Advertisement

ಬೆದರಿಕೆಗೆ ಹೆದರುವುದಿಲ್ಲ,ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧೆ ನಿಶ್ಚಿತ: ಮುತಾಲಿಕ್

07:41 PM Nov 04, 2022 | Team Udayavani |

ರಬಕವಿ-ಬನಹಟ್ಟಿ: ಯಾವ ಜೀವ ಬೆದರಿಕೆ ಕರೆಗಳಿಗೂ ಹೆದರೋ ಜಾಯಮಾನ ನನ್ನದಲ್ಲ. ಇದೇನು ಹೊಸದಲ್ಲ. ಹಿಂದುತ್ವದ ವೃತ ನಿರಂತರವಾಗಿ ನಡೆಯುತ್ತಿರುತ್ತದೆ. ಶ್ರೀರಾಮಸೇನೆಯ ಸಂಘಟನೆಯ ಕಾರ್ಯಗಳು ನಿಲ್ಲಿಸುವ ಹುನ್ನಾರ ಯಾರಿಂದಲೂ ಸಾಧ್ಯವಿಲ್ಲವೆಂದು ಸಂಘಟನೆ ಸಂಸ್ಥಾಪಕ ಪ್ರಮೋದ ಮುತಾಲಿಕ್ ಹೇಳಿದ್ದಾರೆ.

Advertisement

ಬನಹಟ್ಟಿಯಲ್ಲಿ ಮಾತನಾಡಿದ ಅವರು, ಇಸ್ಲಾಂನಲ್ಲಿ ಮಾಂಸದ ಪ್ರಾಣಿಗಳನ್ನು ಕೊಯ್ಯುವ ವಿಧಾನವನ್ನ ಹಲಾಲ್ ಕಟ್ ಎಂಬ ಪದಬಳಕೆಯಿಂದ ಮುಸ್ಲಿಮರು ಪ್ರೇರೇಪಿಸುತ್ತಿದ್ದಾರೆ. ಚೀನ ಹಲಾಲ್ ಮಾಂಸವನ್ನು ನಿಷೇಧಿಸಿದೆ. ಈ ಹಿನ್ನಲೆಯಲ್ಲಿ ದೇಶದಲ್ಲಿಯೂ ಸಂಪೂರ್ಣ ನಿಷೇಧಿಸಬೇಕು. ಇದೇ ಹಲಾಲ್ ಸರ್ಟಿಫಿಕೆಟ್ ಬಳಕೆಯಿಂದ ಹಲವಾರು ಕಂಪನಿಗಳು ಪ್ರಯೋಜನ ಪಡೆದು ಆರ್ಥಿಕವಾಗಿ ಬೆಳೆದು ಭಯೋತ್ಪಾದನೆಗೆ ಉಪಯೋಗಿಸುತ್ತಿವೆ. ಕೇಂದ್ರ ಮತ್ತು ರಾಜ್ಯ ಸರ್ಕಾರ ಕೂಡಲೇ ದೇಶಾದ್ಯಂತ ಚಿಗುರುವ ಮುನ್ನವೇ ಚಿವುಟಿ ಹಾಕಬೇಕೆಂದು ಎಚ್ಚರಿಸಿದರು.

ಹಿಂದೂ ಶಾಸಕರಿಗೆ ಧಮ್ಕಿ, ಜೀವ ತೆಗೆಯುವ ಕೃತ್ಯ ಸರಿಯಲ್ಲ
ಶಾಸಕ ರೇಣುಕಾಚಾರ್ಯ ಕುಟುಂಬದಲ್ಲೊಂದು ಕರಾಳ ಘಟನೆ ನಡೆದು ತಮ್ಮನ ಮಗ ಚಂದ್ರುರನ್ನು ಕೊಲೆ ಮಾಡಿದ ಆರೋಪಿಗಳನ್ನು ತೀವ್ರ ಶೋಧ ನಡೆಸಬೇಕು. ಹಿಂದು ಶಾಸಕರ ಮನೆಗಳನ್ನೇ ಟಾರ್ಗೆಟ್ ಮಾಡುತ್ತಿರುವ ಗೂಂಡಾಗಳನ್ನು ಬಂಧಿಸಬೇಕೆಂದರು.

ಸ್ಪರ್ಧೆ ನಿಶ್ಚಿತ
ಬರುವ ವಿಧಾನಸಭಾ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ರಾಜ್ಯದಲ್ಲಿ ಯಾವುದಾದರೂ ಕ್ಷೇತ್ರದಿಂದ ಸ್ಪರ್ಧೆ ನಿಶ್ಚಿತವೆಂದು ಸ್ಪಷ್ಟಪಡಿಸಿದರು. ರಾಜ್ಯದ ತೇರದಾಳ, ಪುತ್ತೂರು, ಕಾರ್ಕಳ, ಧಾರವಾಡ, ಹಳಿಯಾಳ, ಜಮಖಂಡಿ ಸೇರಿದಂತೆ 8-10 ಕಡೆಗಳಿಂದ ಕಾರ್ಯಕರ್ತರ ಹಾಗೂ ಮತದಾರರ ಒತ್ತಾಯವಾಗಿದ್ದು, ಬಿಜೆಪಿಯಿಂದ ಭಿಕ್ಷೆ ಬೇಡುವ ಪ್ರಮೇಯವಿಲ್ಲ. ಮುತಾಲಿಕ್ ಏಕಾಂಗಿಯಾಗಿ ಕಾರ್ಯಕರ್ತರ ವಿಶ್ವಾಸದೊಂದಿಗೆ ಚುನಾವಣೆ ನಿಂತು ಬಿಜೆಪಿಗೇ ಬೆಂಬಲಿಸಿ, ಬಿಜೆಪಿಯಲ್ಲಿ ದಾರಿ ತಪ್ಪಿದವರನ್ನು ತಿದ್ದು ಕಾರ್ಯ ನಡೆಸಿ, ವಿಮುಖವಾಗಿರುವ ಬಿಜೆಪಿಯನ್ನು ಒಗ್ಗೂಡಿಸುವ ಕಾರ್ಯ ನಡೆಸಲಾಗುವುದು. ಅಲ್ಲದೆ ರಾಜ್ಯದ 25 ಕಡೆಗಳಲ್ಲಿ ಸಂಘಟನೆಯ ಮುಖಂಡರು ಸ್ಪರ್ಧೆಗೆ ತಯಾರಿ ನಡೆಸಿದ್ದು, ಇವರ‍್ಯಾರೂ ಬಿಜೆಪಿಯಿಂದ ಸ್ಪರ್ಧೆ ನಡೆಸುವುದಿಲ್ಲ ಬದಲಾಗಿ ಪಕ್ಷೇತರರಾಗಿಯೇ ಕಣಕ್ಕಿಳಿಯುವದು ನಿಶ್ಚಿತವೆಂದರು.

ಬ್ರಿಜ್‌ಮೋಹನ ಡಾಗಾ, ರವಿ ಕಾಮಗೊಂಡ, ಬಸಯ್ಯ ಹಿರೇಮಠ, ಬಸವರಾಜ ಗಾಯಕವಾಡ ಸೇರಿದಂತೆ ಅನೇಕರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next