Advertisement

Australia series; ಕೊಹ್ಲಿ ಅವರನ್ನು ಈಗಿನ ಫಾರ್ಮ್ ನಲ್ಲಿ ನಿರ್ಣಯಿಸಬೇಡಿ: ಪಾಂಟಿಂಗ್

07:08 PM Nov 09, 2024 | Team Udayavani |

ದುಬೈ: ಭಾರತದ ಬ್ಯಾಟಿಂಗ್ ದಿಗ್ಗಜ ವಿರಾಟ್ ಕೊಹ್ಲಿ ಅವರನ್ನು ಪ್ರಸ್ತುತ ಫಾರ್ಮ್‌ನ ಆಧಾರದ ಮೇಲೆ ನಿರ್ಣಯಿಸಬಾರದು ಎಂದು ಆಸ್ಟ್ರೇಲಿಯದ ದಿಗ್ಗಜ ಆಟಗಾರ, ಮಾಜಿ ನಾಯಕ ರಿಕಿ ಪಾಂಟಿಂಗ್ ಅಭಿಪ್ರಾಯಪಟ್ಟಿದ್ದಾರೆ.

Advertisement

ಮುಂಬರುವ ಐದು ಟೆಸ್ಟ್‌ಗಳ ಬಾರ್ಡರ್-ಗವಾಸ್ಕರ್ ಸರಣಿಯಲ್ಲಿ ಚಾಂಪಿಯನ್ ಕ್ರಿಕೆಟಿಗ ಪ್ರಬಲ ಹೋರಾಟ ನೀಡಬಹುದು ಎಂದು ಹೇಳಿದರು.

ಪ್ಯಾಟ್ ಕಮ್ಮಿನ್ಸ್ ನಾಯಕತ್ವದ ಆಸ್ಟ್ರೇಲಿಯ ವಿರುದ್ಧದ ಬಹುನಿರೀಕ್ಷಿತ ಸರಣಿಯು ನವೆಂಬರ್ 22 ರಂದು ಪರ್ತ್‌ನಲ್ಲಿ ಆರಂಭವಾಗುತ್ತದೆ ಅದಕ್ಕೂ ಮುನ್ನ ಆಸೀಸ್ ದಿಗ್ಗಜ ಈ ಅಭಿಪ್ರಾಯ ಹೊರ ಹಾಕಿದ್ದಾರೆ.

ತವರಿನಲ್ಲೇ ನ್ಯೂಜಿಲ್ಯಾಂಡ್ ವಿರುದ್ಧ 3 ಪಂದ್ಯಗಳ ಸರಣಿಯಲ್ಲಿ ಭಾರತ ವೈಟ್ ವಾಶ್ ಮುಖಭಂಗ ಅನುಭವಿಸಿದ್ದು, ಕೊಹ್ಲಿ ಅವರು ಆರು ಇನ್ನಿಂಗ್ಸ್‌ಗಳಲ್ಲಿ ಕೇವಲ 93 ರನ್ ಗಳಿಸಿದ ಕುರಿತು ಪಾಂಟಿಂಗ್ ಪ್ರತಿಕ್ರಿಯೆ ನೀಡಿ,’ಕೊಹ್ಲಿ ಅವರ ಹೋರಾಟದ ಸಾಮರ್ಥ್ಯದಲ್ಲಿ ನನಗೆ ಸಂಪೂರ್ಣ ನಂಬಿಕೆ ಇದೆ’ ಎಂದಿದ್ದಾರೆ.

“ವಾಸ್ತವವಾಗಿ, ಆಸ್ಟ್ರೇಲಿಯ ವಿರುದ್ಧ ಆಡುವುದನ್ನು ಕೊಹ್ಲಿ ಇಷ್ಟಪಡುತ್ತಾರೆ. ಅವರ ದಾಖಲೆ ಆಸ್ಟ್ರೇಲಿಯದಲ್ಲಿ ತುಂಬಾ ಉತ್ತಮವಾಗಿದೆ. ಬಾರ್ಡರ್-ಗವಾಸ್ಕರ್ ಸರಣಿಯಲ್ಲಿ ಕೊಹ್ಲಿ ಅವರ ಟೆಸ್ಟ್ ವೃತ್ತಿಜೀವನದ ಪುನರುಜ್ಜೀವನವನ್ನು ನೋಡಬಹುದು” ಎಂದು ಪಾಂಟಿಂಗ್ ಹೇಳಿದ್ದಾರೆ.

Advertisement

“ಕೊಹ್ಲಿ ಅವರು ಅಭಿಪ್ರಾಯ ಬದಲಾಯಿಸಲು ಈ ಸರಣಿ ಸಾಧ್ಯವಾಗಿಸುತ್ತದೆ. ಹಾಗಾಗಿ, ಮೊದಲ ಪಂದ್ಯದಲ್ಲಿ ವಿರಾಟ್ ರನ್ ಗಳಿಸುವುದನ್ನು ನೋಡಿ ನನಗೆ ಆಶ್ಚರ್ಯವಾಗುವುದಿಲ್ಲ” ಎಂದು ಹೇಳಿದ್ದಾರೆ.

“ನಾನು ವಿರಾಟ್ ಕುರಿತು ಒಂದು ಅಂಕಿಅಂಶವನ್ನು ನೋಡಿದೆ. ಕಳೆದ ಐದು ವರ್ಷಗಳಲ್ಲಿ ಅವರು ಕೇವಲ ಎರಡು-ಮೂರು ಟೆಸ್ಟ್ ಶತಕಗಳನ್ನು ಗಳಿಸಿದ್ದಾರೆ. ಐದು ವರ್ಷಗಳಲ್ಲಿ ಕೇವಲ ಎರಡು ಟೆಸ್ಟ್ ಪಂದ್ಯಗಳಲ್ಲಿ ಶತಕಗಳನ್ನು ಗಳಿಸಿ ಅಗ್ರ ಕ್ರಮಾಂಕದ ಬ್ಯಾಟರ್ ಆಗಿ ಬೇರೆ ಯಾರೂ ಬಹುಶಃ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಉಳಿದುಕೊಳ್ಳಲು ಸಾಧ್ಯವಾಗುತ್ತಿರಲಿಲ್ಲ” ಎಂದು ಹೇಳಿದ್ದಾರೆ.

“ವೈಟ್‌ವಾಶ್ ಆಗಿದ್ದು ನಿಜವಾಗಿಯೂ ಉತ್ತಮ ಗುಣಮಟ್ಟದ ಸ್ಪಿನ್ ಬೌಲಿಂಗ್ ವಿರುದ್ಧ ಭಾರತದ ದುರ್ಬಲತೆಯನ್ನು ಎತ್ತಿ ತೋರಿಸುತ್ತಿದೆ. ಆಧುನಿಕ ಭಾರತೀಯ ಬ್ಯಾಟರ್ ಗಳ ಸ್ಪಿನ್ ಆಡುವ ಕೌಶಲ್ಯ ಬಹುಶಃ  ಮೊದಲಿನಂತಿಲ್ಲ ಎಂದು ತೋರುತ್ತದೆ” ಎಂದು ಪಾಂಟಿಂಗ್ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next