Advertisement

ವಿಶೇಷಚೇತನರ ವಿಷಯದಲ್ಲಿ ಅಸಡ್ಡೆ ತೋರಬೇಡಿ: ಗಂಗಾ

01:09 PM Feb 04, 2023 | Team Udayavani |

ಹುಬ್ಬಳ್ಳಿ: ವಿಕಲಚೇತನರು ಯೋಜನೆಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕೆಂದು ಅಣ್ಣಿಗೇರಿ ಪುರಸಭೆ ಅಧ್ಯಕ್ಷೆ ಗಂಗಾ ಆರ್‌. ಕರೆಟ್ಟನವರ ಹೇಳಿದರು.

Advertisement

ಅಣ್ಣಿಗೇರಿಯ ಶ್ರೀ ಪುರದಿರೇಶ್ವರ ದೇವಸ್ಥಾನ ಆವರಣದಲ್ಲಿ ಪುರಸಭೆ ಕಾರ್ಯಾಲಯ, ಆರೂಢ ಸಂಸ್ಥೆ ಧಾರವಾಡ, ಎಪಿಡಿ ಬೆಂಗಳೂರು ಹಾಗೂ ವಿವಿಧ ಇಲಾಖೆಗಳ ಸಹಕಾರದೊಂದಿಗೆ ಹಮ್ಮಿಕೊಂಡಿದ್ದ ವಿಕಲಚೇತನರಿಗೆ ಸಾಮಾನ್ಯ ಆರೋಗ್ಯ ತಪಾಸಣೆ ಶಿಬಿರ, ಅಭಿವೃದ್ಧಿ ಕುಂಠಿತ ಮಕ್ಕಳ ಗುರುತಿಸುವಿಕೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಅಭಿವೃದ್ಧಿ ಕುಂಠಿತ ಮಕ್ಕಳು ಹಾಗೂ ವಿಶೇಷಚೇತನರ ಬಗ್ಗೆ ಅಸಡ್ಡೆ ತೋರಬೇಡಿ. ಅವರಲ್ಲೂ ಸಹಿತ ಶಿಕ್ಷಣ, ಆಟ-ಪಾಠ ಸೇರಿದಂತೆ ಎಲ್ಲಾ ರಂಗಗಳಲ್ಲಿ ಸಾಧಿಸುವ ಛಲ- ಶಕ್ತಿ ಇರುತ್ತದೆ. ಅರ್ಹ ಫಲಾನುಭವಿಗಳಿಗೆ ಹಂತ ಹಂತವಾಗಿ ಆದ್ಯತೆ ಮೇರೆಗೆ ಪುರಸಭೆಯಿಂದ ಸೌಲಭ್ಯ ಒದಗಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸುತ್ತಿರುವುದಾಗಿ ಭರವಸೆ ನೀಡಿದರು.

ಅಣ್ಣಿಗೇರಿ ಪುರಸಭೆ ಉಪಾಧ್ಯಕ್ಷೆ ಜಯಲಕ್ಷ್ಮಿಜಕರಡ್ಡಿ ಮಾತನಾಡಿ, ವಿಕಲಚೇತನ ಮಕ್ಕಳ ಪಾಲನೆ-ಪೋಷಣೆ, ನಿರ್ವಹಣೆ ಕಾರ್ಯ ಅತ್ಯಂತ ಕಠಿಣವಾದದ್ದು. ಇಂತಹ ಸವಾಲಿನ ಕೆಲಸವನ್ನು ನಿಭಾಯಿಸುವುದರ ಜತೆಗೆ ತಾಯಂದಿರು ತಮ್ಮ ಪೂರ್ಣ ಸಮಯ ಇಂತಹ ಮಕ್ಕಳಿಗಾಗಿ ಮೀಸಲಿಟ್ಟಿರುತ್ತಾರೆ. ಹೀಗಾಗಿ ವಿಕಲಚೇತನ ಮಕ್ಕಳ ಸೇವೆ ಮಾಡುವುದು ನಿಜವಾದ ದೇವರ ಕಾರ್ಯ ಎಂದರು.

ಪುರಸಭೆ ಮುಖ್ಯಾಧಿಕಾರಿ ಮಹಾಂತೇಶ ನಿಡವಣಿ ಪ್ರಾಸ್ತಾವಿಕ ಮಾತನಾಡಿ, ಎಸ್‌ಎಫ್‌ಸಿ ಯೋಜನೆಯಡಿ ಸುಮಾರು 42.50 ಲಕ್ಷಕ್ಕೂ ಹೆಚ್ಚು ಹಣ ಮೀಸಲಿಟ್ಟು ಸಮುದಾಯದ ಶಾಸಕರ ಮಾದರಿ ಶಾಲೆ, ಪ್ರಥಮ ದರ್ಜೆ ಕಾಲೇಜಿನಲ್ಲಿ ಶೌಚಾಲಯ ನಿರ್ಮಾಣ ಸೇರಿದಂತೆ ವಿವಿಧ ಯೋಜನಾ ಚಟುವಟಿಕೆಗಳಿಗೂ ಸಿದ್ಧತೆ ನಡೆಸಲಾಗಿದೆ ಎಂದರು. ಸರ್ಕಾರಿ ಆರೋಗ್ಯ ಕೇಂದ್ರದ ಹಿರಿಯ ವೈದ್ಯಾಧಿಕಾರಿ ಡಾ| ಕೃಷ್ಣ ಜಗ್ಗಲ, ಆರೂಢ ಸಂಸ್ಥೆಯ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ನಾಗರಾಜ ಹೂಗಾರ, ನಿರ್ದೇಶಕಿ ಗೀತಾ ಮಗರ, ಪುರಸಭೆ ಸದಸ್ಯೆ ಶೋಭಾ ಗೊಲ್ಲರ, ವಿಕಲಚೇತನರ ಸಂಘಟನೆ ಮುಖ್ಯಸ್ಥೆ ಫಾತಿಮಾ ನವಲಗುಂದ, ಮಂಗಳಾ ಉಳ್ಳಾಗಡ್ಡಿ, ಲಲಿತಾ ಹಿರೇಮಠ ಮೊದಲಾದವರಿದ್ದರು. ಎ.ಕೆ. ಭೂಸನೂರಮಠ ಸ್ವಾಗತಿಸಿದರು. ಉಮಾಮಹೇಶ್ವರಿ ಕರಬಿಸ್ಟಿ ನಿರೂಪಿಸಿದರು. ಎನ್‌. ಎಸ್‌. ಸಜ್ಜನಶೆಟ್ಟರ ವಂದಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next