ನವ ದೆಹಲಿ : ಕೇಂದ್ರದ ಮೂರು ಹೊಸ ಕೃಷಿ ಕಾನೂನುಗಳ ವಿರುದ್ಧ ರೈತರು ನಡೆಸುತ್ತಿರುವ ಪ್ರತಿಭಟನೆ ಜಾಗತಿಕ ಮಟ್ಟದಲ್ಲಿ ಚರ್ಚೆಯಾಗುತ್ತಿದೆ.
ಓದಿ :ಏರೋ ಇಂಡಿಯಾ 2021: ಸೂರ್ಯಕಿರಣ್, ಸಾರಂಗ್ ಸಾಹಸಿಗರ ಜುಗಲ್‌ಬಂದಿ
ರೈತರ ಪ್ರತಿಭಟನೆಯನ್ನು ರಿಹಾನಾ ಹಾಗೂ ಗ್ರೇಟಾ ಥನ್ಬರ್ಗ್ ಸೇರಿ ಹಲವು ಅಂತಾರಾಷ್ಟ್ರೀಯ ಕಲಾವಿದರು ಹಾಗೂ ಸಾಮಾಜಿಕ ಕಾರ್ಯಕರ್ತರು ಬೆಂಬಲಿಸಿರುವುದನ್ನು ಭಾರತೀಯ ಕಿಸಾನ್ ಯೂನಿಯನ್ ನ (ಬಿಕೆಯು) ಮುಖಂಡ ರಾಕೇಶ್ ಟಿಕಾಯತ್ ಸ್ವಾಗತಿಸಿದ್ದಾರೆ. ಆದರೇ, ಅವರು ಯಾರೂ ಕೂಡ ನಮಗೆ ತಿಳಿದಿಲ್ಲ ಎಂದು ಟಿಕಾಯತ್ ಹೇಳಿದ್ದಾರೆ.
ಗಾಜ್ಹಿಪುರದಲ್ಲಿ ಮಾಧ್ಯಮಗಾರರೊಂದಿಗೆ ಮಾತಾಡುತ್ತಾ ಹೀಗೆ ಪ್ರತಿಕ್ರಿಯಿಸಿದ್ದಾರೆ ಎಂದು ವರದಿಯಾಗಿದೆ.ಅಷ್ಟಲ್ಲದೇ, ಒಂದು ವೇಳೆ ವಿದೇಶಿ ಕಲಾವಿದರು ಅಥವಾ ಸಾಮಾಜಿಕ ಹೋರಾಟಗಾರರು ನಮ್ಮ ಹೋರಾಟಕ್ಕೆ ಬೆಂಬಲ ಸೂಚಿಸಿದರೇ ಏನು ತಪ್ಪಿದೆ..? ಅವರು ನಮಗೆ ಏನನ್ನೂ ಕೊಟ್ಟಿಲ್ಲ, ನಾವೂ ಕೂಡ ಅವರಿಂದ ಏನೂ ತೆಗೆದುಕೊಳ್ಳುತ್ತಿಲ್ಲ ಎಂದು ಅವರು ಮಾಧ್ಯಮದವರು ಕೇಳಿದ ಪ್ರಶ್ನೆಗೆ ಕಿಡಿ ಕಾರಿದ್ದಾರೆ.
ಓದಿ :ಫಸ್ಟ್ ಹಾಫ್ ಒಂದ್ ಲೆಕ್ಕ:ಸೆಕೆಂಡ್‌ಹಾಫ್ ಇನ್ನೊಂದ್ ಲೆಕ್ಕ! ವರ್ಷಪೂರ್ತಿ ಫುಲ್ ಮೀಲ್ಸ್