Advertisement

ಮಡಿವಾಳ ಸಮುದಾಯ ಎಸ್‌ಸಿಗೆ ಸೇರಿಸಲು ಒತ್ತಾಯಿಸಿ ಕತ್ತೆ ಮೆರವಣಿಗೆ

04:44 PM Oct 10, 2017 | Team Udayavani |

ಸುರಪುರ: ಮಡಿವಾಳ ಸಮುದಾಯವನ್ನು ಪರಿಶಿಷ್ಟ ಜಾತಿಗೆ ಸೇರಿಸಲು ಒತ್ತಾಯಿಸಿ ತಾಲೂಕು ಮಡಿವಾಳ ಸಂಘ ಕತ್ತೆಗಳ
ಮೆರವಣಿಗೆ ಮಾಡುವ ಮೂಲಕ ಪ್ರತಿಭಟನೆ ನಡೆಸಿತು. ಈ ಕುರಿತು ತಹಶೀಲ್ದಾರ ಮುಖಾಂತರ ಸಿಎಂಗೆ ಮನವಿ ಸಲ್ಲಿಸಿ, ಮಡಿವಾಳ ಸಮುದಾಯವನ್ನು ಪರಿಶಿಷ್ಟ ಜಾತಿ ಪಟ್ಟಿಗೆ ಸೇರಿಸಲು ಕೇಂದ್ರ ಸರಕಾರಕ್ಕೆ ಶೀಘ್ರ ಶಿಫಾರಸ್ಸು ಮಾಡಬೇಕು ಎಂದು ಆಗ್ರಹಿಸಿದರು. ರಾಜ್ಯದಲ್ಲಿ 15ರಿಂದ 18 ಲಕ್ಷ ಜನಸಂಖ್ಯೆ ಹೊಂದಿರುವ ಮಡಿವಾಳ ಸಮುದಾಯ ಹಿಂದುಳಿದ ಜನಾಂಗದಲ್ಲಿ ಶೈಕ್ಷಣಿಕ, ಸಾಮಾಜಿಕ, ಆರ್ಥಿಕ ಹಾಗೂ ರಾಜಕೀಯವಾಗಿ ಶೋಷಣೆಗೊಳಪಟ್ಟಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

Advertisement

ಈ ಕುರಿತು ಕರ್ನಾಟಕ ರಾಜ್ಯದಲ್ಲಿ ಮಡಿವಾಳ ಸಂಘ ಸ್ಥಾಪಿಸಿ, ಈ ಹಿಂದೆ ಸರಕಾರಕ್ಕೆ ಒತ್ತಾಯಿಸಲಾಗಿದೆ. ಆದರೂ ಸರಕಾರ ಯಾವುದೇ ಕ್ರಮ ಕೈಗೊಳ್ಳದೆ ಇರುವುದು ವಿಷಾಧನಿಯ. ಡಾ| ಅನ್ನಪೂರ್ಣಮ್ಮ ವರದಿ ಅನುಸಾರ ಇತರೆ ರಾಜ್ಯಗಳಲ್ಲಿ ಕೂಡಾ ಮಡಿವಾಳ ಸಮುದಾಯವನ್ನು ಶೀಘ್ರ ಪರಿಶಿಷ್ಟ ಜಾತಿಗೆ ಸೇರ್ಪಡೆಗೊಳಿಸಲು ಕೇಂದ್ರ ಸರಕಾರಕ್ಕೆ ಶಿಫಾರಸ್ಸು ಮಾಡಬೇಕೆಂದು
ಆಗ್ರಹಿಸಿದ್ದಾರೆ.

ಮಡಿವಾಳ ಸಮುದಾಯದ ತಾಲೂಕು ಅಧ್ಯಕ್ಷ ಗುರಣ್ಣ ಹಗರಟಿಗಿ, ಚಂದ್ರಶೇಖರ ಗೋಗಿ, ಚಂದ್ರಶೇಖರ ಹುಣಸಗಿ, ಮೌನೇಶ ಆಲ್ದಾಳ, ಹಣಮಂತ ಚಂದನಕೇರಿ, ಬಸವರಾಜ ಬೀರನೂರ, ಭೀಮಣ್ಣ ಚಂದನಕೇರಿ, ಹಣಮಂತ ಚಂದಲಾಪುರ, ಮಡಿವಾಳಪ್ಪ, ಶೇಖರ, ಮೌನೇಶ, ದಯಾನಂದ, ದೇವರಾಜ, ಯಂಕಪ್ಪ ಗುರುರಾಜ, ಅಪ್ಪಣ್ಣ, ನಾಗಪ್ಪ, ಬಾಬು ಬಲಶಟ್ಟಿಹಾಳ, ಬಸವರಾಜ, ಮರೆಪ್ಪ ಹಾಗೂ ಸಮುದಾಯದ ನೂರಾರು ಜನ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next