Advertisement

ಇದೇ ಮೊದಲ ಬಾರಿಗೆ ಮಾಸ್ಕ್ ಧರಿಸಿದ ಡೊನಾಲ್ಡ್ ಟ್ರಂಪ್: ಸೇನಾ ಆಸ್ಪತ್ರೆಗೆ ಭೇಟಿ !

11:40 AM Jul 12, 2020 | Mithun PG |

ವಾಷಿಂಗ್ಟನ್: ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇದೇ ಮೊದಲ ಬಾರಿಗೆ ಮಾಸ್ಕ್ ಧರಿಸಿ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದಾರೆ. ಕೋವಿಡ್ ವೈರಸ್ ವ್ಯಾಪಕವಾಗಿ ಹರಡುತ್ತಿರುವುದರಿಂದ ಆರೋಗ್ಯ ಅಧಿಕಾರಿಗಳ ಸೂಚನೆಯೆ ಮೇರೆಗೆ ಶನಿವಾರ ಮಿಲಿಟರಿ ಆಸ್ಪತ್ರೆಯೊಂದಕ್ಕೆ ಭೇಟಿ ನೀಡುವಾಗಿ ಮಾಸ್ಕ್ ಧರಿಸಿದ್ದರು.

Advertisement

ಗಾಯಗೊಂಡ ಯೋಧರನ್ನು ಭೇಟಿಯಾಗಲು ವಾಷಿಂಗ್ಟನ್ ಹೊರವಲಯದ ವಾಲ್ಟರ್ ರರೀಡ್ ಮಿಲಿಟರಿ ಆಸ್ಪತ್ರೆಗೆ ಭೇಟಿ  ನೀಡುವಾಗಿ ಫೇಸ್ ಮಾಸ್ಕ್ ಹಾಕಿಕೊಂಡಿದ್ದು ಮಾತ್ರವಲ್ಲದೆ ಮಾಸ್ಕ್ ಮೇಲೆ ಅಮೆರಿಕ ಅಧ್ಯಕ್ಷರ ಮುದ್ರೆಯನ್ನು ಕೂಡ ಹಾಕಲಾಗಿತ್ತು.

ನಂತರ ವೈಟ್ ಹೌಸ್ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಟ್ರಂಪ್ ‘ಆಸ್ಪತ್ರೆಯಲ್ಲಿರವಾಗ ಮಾಸ್ಕ್ ಧರಿಸುವಾಗ ಅದೊಂದು ದೊಡ್ಡ ವಿಷಯ ಎಂದು ನಾನು ಭಾವಿಸುತ್ತೇನೆ. ನಾನೂ ಎಂದಿಗೂ ಮಾಸ್ಕ್ ವಿರುದ್ಧ ಇರಲಿಲ್ಲ. ಆದರೆ ಅದಕ್ಕೆಂದೆ ಪ್ರತ್ಯೇಕ ಸಮಯ ಮತ್ತು ಸ್ಥಳವಿದೆ ಎಂದು ನಾನು ನಂಬುತ್ತೇನೆ ಎಂದಿದ್ದಾರೆ.

ಮಾರ್ಚ್ ನಿಂದ ಅಮೆರಿಕಾದಲ್ಲಿ ಕೊವಿಡ್ ಸೋಂಕು ವ್ಯಾಪಕವಾಗಿ ಉಲ್ಬಣಗೊಂಡಾಗಲೂ ಟ್ರಂಪ್ ಮಾಸ್ಕ್ ಧರಿಸಿರಲಿಲ್ಲ. ಅನೇಕರು ಮಾಸ್ಕ್ ಧರಿಸುವಂತೆ ಸಲಹೆ ನಿಡಿದ್ದಾಗಲೂ ಅದನ್ನು ತಿರಸ್ಕರಿಸಿದ್ದರು. ಆದರೇ ಇದೀಗ ಅಮೆರಿಕಾದ ದಕ್ಷಿಣ ಮತ್ತು ಪಶ್ಚಿಮ ರಾಜ್ಯಗಳಲ್ಲಿ ಸೊಂಕು ತೀವ್ರವಾಗಿ ಹಬ್ಬುತ್ತಿದೆ. ಮಾತ್ರವಲ್ಲದೆ ಅಮೆರಿಕದಾದ್ಯಂತ ಸುಮಾರು 32 ಲಕ್ಷಕ್ಕಿಂತ ಹೆಚ್ಚು ಜನರು ವೈರಾಣುವಿಗೆ ಭಾದಿತರಾಗಿದ್ದಾರೆ.

Advertisement

ಅದಾಗ್ಯೂ ಸುದ್ದಿಗೋಷ್ಟಿಗಳೂ ಸೇರಿದಂತೆ ಸಾರ್ವಜನಿಕ ಕಾರ್ಯಕ್ರಮಗಳು ಮತ್ತು ಇತರಡೆಗಳಲ್ಲಿ ಟ್ರಂಪ್ ಮಾಸ್ಕ್ ಧರಿಸಿಲು ಹಿಂದೇಟು ಹಾಕಿದ್ದರು. ಮಾಸ್ಕ್ ಧರಿಸುವುದರಿಂದ ದುರ್ಬಲನಂತೆ ಕಾಣುತ್ತೇನೆ ಎಂಬ ಭಯದಿಂದ ಹಿಂಜರಿಯುತ್ತಿದ್ದರು ಎಂದು ಮಾಧ್ಯಮದ ವರದಿ ತಿಳಿಸಿದೆ. ಟ್ರಂಪ್ ಮಾಸ್ಕ್ ಧರಿಸದಿರುವುದು ರಾಜಕೀಯ ಹಗ್ಗಜಗ್ಗಾಟಕ್ಕೂ ಕಾರಣವಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next