ಮುಂಬೈ: ಹಣಕಾಸು ವ್ಯವಸ್ಥೆ ಸ್ಥಿರವಾಗಿರಬೇಕೆಂದರೆ ಆಸ್ತಿ ಮತ್ತು ಬಾಧ್ಯತೆಯ ನಡುವೆ ಅಸಮಾನತೆ ಹೆಚ್ಚಾಗದಂತೆ ನೋಡಿಕೊಳ್ಳಿ ಎಂದು ಬ್ಯಾಂಕುಗಳಿಗೆ ಭಾರತೀಯ ರಿಸರ್ವ್ ಬ್ಯಾಂಕ್ ಗವರ್ನರ್ ಶಕ್ತಿಕಾಂತ್ ದಾಸ್ ಸೂಚನೆ ನೀಡಿದ್ದಾರೆ.
ಅಲ್ಲದೆ, ಅಮೆರಿಕದ ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ಉಂಟಾಗಿರುವ ಬಿಕ್ಕಟ್ಟಿಗೆ ಈ ರೀತಿಯ ಅಸಮಾನತೆಯೇ ಕಾರಣವಾಗಿರಬಹುದು ಎಂದೂ ಅವರು ಅಭಿಪ್ರಾಯಪಟ್ಟಿದ್ದಾರೆ.
ಶುಕ್ರವಾರ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ಭಾರತದ ಹಣಕಾಸು ವಲಯ ಸ್ಥಿರವಾಗಿದೆ. ನಾವು ಯಾವುದೇ ರೀತಿಯಲ್ಲೂ ಭಯಪಡಬೇಕಾಗಿಲ್ಲ ಎಂದಿದ್ದಾರೆ. ಜತೆಗೆ, ಯಾವುದೇ ಹಣಕಾಸು ವ್ಯವಸ್ಥೆಗೆ ಖಾಸಗಿ ಕ್ರಿಪ್ಟೋಕರೆನ್ಸಿಗಳು ಎಂಥ ಅಪಾಯ ತಂದೊಡ್ಡಬಲ್ಲದು ಎಂಬುದಕ್ಕೂ ಅಮೆರಿಕದಲ್ಲಿನ ಬಿಕ್ಕಟ್ಟೇ ಸಾಕ್ಷಿ ಎಂದೂ ದಾಸ್ ಹೇಳಿದ್ದಾರೆ.