Advertisement

ನಿಮ್ಮ ಮತ ಅಸಿಂಧುವಾಗಲು ಅವಕಾಶ ಕೊಡಬೇಡಿ

03:12 PM Dec 06, 2021 | Team Udayavani |

ಭಾಲ್ಕಿ: ಡಿ.10ರಂದು ನಡೆಯುವ ವಿಧಾನ ಪರಿಷತ್‌ಗೆ ಸ್ಥಳೀಯ ಸಂಸ್ಥೆಗಳ ಕ್ಷೇತ್ರದಿಂದ ನಡೆಯುವ ಚುನಾವಣೆಯಲ್ಲಿ ನಿಮ್ಮ ಮತ ಅಸಿಂಧುವಾಗದಂತೆ ಎಚ್ಚರಿಕೆಯಿಂದ ಮತ ಚಲಾಯಿಸಬೇಕು ಎಂದು ಪುರಸಭೆ ಮುಖ್ಯಾ ಧಿಕಾರಿ ಡಾ| ಶಿವರಾಜ ರಾಠೊಡ ಅವರು ಪುರಸಭೆ ಸದಸ್ಯರಿಗೆ ಮತ ಚಲಾವಣೆ ಕುರಿತು ತರಬೇತಿ ನೀಡಿದರು.

Advertisement

ಪಟ್ಟಣದ ಪುರಸಭೆ ಸಭಾಂಗಣದಲ್ಲಿ ವಿಧಾನ ಪರಿಷತ್‌ಗೆ ಸ್ಥಳೀಯ ಸಂಸ್ಥೆಗಳ ಕ್ಷೇತ್ರದಿಂದ ನಡೆಯುವ ಚುನಾವಣೆಯಲ್ಲಿ ಸಿಂಧು ಮತ್ತು ಅಸಿಂಧು ಮತದಾನದ ಮಾದರಿ ಮತಪತ್ರಗಳನ್ನು ಪುರಸಭೆ ಸದಸ್ಯರಿಗೆ ಪ್ರತ್ಯಕ್ಷವಾಗಿ ನೀಡಿ ಮತದಾನ ಮಾಡುವ ವಿಧಾನ ಕುರಿತು ಮಾಹಿತಿ ನೀಡಿದರು.

ನಿಮ್ಮ ಮೊದಲನೇ ಪ್ರಾಶಸ್ತ್ಯವಾಗಿ ನೀವು ಯಾವ ಅಭ್ಯರ್ಥಿಯನ್ನು ಆಯ್ಕೆ ಮಾಡಿಕೊಳ್ಳುವಿರೋ ಆ ಅಭ್ಯರ್ಥಿಯ ಹೆಸರಿನ ಮುಂದೆ ಅಂಕಿಯಲ್ಲಿ 1ನ್ನು ಮಾತ್ರ ಗುರುತು ಮಾಡಬೇಕು. ಅಂಕಿಗಳಲ್ಲಿ ಪ್ರಾಶಸ್ತ್ಯ ನೀಡಬೇಕೇ ಹೊರತು ಅಕ್ಷರಗಳಲ್ಲಿ ಬರೆಯಬಾರದು. ಸ್ಪರ್ಧಿಸಿರುವ ಅಭ್ಯರ್ಥಿಗಳ ಸಂಖ್ಯೆಗನುಗುಣವಾಗಿ ಪ್ರಾಶಸ್ತ್ಯಗಳನ್ನು ಗುರುತು ಹಾಕಬಹುದು. ಮತಪತ್ರದ ಮೇಲೆ ನಿಮ್ಮ ಹೆಸರು ಅಥವಾ ಯಾವುದೇ ಪದಗಳನ್ನು ಬರೆಯಬೇಡಿ. ಒಬ್ಬನೇ ಅಭ್ಯರ್ಥಿ ಹೆಸರಿನ ಮುಂದೆ 1,2, 3 ಅಂಕಿಗಳನ್ನು ಗುರುತು ಹಾಕಿದರೆ ನಿಮ್ಮ ಮತ ಅಸಿಂಧುಗೊಳ್ಳುತ್ತದೆ. ಚುನಾವಣಾಧಿಕಾರಿ ನೀಡಿದ ನೇರಳೆ ಬಣ್ಣದ ಸ್ಕೇಚ್‌ ಪೆನ್‌ ಮಾತ್ರ ಬಳಸಿ ಮತ ಚಲಾಯಿಸಬೇಕು ಎಂದರು.

ಸಭೆಯಲ್ಲಿ ಪುರಸಭೆ ಅಧ್ಯಕ್ಷ ಬಸವರಾಜ ವಂಕೆ, ಉಪಾಧ್ಯಕ್ಷೆ ರಾಜೇಶ್ವರಿ ರಾಜಕುಮಾರ ಮೋರೆ ಮತ್ತು ಸದಸ್ಯರಾದ ಓಂಕಾರ ಮೋರೆ, ಮಹಬೂಬಸಾಬ ಇಸ್ಮಾಯಿಲಸಾಬ್‌, ಅನಿತಾ ಧನರಾಜ, ಶಮೀನಾಬೆಗಂ ಫಯೋದಿನ್‌, ಮಾಣಿಕಪ್ಪ ರೇಶ್ಮೆ, ಭಾಗ್ಯಶ್ರೀ ಸಂತೋಷ, ಪ್ರವೀಣ ಶ್ರೀಮಂತ, ಲಕ್ಷ್ಮೀ ಶಿವರಾಜ, ಸುಮನಬಾಯಿ ಬಾಬುರಾವ ಜಲ್ಪೆ, ಬಾಲಾಜಿ ತಗರಖೇಡೆ, ನಾಗನಾಥ ಶಿಂದೆ, ಶಂಭುಲಿಂಗ ಸ್ವಾಮಿ, ವಿಜಯಕುಮಾರ ರಾಜಭವನ, ಪಾಂಡುರಂಗ ಕನಸೆ, ಶಶಿಕಲಾ ಅಶೋಕ, ಅಂಬಿಕಾ ಧನರಾಜ ಕುಂದೆ, ಅಶೋಕ ಅರ್ಜುನರಾವ, ಶ್ವೇತಾ ವಿಜಯಕುಮಾರ, ಲಲಿತಾಬಾಯಿ ಬಾಬುರಾವ, ಶ್ವನಾಥರಾವ ಮೋರೆ, ವಿನೋದಕುಮಾರ ವಿಶ್ವನಾಥ, ಬಿಬಿಶೇನ ಬಿರಾದಾರ, ಕಾವೇರಿ ಶಿವಕಾಂತ ಮಾಶಟ್ಟೆ ಹಾಗೂ ವ್ಯವಸ್ಥಾಪಕಿ ಆಶಾ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next