Advertisement

ಮೊದಲ ಬಾರಿಗೆ ಮಾಸ್ಕ್ ಧರಿಸಿದ ಡೊನಾಲ್ಡ್‌ ಟ್ರಂಪ್‌

12:53 PM Jul 13, 2020 | sudhir |

ವಾಷಿಂಗ್ಟನ್‌: ಇಷ್ಟು ದಿವಸ ಮಾಸ್ಕ್ ಧರಿಸುವುದಿಲ್ಲ ಎಂದು ಹಠ ಹಿಡಿದಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌, ಇದೇ ಮೊದಲ ಬಾರಿಗೆ ಸಾರ್ವಜನಿಕವಾಗಿ ಮುಖಕ್ಕೆ ಮಾಸ್ಕ್ ಧರಿಸಿದರು.

Advertisement

ಮೇರಿಲ್ಯಾಂಡ್‌ನ‌ ಬೆಥೆಸ್ಡಾದಲ್ಲಿರುವ ಮಿಲಿಟರಿ ಆಸ್ಪತ್ರೆಗೆ ಶನಿವಾರ ಭೇಟಿ ನೀಡಿದ ಅವರು, ಅಲ್ಲಿ ಗಾಯಗೊಂಡ ಸೈನಿಕರು ಮತ್ತು ಮುಂಚೂಣಿಯ ಆರೋಗ್ಯ ಕಾರ್ಯಕರ್ತರನ್ನು ಭೇಟಿ ಮಾಡಿದರು. ಈ ವೇಳೆ ಅವರು ಮುಖಕ್ಕೆ ಕಪ್ಪು ಬಣ್ಣದ ಮಾಸ್ಕ್ ಧರಿಸಿದ್ದರು. ಅವರ ಜತೆಗಿದ್ದ ಅಧಿಕಾರಿಗಳೂ ಮುಖಕ್ಕೆ ಮಾಸ್ಕ್ ಧರಿಸಿದ್ದರು.

ಆಸ್ಪತ್ರೆಗೆ ಭೇಟಿ ನೀಡುವುದಕ್ಕೂ ಮೊದಲು ಸುದ್ದಿಗಾರರ ಜತೆ ಮಾತನಾಡಿ, “ಮಾಸ್ಕ್ ಧರಿಸುವುದು ದೊಡ್ಡ ವಿಷಯ ಎಂದು ನಾನು ಭಾವಿಸುತ್ತೇನೆ. ನಾನು ಎಂದಿಗೂ ಮಾಸ್ಕ್ ವಿರುದ್ಧ ಇರಲಿಲ್ಲ. ಆದರೆ ಅದಕ್ಕೆ ಸಮಯ ಮತ್ತು ಸ್ಥಳವಿದೆ. ಸ್ಪತ್ರೆಗೆ ಭೇಟಿ ನೀಡಿದಾಗ, ಸೈನಿಕರ ಯೋಗಕ್ಷೇಮ ವಿಚಾರಿಸುವ ವೇಳೆ ಮಾಸ್ಕ್ ಧರಿಸುವುದು ಒಳ್ಳೆಯದು ಎನ್ನುವುದು ನನ್ನ ಭಾವನೆ’ ಎಂದರು. ಕೋವಿಡ್ ವೈರಸ್‌ ಅಮೆರಿಕಕ್ಕೆ ಕಾಲಿಟ್ಟ ಅನಂತರ ಇದೇ ಮೊದಲ ಬಾರಿಗೆ ಅವರು ಮಾಸ್ಕ್ ಧರಿಸಿದ್ದಾರೆ. ಇತ್ತೀಚಿನ ದಿನಗಳಲ್ಲಿ ಅವರ ಸಂಪರ್ಕಕ್ಕೆ ಬಂದ ಕೆಲವರಲ್ಲಿ ಕೊರೊನಾ ದೃಢಪಟ್ಟಿದೆ.

Advertisement

Udayavani is now on Telegram. Click here to join our channel and stay updated with the latest news.

Next