ಬೆಂಗಳೂರು: ಹಾಸನದ ಟಿಕೆಟ್ ವಿಚಾರದಲ್ಲಿ ಪರಿಷತ್ ಸದಸ್ಯ ಸೂರಜ್ ರೇವಣ್ಣ ನೀಡಿರುವ ಹೇಳಿಕೆ ದೊಡ್ಡ ಸಮಸ್ಯೆಯೇನೋ ಅಲ್ಲ. ಅದನ್ನೆಲ್ಲ ಸರಿಪಡಿಸಿಕೊಳ್ಳುವ ಶಕ್ತಿ ನನಗೆ ಇದೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.
ಹಾಸನ ಟಿಕೆಟ್ ವಿಚಾರದಲ್ಲಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಹೆಸರನ್ನು ಎಳೆದು ತರುವುದು ಬೇಡ. ಕಲಿಯುಗದ ರಾಜಕಾರಣದಲ್ಲಿ ಶಕುನಿಗಳು ನೂರಾರು ಇದ್ದಾರೆ. ನಮ್ಮ ಕುಟುಂಬದ ಮಕ್ಕಳನ್ನು ದಾರಿ ತಪ್ಪಿಸಿ ಮಾತನಾಡಿಸುತ್ತಾರೆ. ನಮ್ಮ ಮುಂದೆ ಬೆಳೆದ ಮಕ್ಕಳನ್ನು ನಾವು ಸರಿಪಡಿಸಿಕೊಳ್ಳುತ್ತೇವೆ ಎಂದು ಹೇಳಿದರು.
ಜನತೆಯ ಸಮಸ್ಯೆಗಳಿಗೆ ಸ್ಪಂದಿಸಲು ಯಾವ ರೀತಿಯಲ್ಲಿ ಸ್ಪಷ್ಟವಾದ ಬಹುಮತ ತರಬೇಕು ಎಂಬುದಕ್ಕೆ ನನ್ನ ಮೊದಲ ಆದ್ಯತೆ. ಅದು ಬಿಟ್ಟು ಸಣ್ಣ ಪುಟ್ಟ ವಿಷಯದಲ್ಲಿ ಗೊಂದಲ ಬೇಡ. ದೇವೇಗೌಡರು ನಿರ್ಣಯ ಮಾಡುವ ಪರಿಸ್ಥಿತಿಯಲ್ಲಿ ಇದ್ದಾರಾ ಎಂದು ಪ್ರಶ್ನಿಸಿದ ಅವರು, 120 ಸೀಟು ಗೆದ್ದು ಅವರಿಗೆ ಕಾಣಿಕೆ ಕೊಡಲು ಹೊರಟಿರುವನು ನಾನು ಎಂದು ಹೇಳಿದ್ದಾರೆ.
ಭವಾನಿ ಅವರೇ ನಿಲ್ಲಲಿ: ಸೂರಜ್
ಹಾಸನದಲ್ಲಿ ಭವಾನಿ ರೇವಣ್ಣ ಸ್ಪರ್ಧಿಸಿದರೆ ಮಾತ್ರ ಗೆಲುವು ಸಾಧ್ಯ. ಸಾಮಾನ್ಯ ಕಾರ್ಯಕರ್ತನನ್ನು ನಿಲ್ಲಿಸಿ ಗೆಲ್ಲಿಸಲಾಗದು. ಇಲ್ಲಿನ ನಾಡಿ ಮಿಡಿತ ಅರಿತಿರುವವರು ರೇವಣ್ಣ ಮಾತ್ರ. ದೇವೇಗೌಡರ ತೀರ್ಮಾನ ಅಂತಿಮ ಎಂದು ಸೂರಜ್ ರೇವಣ್ಣ ಹೇಳಿದ್ದರು. ಇದು ರಾಜಕೀಯ ವಲಯದಲ್ಲಿ ನಾನಾ ವ್ಯಾಖ್ಯಾನಗಳಿಗೆ ಎಡೆ ಮಾಡಿಕೊಟ್ಟಿತ್ತು.
Related Articles