಗ್ಯ ಕಾಪಾಡಿಕೊಳ್ಳುವ ನಾವು ಮನಸ್ಸಿನ ಅರೋಗ್ಯ ಕಾಪಾಡಿಕೊಳ್ಳುವಲ್ಲಿ ವಿಫಲರಾಗುತ್ತಿದ್ದೇವೆ. ಮನಸ್ಸು ಬರೀ
ಕೆಟ್ಟ ವಿಚಾರಗಳಿಂದ ತುಂಬಿದೆ. ಪ್ರೀತಿ ಸ್ನೇಹಗಳ ಕೊರತೆಯಿಂದ ಮಾನಸಿಕ ದುಃಖ ಅನುಭವಿಸುತ್ತಿದ್ದೇವೆ. ಸಂಬಂಧಗಳ ಬೆಲೆ
ಅರಿತುಕೊಳ್ಳಲಾಗದೆ ಮನೋವಿಕಾರಕ್ಕೆ ಬಲಿಯಾಗುತ್ತಿದ್ದೇವೆ. ಮನಸ್ಸುಗಳನ್ನು ಒಡೆಯುವ ಶಕ್ತಿಗಳು ಈಗ ಬಲಾಡ್ಯಗೊಳ್ಳುತ್ತಿವೆ. ಶರಣ ವಿಚಾರಗಳನ್ನು ನಾವು ಪುಸ್ತಕದಲ್ಲಿಯೇ ಬಿಟ್ಟು ಬದುಕುತ್ತಿರುವುದರಿಂದ ಚಿಂತನೆ ಆಚರಣೆಗೆ ಬರುತ್ತಿಲ್ಲ. ಸದ್ಭಾವನ ಶಾಂತಿಗಾಗಿ ಮನ ಹುಡುಕಾಟದಲ್ಲಿ ತೊಡಗಬೇಕು ಎಂದು ಹೇಳಿದರು. ಸೇಡಂ ಸಂಚಾಲಕಿ ಬ್ರಹ್ಮಕುಮಾರಿ ಕಲಾ ಅಕ್ಕನವರು ಮಾತನಾಡಿ, ಮರೆತುಹೋದ ಮೌಲ್ಯಗಳನ್ನು ಮರುಕಳಿಸುವ ಶಕ್ತಿ ಹಬ್ಬಗಳಿಗಿದೆ. ಆತ್ಮ ಜಾಗೃತಿ ಸ್ವಯಂ ಅರಿವಿನಿಂದ ಪರಮಾತ್ಮನನ್ನು
ಒಲಿಸಿಕೊಳ್ಳಲು ಸಾಧ್ಯ. ವಾಡಿ ನಗರದಲ್ಲೂ ಕೂಡ ಶಾಖೆ ತೆರೆಯಲಾಗಿದ್ದು, ಆಸಕ್ತ ಪ್ರತಿಯೊಬ್ಬರೂ ರಾಜಯೋಗದಲ್ಲಿ ಪಾಲ್ಗೊಂಡು ಜ್ಞಾನ ಪ್ರಾಪ್ತಿಮಾಡಿಕೊಳ್ಳಬೇಕು ಎಂದು ಕರೆ ನೀಡಿದರು. ಮಾಜಿ ಶಾಸಕ ವಾಲ್ಮೀಕಿ ನಾಯಕ ಕಾರ್ಯಕ್ರಮ ಉದ್ಘಾಟಿಸಿದರು. ಎಸಿಸಿ ಕಂಪನಿ ಮಾನವ ಸಂಪನ್ಮೂಲ ವಿಭಾಗದ ಮುಖ್ಯಸ್ಥ ಜಯಪ್ರಕಾಶ ಪವಾರ ಅಧ್ಯಕ್ಷತೆ ವಹಿಸಿದ್ದರು. ಬ್ರಹ್ಮಕುಮಾರಿ ಲಕ್ಷ್ಮೀ, ಬಿಜೆಪಿ ಅಧ್ಯಕ್ಷ ಬಸವರಾಜ ಪಂಚಾಳ, ಅನಿತಾ ಪವಾರ, ಪುರಸಭೆ ಸದಸ್ಯರಾದ ಶರಣು ನಾಟೀಕಾರ, ಭೀಮಶಾ ಜಿರೋಳ್ಳಿ, ಮುಖಂಡರಾದ ಕಲ್ಯಾಣರಾವ ಶೆಳ್ಳಗಿ, ಸಿದ್ದಣ್ಣ ಕಲಶೆಟ್ಟಿ, ವಿಠ್ಠಲ ಮಾಶಾಳ, ವೀರಣ್ಣ ಯಾರಿ, ಆನಂದ ಇಂಗಳಗಿ, ನಿಂಗಣ್ಣ ದೊಡ್ಡಮನಿ, ಬಸವರಾಜ ಯರಗಲ, ಚಂದ್ರಶೇಖರ ಹಾವೇರಿ ಸೇರಿದಂತೆ ನೂರಾರು ಜನಮಹಿಳೆಯರು ಪಾಲ್ಗೊಂಡಿದ್ದರು. ಬಿ.ಕೆ.ಗಿರಿಜಾ ನಿರೂಪಿಸಿ, ವಂದಿಸಿದರು. ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದವರೆಲ್ಲರಿಗೂ ಬ್ರಹ್ಮಕುಮಾರಿಯರು ರಾಖೀ ಕಟ್ಟಿ ಸಹೋದರತೆ ಭಾವ ಸಾರಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next