Advertisement

ಕಾಪು ಬಿಲ್ಲವರ ಸಹಾಯಕ ಸಂಘದ ನೂತನ ಶ್ರೀ ನಾರಾಯಣ ಗುರುಜ್ಞಾನ ಮಂದಿರಕ್ಕೆ ಶಿಲಾನ್ಯಾಸ

12:10 PM Jul 03, 2022 | Team Udayavani |

ಕಾಪು‌ : ಕಾಪು ಬಿಲ್ಲವರ ಸಹಾಯಕ ಸಂಘದ ನೂತನ ಶ್ರೀ ನಾರಾಯಣ ಗುರು ಜ್ಞಾನ ಮಂದಿರಕ್ಕೆ ಕನ್ಯಾಡಿ ಶ್ರೀ ರಾಮ ಕ್ಷೇತ್ರದ ಮಠಾಧೀಶ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಅವರ ಉಪಸ್ಥಿತಿಯಲ್ಲಿ ಭಾನುವಾರ ಶಿಲಾನ್ಯಾಸ ನೆರವೇರಿಸಲಾಯಿತು.

Advertisement

ಈ ಸಂದರ್ಭ ಆಶೀರ್ವಚನ ನೀಡಿದ ಅವರು, ಒಂದೇ ಜಾತಿ, ಒಂದೇ ಮತ, ಒಂದೇ ದೇವರು ಎಂಬ ಸಂದೇಶವನ್ನು ಜಗತ್ತಿಗೆ ಸಾರಿರುವ ಬ್ರಹ್ಮಶ್ರೀ ನಾರಾಯಣ ಗುರುಗಳ ಅನುಯಾಯಿಗಳಾದ ನಾವು ಅವರು ಭೋದಿಸಿ ತತ್ವ, ಆದರ್ಶ ಮತ್ತು ಸಂದೇಶಗಳನ್ನು ನಮ್ಮ‌ ಜೀವನದಲ್ಲಿ ಅಳವಡಿಸಿಕೊಳ್ಳುವುದು ಅತೀ ಮುಖ್ಯವಾಗಿದೆ. ಬಿಲ್ಲವ ಸಮಾಜ ಸೇವಾ ಸಂಘಟನೆಗಳು‌ ಅದಕ್ಕಾಗಿ ಶ್ರಮಿಸಬೇಕಿದೆ ಎಂದರು.

ಮಕ್ಕಳಿಗೆ ಆಸ್ತಿ ಮಾಡಿಡುವುದು ಬೇಡ, ಅವರನ್ನೇ ಆಸ್ತಿಗಳನ್ನಾಗಿಸೋಣ

ಯಾರಿಗೂ ಅಧಿಕಾರ ಶಾಶ್ವತವಲ್ಲ. ಅಧಿಕಾರದಲ್ಲಿ ಇರುವಾಗ ಮಾಡಿದ ಸೇವೆ ಮುಖ್ಯವಾಗುವಂತದ್ದು‌. ಮಕ್ಕಳಿಗೆ ಆಸ್ತಿ ಸಂಪಾದಿಸುವ ಬದಲಿಗೆ, ಮಕ್ಕಳನ್ನೇ  ಆಸ್ತಿಗಳನ್ನಾಗಿ ಪರಿವರ್ತಿಸಿ. ವಿದ್ಯೆಯೊಂದಿಗೆ ಸಂಸ್ಕಾರ ನೀಡುವ ಮೂಲಕ ದೇಶದ ಪ್ರಬುದ್ಧ ನಾಗರಿಕರನ್ನಾಗಿ ರೂಪಿಸೋಣ. ಅದಕ್ಕಾಗಿ ಮಠ‌ ಮಂದಿರಗಳೂ ಕೈ ಜೋಡಿಸುವ ಅಗತ್ಯವಿದೆ ಎಂದರು.

ಕಾಪು ಬಿಲ್ಲವರ ಸಹಾಯಕ ಸಂಘದ ಅಧ್ಯಕ್ಷ ವಿಕ್ರಂ‌ ಕಾಪು ಅಧ್ಯಕ್ಷತೆ ವಹಿಸಿದ್ದರು. ಕಾಪು ಶಾಸಕ ಲಾಲಾಜಿ ಆರ್. ಮೆಂಡನ್, ಮಾಜಿ ಸಚಿವ ವಿನಯ ಕುಮಾರ್ ಸೊರಕೆ, ರಾಷ್ಟ್ರೀಯ ಬಿಲ್ಲವರ ಮಹಾಮಂಡಲದ ಅಧ್ಯಕ್ಷ ರಾಜಶೇಖರ ಕೋಟ್ಯಾನ್, ಮುಂಬಯಿ ಬಿಲ್ಲವರ ಯೂನಿಯನ್‌ ಅಧ್ಯಕ್ಷ ಹರೀಶ್ ಜಿ.  ಅಮೀನ್, ಎಚ್. ಎಸ್. ಸಾಯಿರಾಮ್, ಕಟಪಾಡಿ ಶ್ರೀ ವಿಶ್ವನಾಥ ಕ್ಷೇತ್ರದ ಕ್ಷೇತ್ರಾಡಳಿತ ಮಂಡಳಿ ಅಧ್ಯಕ್ಷ ಬಿ.ಎನ್. ಶಂಕರ ಪೂಜಾರಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.

Advertisement

ಜ್ಯೋತಿಷ್ಯ ವಿದ್ವಾನ್ ಗಳಾದ ಮಹೇಶ್ ಶಾಂತಿ ಹೆಜಮಾಡಿ, ಚರಣ್ ಶಾಂತಿ ಕಟಪಾಡಿ ಅವರ ನೇತೃತ್ವದಲ್ಲಿ ಶಿಲಾನ್ಯಾಸ ಪೂರ್ವಕ ಧಾರ್ಮಿಕ‌ ವಿಧಿ ವಿಧಾನಗಳು ನೆರವೇರಿದವು.

ಜಾನಪದ ವಿದ್ವಾಂಸ ಬನ್ನಂಜೆ ಬಾಬು ಅಮೀನ್, ಮುಂಬಯಿ ಬಿಲ್ಲವರ ಅಸೋಸಿಯೇಷನ್ ಪ್ರಧಾನ ಕಾರ್ಯದರ್ಶಿ ಹರೀಶ್ ಸಾಲ್ಯಾನ್, ಕಾಪು ಬಿಲ್ಲವರ ಸಹಾಯಕ ಸಂಘದ ಗೌರವಾಧ್ಯಕ್ಷ ಪ್ರಭಾಕರ ಪೂಜಾರಿ, ಗೌ. ಪ್ರ. ಕಾರ್ಯದರ್ಶಿ ವಿಠಲ ಸಾಲ್ಯಾನ್, ಮಾಜಿ‌ ಅಧ್ಯಕ್ಷರಾದ ಶೇಖರ್ ಸಾಲ್ಯಾನ್, ಮಾಧವ ಆರ್. ಪಾಲನ್, ಉಪಾಧ್ಯಕ್ಷರಾದ ಸಖೇಂದ್ರ ಸುವರ್ಣ, ಮಧು ಪಾಲನ್, ಐತಪ್ಪ ಕೋಟ್ಯಾನ್, ಸೇವಾದಳದ ದಳಪತಿ ಪ್ರವೀಣ್ ಕುಮಾರ್, ಗುರುಶ್ರೀ ಮಹಿಳಾ ಬಳಗದ ಸಂಚಾಲಕಿ ಆಶಾ ಶಂಕರ್,ಉಡುಪಿ ಜಿ.ಪಂ. ಮಾಜಿ ಸದಸ್ಯರಾದ ಶಿಲ್ಪಾ‌ ಜಿ. ಸುವರ್ಣ, ಗೀತಾಂಜಲಿ ಎಂ. ಸುವರ್ಣ ಮೊದಲಾದವರು ಉಪಸ್ಥಿತರಿದ್ದರು. ‌

ಸಂಘದ ಆಡಳಿತ ಮಂಡಳಿ ಸದಸ್ಯ ಅನಿಲ್ ಕುಮಾರ್ ಸ್ವಾಗತಿಸಿದರು. ಗೌರವ ಪ್ರಧಾನ ಕಾರ್ಯದರ್ಶಿ ವಿಠಲ ಸಾಲ್ಯಾನ್ ವಂದಿಸಿದರು. ಕಮಿಟಿ ಸದಸ್ಯರಾದ ಶಿವಣ್ಣ ಅಂಚನ್, ಸುಧಾಕರ‌ ಸಾಲ್ಯಾನ್ ಕಾರ್ಯಕ್ರಮ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next