Advertisement

ಮನೆಯಿಂದ ಹೊರಬರಬೇಡಿ:ನಾಗರಾಳ

03:02 PM Apr 16, 2020 | Suhan S |

ಹುನಗುಂದ: ಕೋವಿಡ್ 19 ಹರಡದಂತೆ ಮುಂಜಾಗ್ರತ ಕ್ರಮವಾಗಿ ಸೇವೆ ಸಲ್ಲಿಸುತ್ತಿರುವ ನೌಕರ ಸಿಬ್ಬಂದಿಹಿತದೃಷ್ಟಿಯಿಂದ ಆರೋಗ್ಯ ತಪಾಸಣೆ ಮಾಡಲಾಗುತ್ತಿದೆ ಎಂದು ತಹಶೀಲ್ದಾರ್‌ ಬಸವರಾಜ ನಾಗರಾಳ ಹೇಳಿದರು.

Advertisement

ಬುಧವಾರ ಪಟ್ಟಣದ ಪೊಲೀಸ್‌ ಠಾಣೆಯ ಎದುರು ನಡೆದ ಆರೋಗ್ಯ ತಪಾಸಣಾ ಶಿಬಿರದಲ್ಲಿ ಆರೋಗ್ಯ ತಪಾಸಣೆ ಮಾಡಿಸಿಕೊಂಡು ಮಾತನಾಡಿದ ಅವರು,ಪ್ರತಿ ನೌಕರರಿಗೂ ಅವರದೇ ಕುಟುಂಬದ ಜವಾಬ್ದಾರಿ  ಇರುವುದರಿಂದ ಆರೋಗ್ಯ ತಪಾಸಣೆ ಮುಖ್ಯವಾದದ್ದು ಎಂದರು.

ಸಿಪಿಐ ಅಯ್ಯನಗೌಡ ಪಾಟೀಲ ಮಾತನಾಡಿ, ಕೋವಿಡ್ 19 ರೋಗ ಹರಡದಂತೆ ಮುಂಜಾಗ್ರತಾ ಕ್ರಮಕ್ಕೆ ದಿನಸಿ ಅಂಗಡಿ ವ್ಯಾಪಾರಸ್ಥರು ಹಾಗೂ ತರಕಾರಿ ವ್ಯಾಪಾರಸ್ಥರ ಜತೆಗೆ ಅವಳಿ ತಾಲೂಕುಗಳ ಜನರು ಸಹಕಾರ ನೀಡಿದ್ದಾರೆ. ಲಾಕ್‌ಡೌನ್‌ ಮುಗಿಯುವರೆಗೂ ಮನೆಯಿಂದ ಹೊರಬರದೆ ರೋಗ ಹರಡದಂತೆಮುನ್ನೆಚ್ಚರಿಕೆ ವಹಿಸಬೇಕು ಎಂದು ವಿನಂತಿಸಿಕೊಂಡರು.

ವೈದ್ಯಾಧಿಕಾರಿ ಡಾ| ಪ್ರಶಾಂತ ತುಂಬಗಿ, ಡಾ| ಮಹಾಂತೇಶ ಕಡಪಟ್ಟಿ, ಡಾ| ಅನಿಲ ಬೈರಗೊಂಡ ತಪಾಸಣೆ ನಡೆಸಿದರು. ಪೊಲಿಸ್‌ ಇಲಾಖೆಯ ಸಿಪಿಐ ಅಯ್ಯನಗೌಡ ಪಾಟೀಲ ಮತ್ತು ಪಿಎಸ್‌ಐ ಪುಂಡಲೀಕ ಪಟಾತರ ಸೇರಿದಂತೆ 40 ಸಿಬ್ಬಂದಿ, ತಹಶೀಲ್ದಾರ್‌ ಬಸವರಾಜ ನಾಗರಾಳ ಸೇರಿದಂತೆ ಕಂದಾಯ ಇಲಾಖೆಯ 100 ಸಿಬ್ಬಂದಿ, ಮುಖ್ಯಾ ಧಿಕಾರಿ ಈರಣ್ಣ ಗುಡದಾರಿ ಸೇರಿದಂತೆ ಪುರಸಭೆಯ 50 ಜನ ಸಿಬ್ಬಂದಿ ಹಾಗೂ ಪತ್ರಕರ್ತರ ಆರೋಗ್ಯ ತಪಾಸಣೆ ನಡೆಯಿತು.

Advertisement

Udayavani is now on Telegram. Click here to join our channel and stay updated with the latest news.

Next